ಶನಿವಾರ, ಮೇ 8, 2021
19 °C

ವಿವಾದ ತಂಡದ ಮೇಲೆ ಪರಿಣಾಮ ಬೀರಿಲ್ಲ: ದೋನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಸ್ಪಾಟ್ ಫಿಕ್ಸಿಂಗ್ ವಿವಾದ ಭುಗಿಲೆದ್ದಾಗಿನಿಂದ ಬಿಸಿಸಿಐನಲ್ಲಿ ಆಗುತ್ತಿರುವ ಬದಲಾವಣೆಗಳು ತಂಡದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅಭಿಪ್ರಾಯ ಪಟ್ಟಿದ್ದಾರೆ.`ಆಟಗಾರರಾಗಿ ನಾವು ಮಾಡಲು ಸಾಧ್ಯವಿರುವ ಕೆಲಸವನ್ನು ಮಾತ್ರ ನಿರ್ವಹಿಸಬಲ್ಲೆವು. ನಮಗಿಲ್ಲಿ ಓದಲು ದಿನಪ್ರತಿಕೆಗಳು ಸಿಗುವುದಿಲ್ಲ. ಯಾವುದೇ ಚಾನೆಲ್‌ಗಳಿಲ್ಲ. ಹೀಗಾಗಿ ತೊಂದರೆಯಾಗಿಲ್ಲ. ನಾವು ಆಟದ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ' ಎಂದು ದೋನಿ ನುಡಿದಿದ್ದಾರೆ.`ಮೋಡ ಮುಸುಕಿದ ವಾತಾವರಣವಿದ್ದು, ನಾಲ್ವರು ವೇಗಿಗಳನ್ನು ಕಣಕ್ಕಿಳಿಸಲು ಅನುಕೂಲಕರವಾಗಿದೆ. ಆದರೆ ಅದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ' ಎಂದಿದ್ದಾರೆ.

ಓವಲ್ ಕ್ರೀಡಾಂಗಣ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ ಎಂದು ದೋನಿ ಅಂದಾಜಿಸಿದ್ದು, ಮಂಗಳವಾರದ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಅಶ್ವಿನ್ ನಿರ್ಣಾಯಕ ಪಾತ್ರವಹಿಸುವ ಸಾಧ್ಯತೆಗಳಿವೆ.ಮಂಗಳವಾರ ಓವಲ್‌ನಲ್ಲಿ ದೋನಿ ಪಡೆ, ವೆಸ್ಟ್‌ಇಂಡೀಸ್ ತಂಡವನ್ನು ಎದುರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.