ಮಂಗಳವಾರ, ಜನವರಿ 28, 2020
17 °C

ವಿವಾದ ಸೃಷ್ಟಿಸಿದ ಮಿತ್ತಲ್‌ ದುಬಾರಿ ಮದುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ಸ್ಪೇನ್‌ನ ಬಾರ್ಸಿ­ಲೋನಾದಲ್ಲಿ ಇತ್ತೀಚೆಗೆ ನಡೆದ ವಿಶ್ವ ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಎನ್‌. ಮಿತ್ತಲ್‌  ಸಹೋದರನ ಪುತ್ರಿಯ 500 ಕೋಟಿ ರೂಪಾಯಿ ವೆಚ್ಚದ ವೈಭವೋಪೇತ ವಿವಾಹ ವಿವಾದ ಹುಟ್ಟು ಹಾಕಿದೆ.ಲಕ್ಷ್ಮಿ ಮಿತ್ತಲ್‌ ಕಿರಿಯ ಸಹೋದರ ಪ್ರಮೋದ್‌ ಮಿತ್ತಲ್‌ ಅವರ ಪುತ್ರಿ ಸೃಷ್ಟಿ ಅವರ ಮದುವೆ ಲಂಡನ್‌ ಮೂಲದ  ಗುಲ್‌ರಾಜ್‌ ಬೆಹ್ಲ್‌ ಜೊತೆ ಬಾರ್ಸಿ­ಲೋನಾದ ರಾಷ್ಟ್ರೀಯ ವಸ್ತು ಸಂಗ್ರ­ಹಾಲಯ ಆವರಣದಲ್ಲಿ ಮೂರು ದಿನ ಅದ್ದೂರಿಯಿಂದ ನೆರವೇರಿತ್ತು.ವಿಶ್ವದ ವೈಭವೋಪೇತ ಮದುವೆಗಳಲ್ಲಿ ಐದನೇ ಸ್ಥಾನ ಪಡೆದ ಈ ಮದುವೆ ಯಂದು  ಕಟಲಾನ್‌ ಕಲಾ ಸಂಗ್ರ­ಹಾಲ­ಯಕ್ಕೆ ಸಾರ್ವಜನಿಕರ ಪ್ರವೇ­ಶ­ ನಿಷೇ­ಧಿ­ಸಿದ್ದು ಈಗ ವಿವಾದಕ್ಕೆ ಕಾರಣ­ವಾಗಿದೆ.ಸೋಷಿಯಲಿಸ್ಟ್ ಪಕ್ಷದ ನಾಯಕ ಜೋರ್ಡಿ ಮಾರ್ಟಿ, ಖಾಸಗಿ ಸಮಾ­ರಂಭಕ್ಕಾಗಿ ಸಾರ್ವಜನಿಕ ಸ್ಥಳವನ್ನು ಬಾಡಿಗೆ ನೀಡಿದ ನಗರ ಪಾಲಿಕೆ ಕ್ರಮ­ವನ್ನು ತೀವ್ರ ತರಾಟೆಗೆ ತೆಗೆದು­ಕೊಂಡಿ­ದ್ದಾರೆ. ಮದುವೆಗೆ ಸ್ಥಳ ನೀಡಿ­ರುವು­ದ­ನ್ನು ಮೇಯರ್‌ ಕ್ಸೇವಿಯರ್‌ ಟ್ರಯಾಸ್‌ ಸಮರ್ಥಿಸಿ­ಕೊಂಡಿದ್ದಾರೆ.  ಆರ್ಥಿಕ ಹಿಂಜ­ರಿತ­ದ ದಿನದಲ್ಲಿ  ಬಾಡಿ­ಗೆ ನೀಡಿರು­ವುದು ಸರಿ­ ಎಂದಿದ್ದಾರೆ.ಬಾರ್ಸಿಲೋನಾವೇ ಏಕೆ?: ಬಾರ್ಸಿ ಲೋನಾ ಮತ್ತು   ಅಂಟೋನಿ ಗೌಡಿ  ಅವರ ಕಟಲಾನ ಕಲೆ­ಯಿಂದ ಪ್ರಭಾವಿ­ತರಾಗಿ ಪ್ರಮೋದ್‌  ಮಗಳ ಮದು­ವೆಗೆ ಈ ಸ್ಥಳ ಆಯ್ಕೆ ಮಾಡಿದ್ದರು. ದುಬಾರಿ ಮದುವೆ: ಫೋಬ್ಸ್‌ ಪ್ರಕಾರ 1981ರಲ್ಲಿ ನಡೆದ ಅಬು­ಧಾಬಿಯ  ರಾಜ ಮೊಹಮ್ಮದ್‌ ಜಾಯೇದ್‌ –  ಸಲ್ಮಾ  ಮದುವೆ  ವಿಶ್ವದ ದುಬಾರಿ ವಿವಾಹದ ಮೊದಲ ಸ್ಥಾನದಲ್ಲಿದೆ.     ಮದುವೆಗಾಗಿ ಆ ದಿನಗಳಲ್ಲಿಯೇ  643 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.ಅದ್ದೂರಿ ಮದುವೆಯ ಖಯಾಲಿ...!

ಮಿತ್ತಲ್‌ ಕುಟುಂಬ ಅದ್ದೂರಿ ಮದುವೆಗಳಿಗೆ ಹೆಸರಾಗಿದೆ. ಇದುವರೆಗೂ ಮಿತ್ತಲ್‌ ಕುಟುಂಬದಲ್ಲಿ ನಡೆದಿರುವ ಮದುವೆಗಳಿಗೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದೆ.

  2004ರಲ್ಲಿ ನಡೆದ ಲಕ್ಷ್ಮಿ ಮಿತ್ತಲ್‌  ಅವರ ಪುತ್ರಿ ವನಿಷಾ ಮತ್ತು ಕೋಟ್ಯ­ಧೀಶ ಉದ್ಯಮಿ ಅಮಿತ್‌ ಭಾಟಿಯಾ ಮದುವೆಗೆ 243 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. 1998ರಲ್ಲಿ ಕೋಲ್ಕತ್ತದ ಐತಿಹಾಸಿಕ ವಿಕ್ಟೋರಿಯಾ ಮೆಮೋರಿಯಲ್‌ನಲ್ಲಿ ನಡೆದ ಪುತ್ರ ಆದಿತ್ಯ ವಿವಾಹಕ್ಕೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಈಗ ಮೂರು ದಿನಗಳ ಕಾಲ ನಡೆದ ಸೃಷ್ಟಿ ಮದುವೆ ವಿಶ್ವದ ಐದನೇ ದುಬಾರಿ ಮದುವೆ ಎಂಬ ದಾಖಲೆ ಬರೆದಿದೆ.

ಪ್ರತಿಕ್ರಿಯಿಸಿ (+)