ವಿವಾಹೇತರ ಸಂಬಂಧ: ಮಹಿಳೆ ಹತ್ಯೆ

7

ವಿವಾಹೇತರ ಸಂಬಂಧ: ಮಹಿಳೆ ಹತ್ಯೆ

Published:
Updated:

ಇಸ್ಲಾಮಾಬಾದ್‌ (ಪಿಟಿಐ): ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾದ ಮಹಿಳೆಯೊಬ್ಬರನ್ನು ಬುಡಕಟ್ಟು ಪಂಚಾಯ್ತಿ (ಜಿರ್ಗಾ) ಆದೇಶದ ಮೇರೆಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಖೈಬರ್ ಪಂಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ. ಈ ಮಹಿಳೆ ಬೆಂಬಲಕ್ಕೆ ಇದ್ದ ಇಬ್ಬರು ಮಹಿಳೆಯರನ್ನು ಕೂಡ ಕೊಲೆ ಮಾಡಲಾಗಿದೆ.ಸಾದಿಯಾ ಎಂಬ ಮಹಿಳೆ (22) ಮದುವೆಯಾಗಿ ಎರಡು ವರ್ಷಗಳ ಬಳಿಕ ಇನ್ನೊಬ್ಬನ ಜತೆ ಸ್ವಾತ್ ಕಣಿವೆಗೆ ಓಡಿಹೋಗಿ­ದ್ದರೆಂದು ಆರೋಪಿಸಲಾಗಿತ್ತು.  ಸ್ವಾತ್‌ನಲ್ಲಿ ಈಕೆಯನ್ನು ಪತ್ತೆ ಮಾಡಿದ ಪೊಲೀಸರು ಕುಟುಂಬದವರಿಗೆ ಒಪ್ಪಿಸಿದರು. ಈ ನಡುವೆ ಬುಡಕಟ್ಟು ಪಂಚಾಯ್ತಿ, ಭಾನುವಾರ ರಾತ್ರಿ ಸಭೆ ಸೇರಿ ಈಕೆಯನ್ನು ತಪ್ಪಿತಸ್ಥೆ ಎಂದು ಘೋಷಿಸಿತು. ನಂತರ ಬುಡಕಟ್ಟು ವಾಸಿಗಳು ಈಕೆಯನ್ನು ಗುಂಡಿಟ್ಟು ಹತ್ಯೆ ಮಾಡಿದರು. ಈಕೆ ಪಲಾಯನ ಮಾಡಲು ನೆರವು ನೀಡಿದ್ದ ಇನ್ನಿಬ್ಬರು ಮಹಿಳೆಯರನ್ನೂ ಕೊಲೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry