ವಿವಾಹ-ದುಂದುವೆಚ್ಚಕ್ಕೆ ಕಡಿವಾಣ

7

ವಿವಾಹ-ದುಂದುವೆಚ್ಚಕ್ಕೆ ಕಡಿವಾಣ

Published:
Updated:

ವಿಜಯಪುರ: ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಸಾಲದ ಹೊರೆಯಿಂದ ಮುಕ್ತವಾಗಬಹುದು ಎಂದು ಶಾಸಕ ಕೆ.ವೆಂಕಟಸ್ವಾಮಿ ತಿಳಿಸಿದರು.ಪಟ್ಟಣ ಸಮೀಪದ ಚೌಡಪ್ಪನ ಗ್ರಾಮದಲ್ಲಿ ಇತ್ತೀಚೆಗೆ ಅಶೋಕ ಬುದ್ಧ ವಿಹಾರದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 56 ನೇ ಬೌದ್ಧದೀಕ್ಷಾ ಸಮಾರಂಭದ ಅಂಗವಾಗಿ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಮಾರಂಭದಲ್ಲಿ ಬೆಂ.ಗ್ರಾ. ಜಿಲ್ಲಾ ಪಂಚಾಯತ್ ಅಧ್ಯಕ್ಷ  ನಾರಾಯಣ ಸ್ವಾಮಿ, ಸದಸ್ಯ ಬಿ.ರಾಜಣ್ಣ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಜಿ.ಲಕ್ಷ್ಮೀನಾರಾಯಣ್, ಮಾಜಿ ಶಾಸಕ ಮುನಿನರಸಿಂಹಯ್ಯ, ಬುದ್ಧ ವಿಹಾರ ಸಂಸ್ಥಾಪಕ ಲೋಕೇಶ್, ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry