ವಿವಾಹ ಬಂಧನದಲ್ಲಿ ಸೈಫ್- ಕರೀನಾ

7

ವಿವಾಹ ಬಂಧನದಲ್ಲಿ ಸೈಫ್- ಕರೀನಾ

Published:
Updated:

ಮುಂಬೈ (ಪಿಟಿಐ): ಐದು ವರ್ಷಗಳಿಂದ ಸಂಗಾತಿಗಳಾಗಿದ್ದ ಬಾಲಿವುಡ್ ಚಿತ್ರತಾರೆಯರಾದ ಕರೀನಾ ಕಪೂರ್ (32) ಹಾಗೂ ಸೈಫ್ ಅಲಿ ಖಾನ್ (42) ಮಂಗಳವಾರ ಅಧಿಕೃತವಾಗಿ ವಿವಾಹ ಬಂಧನಕ್ಕೆ ಒಳಗಾದರು.ಸೈಫ್ ಅವರ ಬಾಂದ್ರಾ ನಿವಾಸದಲ್ಲಿ ಇಬ್ಬರ ವಿವಾಹ ನೋಂದಣಿ ಮಾಡಲಾಯಿತು. ಇದಕ್ಕೆ ಕರೀನಾ ತಂದೆ ರಣಧೀರ್ ಕಪೂರ್, ತಾಯಿ ಬಬಿತಾ ಹಾಗೂ ಸೈಫ್ ಅವರ ತಾಯಿ ಶರ್ಮಿಳಾ ಟ್ಯಾಗೋರ್ ಸಾಕ್ಷಿಗಳಾಗಿದ್ದರು ಎಂದು ನೋಂದಣಿ ಅಧಿಕಾರಿ ಸುರೇಖಾ ರಮೇಶ್ ಸುದ್ದಿಸಂಸ್ಥೆಗೆ ತಿಳಿಸಿದರು.2007ರಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಇಬ್ಬರೂ ಹತ್ತಿರದ ಸಂಬಂಧಿಗಳ ಸಮ್ಮುಖದಲ್ಲಿ ಜೀವನ ಸಂಗಾತಿಗಳಾದರು.ಹಸಿರು ಬಣ್ಣದ ಸಲ್ವಾರ್ ಕುರ್ತಾ ಧರಿಸಿದ್ದ ಕರೀನಾ ಕಪೂರ್ ಕೆಂಪು ಬಣ್ಣದ ದುಪಟ್ಟಾ ಹಾಕಿಕೊಂಡಿದ್ದರು. ಕೆಂಪು ಬಣ್ಣದ ಬಳೆ ಹಾಕಿಕೊಂಡು ಕೂದಲು ಇಳಿಬಿಟ್ಟಿದ್ದರು.  ಕಡಿಮೆ ಆಭರಣಗಳನ್ನು ಆಕೆ ಧರಿಸಿದ್ದರು.ಬೂದು ಬಣ್ಣದ ಕುರ್ತಾ, ಬಿಳಿಯ ಪೈಜಾಮ ಧರಿಸಿದ್ದ ಸೈಫ್ ಅಲಿ ಖಾನ್ ವಿವಾಹ ನೋಂದಣಿ ನಂತರ ಮನೆಯ ಹೊರಗೆ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಲು ತಮ್ಮ ನವವಧುವಿನೊಂದಿಗೆ ಬಾಲ್ಕನಿಗೆ ಬಂದರು.ರಣಧೀರ್ ಕಪೂರ್ ಹಾಗೂ ಅವರ ಹಿರಿಯ ಪುತ್ರಿ ಕರಿಷ್ಮಾ ಕಪೂರ್ ಸಹ ಅಭಿಮಾನಿಗಳತ್ತ ಕೈಬೀಸಿದರು.

ಬುಧವಾರ ಮುಂಬೈ ಹೋಟೆಲ್‌ನಲ್ಲಿ ಅದ್ದೂರಿಯ ಆರತಕ್ಷತೆ ನಡೆಯಲಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆನಂತರ 18ರಂದು ದೆಹಲಿಯಲ್ಲಿ ಆರತಕ್ಷತೆ ಹಾಗೂ ಹರಿಯಾಣದ ಪಟೌಡಿಯಲ್ಲಿರುವ ಸೈಫ್ ಪೂರ್ವಜರ ಮನೆಯಲ್ಲಿಯೂ ಸಮಾರಂಭ ಜರುಗಲಿದೆ.2008ರಲ್ಲಿ ಈ ಜೋಡಿ ಮೊದಲ ಬಾರಿ `ತಶಾನ್~ ಚಿತ್ರದಲ್ಲಿ ಜತೆಯಾಗಿ ಕಾಣಿಸಿಕೊಂಡಿತ್ತು. ಬಳಿಕ `ಕುರ್ಬಾನ್~ನಲ್ಲೂ ಈ ಇಬ್ಬರು ಅಭಿನಯಿಸಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ಸೈಫ್ ಅಲಿ ಖಾನ್ ಅವರ ಸ್ವಂತ ನಿರ್ಮಾಣದ `ಏಜೆಂಟ್ ವಿನೋದ್~ನಲ್ಲೂ ಸೈಫೀನಾ ಜೋಡಿ ಮಿಂಚಿತ್ತು. ಹಲವು ಜಾಹೀರಾತುಗಳಲ್ಲೂ ಈ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದಾರೆ.`ಏಜೆಂಟ್ ವಿನೋದ್~ ಬಿಡುಗಡೆಯ ನಂತರ ಸೈಫೀನಾ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಮದುವೆ ಕುರಿತು ಸೈಫ್ ಮತ್ತು ಕರೀನಾ ತುಟಿ ಬಿಚ್ಚದೇ ಇದ್ದರೂ ಸೈಫ್ ಅಮ್ಮ ಶರ್ಮಿಳಾ ಅಕ್ಟೋಬರ್‌ನಲ್ಲಿ ಮದುವೆ ನಡೆಯಲಿದೆ ಎಂಬ ಸಂಗತಿ ಬಹಿರಂಗಗೊಳಿಸಿದ್ದರು.ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಮದುವೆಯಾದ ನಂತರ ಶರ್ಮಿಳಾ ಟ್ಯಾಗೋರ್ ಇಸ್ಲಾಂಗೆ ಮತಾಂತರ ಹೊಂದಿದ್ದರು. ಕರೀನಾ ಅವರನ್ನು ಈ ಹಿಂದೆ ಈ ಬಗ್ಗೆ ಪ್ರಶ್ನಿಸಿದಾಗ, `ಇದು ತೀರ ವೈಯಕ್ತಿಕವಾದ ಪ್ರಶ್ನೆ, ಉತ್ತರಿಸಲು ಸಾಧ್ಯವಿಲ್ಲ~ ಎಂದು ಹೇಳಿದ್ದರು. ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ನಿಧನದ ನಂತರ ಸೈಫ್ ಅವರಿಗೆ ಪಟೌಡಿಯ ನವಾಬನ ಪಟ್ಟ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.ಪೆಟಾ ಉಡುಗೊರೆ

`ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್~ (ಪೆಟಾ) ಸಂಪೂರ್ಣ ಸಸ್ಯಾಹಾರಿಯಾಗಿರುವ ಕರೀನಾ ಕಪೂರ್ ಅವರ ಮದುವೆಗೆ ಚಾಕಲೇಟ್‌ನಿಂದ ಮಾಡಿರುವ ಚಿಕನ್‌ಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ. ಕರೀನಾ ಮೊಟ್ಟೆಯನ್ನು ಸಹ ತಿನ್ನುತ್ತಿಲ್ಲ ಎನ್ನಲಾಗಿದೆ. `ಇದು ವರ್ಷದ ಮದುವೆ. ಅವರ ಜೀವನವನ್ನು ಸಿಹಿಯೊಂದಿಗೆ ಆರಂಭಿಸುವುದಕ್ಕಿಂತ ಹೆಚ್ಚಿನ ಸಂಭ್ರಮ ಏನಿದೆ~ ಎಂದು ಪೆಟಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪೂರ್ವ ಜೋಶಿಪುರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry