ವಿವಿಧೆಡೆ ಅತಿಥಿ ಉಪನ್ಯಾಸಕರ ಪ್ರತಿಭಟನೆ.ಸೇವೆ ಕಾಯಂಗೊಳಿಸಲು ಆಗ್ರಹ.

7

ವಿವಿಧೆಡೆ ಅತಿಥಿ ಉಪನ್ಯಾಸಕರ ಪ್ರತಿಭಟನೆ.ಸೇವೆ ಕಾಯಂಗೊಳಿಸಲು ಆಗ್ರಹ.

Published:
Updated:

ಚಿತ್ರದುರ್ಗ: ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ವಾಣಪ್ಪ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಕಾಲೇಜಿನ ತರಗತಿಗಳನ್ನು ಬಹಿಷ್ಕರಿಸಿ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದೆ.ರಾಜ್ಯಾದ್ಯಂತ ಸುಮಾರು 5 ಸಾವಿರ ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 10 ತಿಂಗಳಿಂದ ವೇತನ ನೀಡಿಲ್ಲ, ಸೇವಾ ಹಿರಿತನವಾಗಲಿ, ಸೇವೆ ಕಾಯಂ ಮಾಡಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನಆಗಿಲ್ಲ ಎಂದು ಅತಿಥಿ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸೇವೆ ಕಾಯಂಗೊಳಿಸಬೇಕು. 5 ಸಾವಿರದಿಂದ 10 ಸಾವಿರ  ವೇತನ ಹೆಚ್ಚಿಸಿ, ಪ್ರತಿ ತಿಂಗಳು ವೇತನ ಬಿಡುಗಡೆ ಮಾಡಬೇಕು.   ಸೇವಾ ಹಿರಿತನವನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.ಅತಿಥಿ ಉಪನ್ಯಾಸಕರಾದ ಚಿತ್ರಲಿಂಗಸ್ವಾಮಿ, ಎಸ್.ಎಂ. ದೇವರಾಜ್, ಆರ್. ತಿಮ್ಮಪ್ಪ, ಜಿ.ಎಚ್. ಕುಮಾರಸ್ವಾಮಿ, ಹನುಮಂತಪ್ಪ, ಸಿ.ಎಂ. ಅರುಣ್‌ಕುಮಾರ್, ಯು. ವಿಮಲಾ, ಕೆ. ಸುವರ್ಣಾ, ಎನ್.ಸಿ. ರೂಪಾ, ಜಿ.ಸಿ. ಶಿವಣ್ಣ ಉಪಸ್ಥಿತರಿದ್ದರು.  ತಹಶೀಲ್ದಾರ್‌ಗೆ ಮನವಿ

  ಹೊಸದುರ್ಗ ವರದಿ
: ಬಾಕಿ ವೇತನ ಪಾವತಿ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಗುರುವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಪ್ರತಿ ತಿಂಗಳೂ ವೇತನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.ಮಲ್ಲೇಶಪ್ಪ, ಡಾ.ಪೂರ್ಣಿಮಾ, ಪರಮೇಶ್, ರಾಮಚಂದ್ರಪ್ಪ, ಬಸವರಾಜು, ಮಧುಕುಮಾರ್, ಮಂಜುನಾಥ್, ಜಿ.ಎಚ್. ಲೋಕೇಶ್ವರಪ್ಪ, ಹೊನ್ನಮ್ಮ ಮತ್ತಿತತರು ಈ ಸಂದರ್ಭದಲ್ಲಿದ್ದರು.ಗೌರವಧನಕ್ಕೆ ಒತ್ತಾಯ

ಹಿರಿಯೂರು ವರದಿ:
‘ರಾಜ್ಯದ ಪದವಿ ಕಾಲೇಜುಗಳಲ್ಲಿ ಕೇವಲ ಐದು ಸಾವಿರ ರೂಪಾಯಿ ಗೌರವಧನ ಪಡೆದು, ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿ, ಗುರುವಾರ ರಾಜ್ಯ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಆಶ್ರಯದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು. ಸೇವೆ ಕಾಯಂಗೊಳಿಸುವವರೆಗೆ ಯುಜಿಸಿ ನಿಯಮಾವಳಿಯಂತೆ ಮಾಸಿಕ ್ಙ 25 ಸಾವಿರ  ಗೌರವಧನ ನೀಡಬೇಕು. ಹಾಲಿ ಸೇವೆಯಲ್ಲಿರುವ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಅವರು ಒತ್ತಾಯ ಮಾಡಿದರು.

ಎಚ್.ಒ. ತಿಪ್ಪೇಸ್ವಾಮಿ, ಎಲ್. ಶ್ರೀದೇವಿ, ಎಲ್.ಎಚ್. ಬಸವರಾಜ್, ಎಸ್.ಆರ್. ಮಹಾಂತೇಶ್, ಎಸ್. ಚಂದ್ರಶೇಖರ್, ಆರ್. ಗೋವಿಂದರಾಜಪ್ಪ  ಪಾಲ್ಗೊಂಡಿದ್ದರು.ತರಗತಿ ಬಹಿಷ್ಕಾರ

ಮೊಳಕಾಲ್ಮುರು ವರದಿ:  ರಾಜ್ಯ ಸಂಘದ ಆದೇಶದ ಮೇರೆಗೆ ಸ್ಥಳೀಯ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ಎಂ. ಗೋವಿಂದ, ರಾಘವೇಂದ್ರ, ಮೇಘನಾಥ್, ಶಿವಕುಮಾರ್, ಗೌಡ, ಗುರುಮೂರ್ತಿ, ನಿರಂಜನ ಮೂರ್ತಿ, ಸುಜಾತಾ, ರಾಘವೇಂದ್ರ ಸ್ವಾಮಿ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry