ಗುರುವಾರ , ಆಗಸ್ಟ್ 22, 2019
27 °C

ವಿವಿಧೆಡೆ ಭಾರಿ ಮಳೆ ಸಂಭವ

Published:
Updated:

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ. ಭಾಗಮಂಡಲ ಮತ್ತು ಮಡಿಕೇರಿಯಲ್ಲಿ 10 ಸೆಂ.ಮೀ. ಮಳೆಯಾಗಿದೆ.ಕಾರ್ಕಳ 7, ಬೆಳ್ತಂಗಡಿ, ಆಗುಂಬೆ, ತುರುವೇಕೆರೆ 5, ಮೂಡುಬಿದಿರೆ, ಬಂಟ್ವಾಳ, ಸುಬ್ರಹ್ಮಣ್ಯ, ಹೊನ್ನಾವರ, ಗೇರುಸೊಪ್ಪ, ಶೃಂಗೇರಿ, ಕಳಸ 4, ಮಂಗಳೂರು, ಉಪ್ಪಿನಂಗಡಿ, ಸುಳ್ಯ, ಉಡುಪಿ, ಕೋಟ, ಸಿದ್ದಾಪುರ, ಭಟ್ಕಳ, ಮಂಕಿ, ಕದ್ರಾ, ಶಿರಾಲಿ, ಬೀದರ್, ಮೂರ್ನಾಡು, ನಾಪೋಕ್ಲು, ಲಿಂಗನಮಕ್ಕಿ, ಹೊಸನಗರ, ಜಯಪುರ 3, ಮೂಲ್ಕಿ, ಮಾಣಿ, ಕೊಲ್ಲೂರು,  ಮಾದಾಪುರ, ತಾಳಗುಪ್ಪ, ಕಮ್ಮರಡಿ, ಅರಸೀಕೆರೆ, ಭರಮಸಾಗರ 2, ಪಣಂಬೂರು, ಮಂಗ ಳೂರು, ಕುಮಟಾ, ಬಸವಕಲ್ಯಾಣ, ಸಾಗರ, ತ್ಯಾಗರ್ತಿ, ಹುಂಚದಕಟ್ಟೆ, ಹಡಗಲಿ ಹಾಗೂ ಕುಣಿಗಲ್‌ನಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Post Comments (+)