ಭಾನುವಾರ, ಏಪ್ರಿಲ್ 11, 2021
30 °C

ವಿವಿಧೆಡೆ ರಾಜ್ಯೋತ್ಸವ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ:  ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಾರಾಣಾ ಪ್ರತಾಪ ಸಿಂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಗುರುವಾರ ಬೆಟ ಗೇರಿಯ ಟೆಂಗಿನಕಾಯಿ ಬಜಾರದಲ್ಲಿ ಅದ್ದೂರಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.



ಕನ್ನಡ ದ್ವಜಾರೋಹಣವನ್ನು  ಶಾಸಕ ಶ್ರೀಶೈಲಪ್ಪ ಬಿದರೂರ ನೆರವೇರಿ ಸಿದರು. ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ನಗರಸಭೆ ಅಧ್ಯಕ್ಷ ಶಿವಣ್ಣ ಮುಳ ಗುಂದ ಪುಷ್ಪಾರ್ಚಣೆ ಮಾಡಿದರು.  ಸಮಿತಿಯ ಅಧ್ಯಕ್ಷ ಗಣೇಶಸಿಂಗ ಬ್ಯಾಳಿ ಮೆರವಣಿಗೆಗೆ ಚಾಲನೆ ನೀಡಿದರು.



ತುಂತುರು ಮಳೆಯ ನಡುವೆಯೇ ಸಾಗಿದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯಲ್ಲಿ ಕನ್ನಡ ಹೆಣ್ಣು ಶಾಲೆ.1, ಕನ್ನಡ ಗಂಡು ಶಾಲೆ. 2, ಕನ್ನಡ ಹೆಣ್ಣು ಶಾಲೆ 3,  ಶಾಲೆ 6, ಹುಲಕೋಟಿ ಸಹಕಾರಿ ಶಿಕ್ಷಣ ಶಾಲೆ, ಕಿತ್ತೂರ ಚೆನ್ನಮ್ಮ ಪ್ರಾಥಮಿಕ ಶಾಲೆ, ವಿಶ್ವ ಚೇತನ ಶಾಲೆ, ಸೇಂಟ್ ಜಾನ್ಸ್ ಪ್ರೌಢಶಾಲೆ, ಮಹಾರಾಣಾ ಸಂಯುಕ್ತ ಪದವಿ ಪೂರ್ವ ಕಾಲೇಜು, ಬ್ರಹ್ಮದೇವರ ತರುಣ ಸಂಘ ಮುಂತಾದ ಆಕರ್ಷಕ ರೂಪಕಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು.



ಟೆಂಗಿನಕಾಯಿ ಬಜಾರ, ಮೈಲಾರ ಲಿಂಗೇಶ್ವರ ದೇವಸ್ಥಾನ, ಕುರಟ್ಟಿಪೇಟೆ, ಶಿರಟ್ಟಿಗಲ್ಲಿ, ಕಬಾಡಿ ರಸ್ತೆ, ಪಿ.ಬಿ. ರಸ್ತೆ ಮೂಲಕ ಬೆಟಗೇರಿ ಬಸ್ ಸ್ಟ್ಯಾಂಡನಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು. ರಾಜ್ಯೋತ್ಸವ ಸಮಿತಿ ಉಪಾಧ್ಯಕ್ಷ ಯಲ್ಲಪ್ಪ ಕಾಂಬಳೇಕರ, ಕಾರ್ಯದರ್ಶಿ ಕೃಷ್ಣಾ ರಾಯಬಾಗಿ, ಸಹ ಕಾರ್ಯ ದರ್ಶಿ ಹಿರೇಮನಿ ಪಾಟೀಲ, ಭೋಜಪ್ಪ ಹೆಗಡೆ, ಹೀರಾಲಾಲಸಾ ಬಾಕಳೆ. ರವಿ ಪವಾರ, ಮೋಹನ ಮಿಸ್ಕಿನ, ರಾಮಣ್ಣ ರಾಂಪೂರ ಹಾಜರಿದ್ದರು.



ಗಜೇಂದ್ರಗಡ ವರದಿ

ನೀಲಂ ಚಂಡಮಾರುತದ ರಭಸದ ಮಳೆಯ ನಡುವೆಯೂ ಪಟ್ಟಣದಲ್ಲಿ ವಿವಿಧ ಶಾಲಾ-ಕಾಲೇಜುಗಳು ಹಾಗೂ ಕನ್ನಡಪರ ಸಂಘ-ಸಂಸ್ಥೆಗಳು 57ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.



ಕಳೆದ ಬುಧವಾರ ಸಂಜೆಯಿಂದ ಆರಂಭಗೊಂಡ ಮಳೆ ಕರ್ನಾಟಕ ರಾಜ್ಯೋತ್ಸವದ ಸಂಭ್ರಮಕ್ಕೆ ಅಡಚಣೆಯನ್ನುಂಟು ಮಾಡಿತ್ತಾದರೂ ಗುರುವಾರ ಸುರಿವ ಮಳೆಯನ್ನು ಲೆಕ್ಕಿಸದ ಕನ್ನಡಪರ ಸಂಘಟನೆಗಳು ಉತ್ಸುಕತೆಯಿಂದಲ್ಲೇ ಕನ್ನಡಾಂಬೆಗೆ ಗೌರವ ಸಲ್ಲಿಸಿ, ಸಂಭ್ರಮಿಸಿದರು.



ಕಾಲಕಾಲೇಶ್ವರ ವೃತ್ತದಲ್ಲಿ: ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕ ದಿಂದ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕೊಡಗಾನೂರ ಗ್ರಾಮದ ಚಂದ್ರಶೇಖರಯ್ಯ ಹಿರೇಮಠ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕರವೇ ತಾಲ್ಲೂಕು ಅಧ್ಯಕ್ಷ ರೇಣುಕಯ್ಯ ಅಂಗಡಿ ಧ್ವಜಾರೋಹಣ ನೆರವೇರಿಸಿದರು.



ಶರಣಪ್ಪ ಸೊಬರದ, ರಾಜು ಸಾಂಗ್ಲೀಕರ್, ರಾಚಯ್ಯ ಬಾಳೆಕಾಯಿಮಠ, ಶರಣಪ್ಪ ಬಾಣದ, ಅಲ್ಲಾಭಕ್ಷ ನದಾಫ್, ಬಾಳು ವಾಲ್ಮೀಕಿ, ಶಿವರಾಜ ಕೊಡಗಾನೂರ, ಶರಣಪ್ಪ ದಂಡಿನ, ಶರಣಪ್ಪ ಹೂಗಾರ, ಮರ್ತುಜಾ ವಂಟಿ ಮತ್ತಿತರರು ಉಪಸ್ಥಿತರಿದ್ದರು.



ಸರ್ಕಾರಿ ಬಾಲಕಿಯ ಪ್ರೌಢ ಶಾಲೆಯಲ್ಲಿ: ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ 57ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಮುಖ್ಯೋಪಾಧ್ಯಯ ಎಸ್. ಎಫ್.ಜಾಲಿಹಾಳ ಭುವನೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.



ಎಸ್.ಎ.ಬನ್ನಿಗೋಳ, ಕೆ.ಎಸ್.ಮುಶಿಗೇರಿ, ಎಫ್.ಎಸ್.ಡಾಲಾಯತ್, ಎಸ್.ಬಿ.ಡೊಳ್ಳಿನ, ಎಸ್.ಹೆಚ್.ಬಂಡಿವಡ್ಡರ, ಕೆ.ಸಿ.ಲಮಾಣಿ, ಹೇಮಾವತಿ ಕೊಂಡಾ, ಕೆ.ಎಸ್.ರಾಜೂರ, ಬಿ.ಬಿ.ಸುಗ್ಗಿ ಉಪಸ್ಥಿತರಿದ್ದರು.



ಭೂಮರಡ್ಡಿ ಪ್ರೌಢ ಶಾಲೆಯಲ್ಲಿ: ಇಲ್ಲಿನ ಎಸ್.ಎಂ.ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯಲ್ಲಿ 57ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಪ್ರಾಚಾರ್ಯ ವಿ.ಎಸ್.ರಾಯನಗೌಡ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.



ಮುಖ್ಯೋಪಾಧ್ಯಯ ಆರ್.ಕೆ.ಮಾಳೋದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯು.ಎಸ್.ಶಿರೋಳ, ವಿ.ಎಫ್.ಕಾಳಗಿ, ಎಸ್.ಎ.ವಡ್ಡರ, ಕೆ.ಬಿ. ಚಾಗರಿ ಮತ್ತಿತರರು ಉಪಸ್ಥಿತರಿದ್ದರು.



ಗೋಗೇರಿ ಗ್ರಾಮದಲ್ಲಿ: ಇಲ್ಲಿಗೆ ಸಮೀಪದ ಗೋಗೇರಿ ಗ್ರಾಮದಲ್ಲಿ 57ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.



ಶರಣಪ್ಪ ರೇವಡಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.   ಕೆ.ಎಸ್.ಕೊಡತಗೇರಿ ಧ್ವಜಾರೋಹಣ ನೆರವೇರಿಸಿದರು.



ಉಮೇಶ ಮಲ್ಲಾಪೂರ, ಮುಕ್ತುಂ ಸಾಗರ, ಅಲ್ಲಾಭಕ್ಷ ಮುಚ್ಚವಾಲೆ, ಕಳಕಪ್ಪ ಮೇಟಿ, ವಜೀರ ನದಾಫ್, ಹುಸೇನಸಾಬ ನದಾಫ್, ಶರಣಪ್ಪ ಯಗರಿ, ಕಳಕಪ್ಪ ಅಡವಿ, ಮುದಿಯಪ್ಪ ಗಾರಗಿ, ಶರಣಪ್ಪ ಗುಂಡಿ, ಮಲ್ಲಪ್ಪ ನರಿ, ಈಶಪ್ಪ ಹಡಪದ, ದುರಗಪ್ಪ ಗುಂಡೆ, ದುರಗಪ್ಪ ಬೂದಿಹಾಳ, ಭೀಮಪ್ಪ ತಳವಾರ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.