ವಿವಿಧೆಡೆ ವಾಜಪೇಯಿ ಜನ್ಮದಿನ ಆಚರಣೆ

7

ವಿವಿಧೆಡೆ ವಾಜಪೇಯಿ ಜನ್ಮದಿನ ಆಚರಣೆ

Published:
Updated:

ಬಳ್ಳಾರಿ: ಭಾರತೀಯ ಜನತಾ ಪಕ್ಷ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಜನ್ಮದಿನವನ್ನು ಸಡಗರದಿಂದ  ಆಚರಿಸಲಾಯಿತು.

ಪಕ್ಷದ ಕಾರ್ಯಕರ್ತರು ಸ್ಥಳೀಯ ಗಾಂಧಿ ನಗರದಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಹಿಳೆಯರಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಸಾಹುಕರ್ ಸತೀಶ್‌ಬಾಬು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ ಅಧ್ಯಕ್ಷ ಡಿ. ವಿನೋದ್ ಕುಮಾರ್, ಕೆಎಂಎಫ್ ನಿರ್ದೇಶಕ ಸತೀಶ ಚಕ್ರವರ್ತಿ, ಬಿ.ಶಿವಕುಮಾರ್, ಕಾಳಿ, ಕೆ. ಮಲ್ಲಿಕಾರ್ಜುನ, ಎಪಿಎಂಸಿ ಸದಸ್ಯ ರೂಪನಗುಡಿ ಬಸವರಾಜ್, ಮಧು,  ರಮಣ, ಕೆ.ರಾಮಚಂದ್ರಪ್ಪ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.ಸಿಹಿ  ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಮತ್ತೊಂದು ಸಮಾರಂಭದಲ್ಲಿ ಕುಂದಾಪುರ ನಾಗರಾಜ್, ಮುರಾರಿಗೌಡ, ಯೋಗಾ ನಾಗರಾಜ್, ಹರಿ ತ್ರಿವೇದಿ, ಕೆ.ಎ. ಮಧುಕುಮಾರ್, ಸರ್ಪಭೂಷಣ ಹಿರೇಮಠ, ಡಾ.ಅಚ್ಯುತ್ ಮತ್ತಿತರರು ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.`ವಾಜಪೇಯಿಯವರ ಆದರ್ಶ ನಾವು ಬೆಳೆಸಿಕೊಳ್ಳಬೇಕು'

ಹೂವಿನಹಡಗಲಿ :
ಮಾಜಿ ಪ್ರಧಾನಿ ವಾಜಪೇಯಿ ಯವರ ಆದರ್ಶಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಶಾಸಕ ಚಂದ್ರಾನಾಯ್ಕಹೇಳಿದರು.

ಪಟ್ಟಣದ ಶಾಸಕರ ನಿವಾಸದಲ್ಲಿ ಮಂಗಳವಾರ ಮಾಜಿ ಪ್ರಧಾನಿ ವಾಜಪೇಯಿಯವರ 89ನೇಹುಟ್ಟುಹಬ್ಬವನ್ನು  ಕೇಕ್ ಕಟ್ ಮಾಡುವ ಮೂಲಕ ಆಚರಿಸಿ ಅವರು ಮಾತನಾಡಿದರು.ವಾಜಪೇಯಿಯವರ ಸಾಧನೆ ಹಿನ್ನೆಲೆಯಲ್ಲಿ ಪಟ್ಟಣದ ಹರಪನಹಳ್ಳಿ ಹೋಗುವ ರಸ್ತೆಯ ಹೊರವಲಯದಲ್ಲಿ ಮಾಜಿ ಪ್ರಧಾನಿ ವಾಜಪೇಯಿವರ ವೃತ್ತವನ್ನು ನಿರ್ಮಾಣಮಾಡಲು 50 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.ಬಿಜೆಪಿ ಮುಖಂಡ ಪೂಜಪ್ಪ ಮಾತನಾಡಿ ವಾಜಪೇಯಿವರು ಹುಟ್ಟು ಹೋರಾಟ ಗಾರರಾಗಿದ್ದು ಅವರ ಜೀವನ ಶೈಲಿಯನ್ನು ರೂಢಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.ಮುಖಂಡರಾದ ಜಯಣ್ಣ ಮಾಗಳ ಮಾತನಾಡಿದರು. ಮುಖಂಡರಾದ ಎಂಬಿ. ಬಸವರಾಜ, ಕೋಟೆಪ್ಪ, ಸೊಪ್ಪಿನ ವೀರಣ್ಣ, ಸೊಪ್ಪಿನ ಬಸಣ್ಣ, ಪುರಸಭೆ ಸದಸ್ಯ ರಫಿ, ಪ್ರಕಾಶ್, ಸುರೇಶ ಕೊಳ್ಳಿ ಉಪಸ್ಥಿತರಿದ್ದರು.  ಹರಪನಹಳ್ಳಿಗೆ ಹೋಗುವ ರಸ್ತೆಯ ಹೊರವಲಯದಲ್ಲಿ ಶಾಸಕ ಚಂದ್ರಾನಾಯ್ಕ ವಾಜಪೇಯಿ ವೃತ್ತ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ರೇಣುಕಮ್ಮ,ಉಪಾಧ್ಯಕ್ಷ  ಈಡಿಗರ್ ಕೃಷ್ಣಪ್ಪ, ತಾ.ಪಂ.ಅಧ್ಯಕ್ಷೆ ದುರುಗಮ್ಮ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry