ಗುರುವಾರ , ಏಪ್ರಿಲ್ 15, 2021
23 °C

ವಿವಿಧೆಡೆ ಶಾಲೆಗಾಗಿ ನಾವು-ನೀವುಕಾರ್ಯಕ್ರಮಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ನಗರ ಮತ್ತು ಜಿಲ್ಲೆಯ ವಿವಿಧೆಡೆ ಗುರುವಾರ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಶಿಕ್ಷಕ ಸಮುದಾಯದ ಜೊತೆಗೆ ಜನಪ್ರತಿನಿಧಿಗಳು ಕೂಡಾ ಭಾಗವಹಿಸುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಶಿಕ್ಷಣದ ಹಕ್ಕು ಕಾಯ್ದೆಯ ಮಹತ್ವವನ್ನು ಪ್ರತಿಪಾದಿಸಿದರು.ತಾಲ್ಲೂಕಿನ ಕೋಳಾರ್ (ಬಿ) ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಂಡೆಪ್ಪಾ ಕಾಶೆಂಪೂರ್ ಅವರು, ಮಕ್ಕಳ ಕಲಿಕೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಅಪಾರ ಎಂದು ಪ್ರತಿಪಾದಿಸಿದರು.ಗ್ರಾಮದ ಕನ್ನಡ ಮತ್ತು ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಗ್ರಾಮ ಪಂಚಾಯಿತಿ, ಶಾಲಾಭಿವೃದ್ಧಿ ಸಮಿತಿ ಪ್ರತಿನಿಧಿಗಳು ಜೊತೆಯಾಗಿ ಕೆಲಸ ಮಾಡಬೇಕಾಗಿದೆ ಎಂದರು.ಮಕ್ಕಳ ಶಾಲಾ ದಾಖಲಾತಿಗೆ ಶಿಕ್ಷಕರು ಕಸರತ್ತು ಮಾಡಬೇಕಿದೆ ಎಂದು ಸಲಹೆ ಮಾಡಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ್ ಮದಾನೆ, ಅಕ್ಷರ ದಾಸೋಹ ಯೋಜನಾಧಿಕಾರಿ ಚಂದ್ರಶೇಖರ್, ಉರ್ದು ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರುಕ್ಮೋದ್ದೀನ್ ಮಲ್ಲಾ, ಸಿಆರ್‌ಪಿ ಕಾಶಿನಾಥ್,  ಶಿಕ್ಷಣ ಸಂಯೋಜಕ ಕುಶಲರಾವ್, ವೆಂಕಟರಾವ್, ಮಾರ್ಟಿನ್, ಉರ್ದು ಸಹಶಿಕ್ಷಕಿ ಶೋಭಾ ಉಪಸ್ಥಿತರಿದ್ದರು. ಕನ್ನಡ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಂದರರಾಜ್ ಮೇಲ್ದೊಡ್ಡಿ ವಂದಿಸಿದರು.ಯಾಕತಪೂರ್ ಶಾಲೆಯಲ್ಲಿ: ಬೀದರ್ ತಾಲೂಕಿನ ಯಾಕತಪೂರ್ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕು ಕುರಿತಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಜಿಲ್ಲಾ ಪಂಚಾಯತಿ ಸದಸ್ಯೆ ವಿಮಲಾಬಾಯಿ ಬಿ. ಅಮಣ್ಣಾ ಹೇಳಿದರು.ತಾಲೂಕಾ ಪಂಚಾಯತ್ ಸದಸ್ಯ ಅಮ್ಮಿನಾಬೀ ನೂರಬಾಫ್, ನಾಗೋರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪಾ ಭಂಕುರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋವಿಂದರಾವ್ ಪಾಟೀಲ್, ಉಪಾಧ್ಯಕ್ಷ ಧನರಾಜ್ ಕೋಟೆ, ವಿಕಾಸ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಸುರೇಶ ಪಾಟೀಲ್ ಯಾಕತಾಪೂರ್, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಪ್ರಮುಖ ದಿಲೀಪಕುಮಾರ್ ಭಂಕುರೆ, ಗ್ರಾಮದ ಪ್ರಮುಖ  ತಾಜೋದ್ದೀನ್ ಉಪಸ್ಥಿತರಿದ್ದರು.ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಲಕ್ಷ್ಮಿಬಾಯಿ ಮಠ,  ಉರ್ದು ಮಾಧ್ಯಮದ ಮುಖ್ಯಗುರು ಸಿರಾಜೋದ್ದೀನ್ ಉಪಸ್ಥಿತರಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಪ್ರಭಾತ್ ಫೇರಿ ನಡೆಸಿದ್ದು, ಮಕ್ಕಳ ಹಕ್ಕುಗಳನ್ನು ಕುರಿತ ಘೋಷಣೆಗಳನ್ನು ಕೂಗಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.