ವಿವಿಧೆಡೆ ಶಿವಾಜಿ ಜಯಂತಿ

7

ವಿವಿಧೆಡೆ ಶಿವಾಜಿ ಜಯಂತಿ

Published:
Updated:
ವಿವಿಧೆಡೆ ಶಿವಾಜಿ ಜಯಂತಿ

ಕಮಲನಗರ: ವ್ಯಾಪ್ತಿಯ ವಿವಿಧೆಡೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಶಾಂತಿವರ್ಧಕ ಕಾಲೇಜ್: ಇಲ್ಲಿನ ಶಾಂತಿವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪ್ರಾಚಾರ್ಯ ಜಿ.ಜಿ.ಮಠಪತಿ ಪೂಜೆ ಸಲ್ಲಿಸಿದರು.ಉಪನ್ಯಾಸಕ ಶಿವಾಜಿ ಆರ್.ಎಚ್ ಮಾತನಾಡಿ, ರಾಷ್ಟ್ರದ ಧರ್ಮ, ಸಂಸ್ಕೃತಿಗಳು ಪರಕೀಯರ ದಾಳಿಗೆ ಸಿಕ್ಕಿ ನಲಗುತ್ತಿರುವ ಸಂದರ್ಭದಲ್ಲಿ ಬಲಿಷ್ಠ ಸಾಮ್ರಾಜ್ಯ ಸ್ಥಾಪಿಸಿ ವಿರೋಧಿಗಳನ್ನು ಮಟ್ಟ ಹಾಕಿದ ಕೀರ್ತಿ ಛತ್ರಪತಿ ಶಿವಾಜಿ ಅವರದ್ದು ಎಂದರು.ಬಾಬುರಾವ್ ರಿಕ್ಕೆ, ದೈಹಿಕ ನಿರ್ದೇಶಕ ಜಯಪ್ರಭು, ಎಸ್.ವಿ.ಬಿರಾದಾರ್, ಎಂ.ಎಚ್.ಪಾಟೀಲ, ಸೂರ್ಯಕಾಂತ ದ್ವಾಸೆ, ದಶರಥ ಭಾಡಸಂಗೆ, ಚಂದ್ರಕಾಂತ ಭೈರೆ, ಸೂರ್ಯಕಾಂತ ಸುಲಾಕೆ ಇದ್ದರು.ಡಾ.ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ: ಇಲ್ಲಿನ ಡಾ.ಚನ್ನಬಸವ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಗುರು ಪ್ರಕಾಶ ಮಾನಕಾರಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಶಿಕ್ಷಕ ಮನೋಜ ಹಿರೇಮಠ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಉತ್ಕಟ ದೇಶಪ್ರೇಮ, ಸಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಿದೆ. ಅವರ ತತ್ವ, ಆದರ್ಶ ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದರು. ಸುಧಾಕರ್ ಬಾದಾಮಿ, ಹಾವಗಿರಾವ ಮಠಪತಿ ಇದ್ದರು.ಖತಗಾಂವ್:  ಸಮೀಪದ ಖತಗಾಂವ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಶಿವಾಜಿ ಪಾಂಚಾಳ ಪೂಜೆ ಸಲ್ಲಿಸಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಸುಭಾಷ ಬಿರಾದಾರ್ ಮಾತನಾಡಿ, ದೇಶಪ್ರೇಮಕ್ಕೆ ಇನ್ನೊಂದು ಹೆಸರೇ ಛತ್ರಪತಿ ಶಿವಾಜಿ. ಅವರ ದೂರಾಲೋಚನೆ, ಆದರ್ಶ ಎಲ್ಲರಿಗೂ ಅಳವಡಿಸಿಕೊಳ್ಳಬೇಕು ಎಂದರು.ವಿದ್ಯಾರ್ಥಿ ಭೀಮರಾವ್ ಪಾಟೀಲ ಮಾತನಾಡಿದರು. ಸೂರ್ಯಕಾಂತ ಮಹಾಜನ್, ಇಂದ್ರಜೀತ ಗವಳಿ, ಮಲ್ಲಮ್ಮಾ ಕಸ್ತೂರೆ, ಇಂದಿರಾಬಾಯಿ ಕಾಂಬಳೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry