ಗುರುವಾರ , ಮೇ 6, 2021
33 °C

ವಿವಿಧೆಡೆ ಶಿವಾಜಿ ಜಯಂತ್ಯುತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ರಾಷ್ಟ್ರಾಭಿಮಾನ, ದೇಶ ಭಕ್ತಿ, ಧರ್ಮ-ಸಂಸ್ಕೃತಿ ರಕ್ಷಣೆಗೆ ಹೋರಾಡಿದ ವೀರ, ಚತುರ ಆಡಳಿತ ಗಾರ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಯುವಜನಾಂಗ ಅಳ ವಡಿಸಿಕೊಳ್ಳಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ, ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ ಹೇಳಿ ದರು.ಜಿಲ್ಲಾಡಳಿತ ಗುರುಭವನದಲ್ಲಿ ಆಯೋಜಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಅವರು, ಶಿವಾಜಿ ಮಹಾರಾಜರ ದೇಶಪ್ರೇಮ ಹಾಗೂ ಯುದ್ಧಕಲೆಯನ್ನು ಈಗಲೂ ಭಾರತೀಯ ಸೇನೆಯಲ್ಲಿ ಅಳವಡಿಸಲಾಗುತ್ತದೆ ಎಂದರು.ಧರ್ಮ ಸಂಸ್ಕೃತಿಯ ರಕ್ಷಣೆಗೆ ಮೊಘಲರ ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ನಾಯಕ ಶಿವಾಜಿಯನ್ನು ಕೇವಲ ಮಹಾರಾಷ್ಟ್ರಕ್ಕೆ ಸೀಮೀತಗೊಳಿಸದೇ ಅವರೊಬ್ಬ ರಾಷ್ಟ್ರೀಯ  ನಾಯಕ ಎಂದು ಪರಿಗಣಿಸ ಬೇಕು ಎಂದರು.ಶಿವಾಜಿ ಕಾಲೇಜಿನ ಪ್ರಾಧ್ಯಾಪಕ ಎ.ಜೆ.ಕೆರ್ಲೇಕರ ಉಪನ್ಯಾಸ ನೀಡಿದರು. ಮಾಜಿ ಸಚಿವ ಪ್ರಭಾಕರ ರಾಣೆ ಮಾತನಾಡಿದರು.ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇ ಕರ್, ಉಪಾಧ್ಯಕ್ಷೆ ನಯನಾ ಮಾಳ ಸೇಕರ, ಜಿಲ್ಲಾಧಿಕಾರಿ ಇಂಕೋಂಗ್ಲಾ ಜಮೀರ, ಜಿಲ್ಲಾ ಪಂಚಾಯಿತಿ ಸಿಇಓ ಆರ್.ಜೆ.ಜೋಶಿ ಹಿರಿಯರಾದ ಶಶಿ ಕಾಂತ ರಾಣೆ, ಉಪವಿಭಾಗಾಧಿಕಾರಿ ಪುಷ್ಪಲತಾ, ಕನ್ನಡ  ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಚಲವಾದಿ ಹಾಜರಿದ್ದರು.ಯಲ್ಲಾಪುರ ವರದಿ

ಯಲ್ಲಾಪುರ: ಸೋಮವಾರ  ತಹ ಶೀಲ್ದಾರ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಉತ್ಸವವನ್ನು ಆಚರಿ ಸಲಾಯಿತು.ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿ ಕೊಳ್ಳಾದ ಶಿವಾಜಿ ಜಯಂತಿ ಕಾರ್ಯ ಕ್ರಮದಲ್ಲಿ  ತಹಶೀಲ್ದಾರ ವಿ.ಎನ್. ನಾಡಗೌಡ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಸಮಾಜ ಕಲ್ಯಾಣಾಧಿಕಾರಿ ಖಾಜಾ ಹುಸೇನ್, ಪಿಎಸ್‌ಐ ಡಿ.ವೈ.ಹರ್ಲಾ ಪುರ, ಪ.ಪಂ ಆರೋಗ್ಯ ನಿರೀಕ್ಷಕ ಎಸ್. ಜಿ.ನಾಗಪ್ಪ, ಉಪ ತಹಶೀಲ್ದಾರ ಕೇಣಿ, ತಾಲ್ಲೂಕು ಕಚೇರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಹಳಿಯಾಳ  ವರದಿ

ಹಿಂದವಿ ಸ್ವರಾಜ್ಯ ಸ್ಥಾಪನೆಯಲ್ಲಿ ಶಿವಾಜಿ ಮಹಾರಾಜರ ಪಾತ್ರ ಬಹು ಪ್ರಾಮುಖ್ಯ ಪಡೆದಿದೆ. ಶಿವಾಜಿ ಮಹಾ ರಾಜರು ಮೊಘಲರ ವಿರುದ್ಧ ಹೋರಾಟ ಮಾಡಿದ್ದರಷ್ಟೇ ಮುಸ್ಲಿಂರ ವಿರುದ್ಧ ಅಲ್ಲ ಎಂದು ಶಾಸಕ ಸುನಿಲ ಹೆಗಡೆ ಹೇಳಿದರು.ಸೋಮವಾರ ಸ್ಥಳಿಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾ ಯಿತಿ, ಪಟ್ಟಣ ಪಂಚಾಯಿತಿ ಎಲ್ಲ ಮರಾಠಾ ಸಮಾಜದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್.ಘೋಟ್ನೇಕರ ಮಾತನಾಡಿ ಮರಾಠಾ ಸಮಾಜವು ಇಂದು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜ ಕೀಯವಾಗಿ ಹಿಂದುಳಿದಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದು ಮರಾಠಾ ಸಮಾಜದವರು ಸಂಘಟಿತರಾಗಿ ಕೆಲಸ ಕಾರ್ಯ ಮಾಡಿದರೆ ಸಮಾಜವು ಸರ್ವಾಂಗೀಣವಾಗಿ ಅಭಿವೃದ್ದಿ ಹೊಂದಲು ಸಾಧ್ಯವೆಂದು ಹೇಳಿದರು.ಅತಿಥಿಗಳಾಗಿ ಜಿಲ್ಲಾ ಮರಾಠಾ ಸಮಾಜದ ಮುಖಂಡರಾದ ಉಡ ಚಪ್ಪಾ ಬೋಬಾಟೆ, ಮುಖಂಡರಾದ ವಿಜೇಂದ್ರ ಜಾಧವ, ಅಪ್ಪಾರಾವ ಪೂಜಾರಿ ಉಪಸ್ಥಿತರಿದ್ದು ಮಾತನಾಡಿ ದರು. ಶ್ರೀ ಅದಿಶಕ್ತಿ ಮಹಾಪೀಠದ ಕೃಷ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿ ಧ್ಯ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಭಾರತಿ ಗೊಂದಳಿ ಅಧ್ಯಕ್ಷತೆ ಯನ್ನು ವಹಿಸಿದ್ದರು.ಬೆಂಗಳೂರಿನ ಉಪನ್ಯಾಸಕ ತಮ್ಮಣ್ಣ ನಾಯ್ಕ ಶಿವಾಜಿ ಮಹಾರಾಜರ ಜೀವನ, ಹೋರಾಟದ ಕುರಿತು ಉಪ ನ್ಯಾಸ ನೀಡಿದರು. ತಹಶೀಲ್ದಾರ ಎ.ಆರ್.ದೇಸಾಯಿ, ಕಾರ್ಯ ನಿರ್ವ ಹಣಾಧಿಕಾರಿ ಸಿ.ಎಸ್.ಚಿಕ್ಕಮಠ, ಬಿಜೆಪಿ ಕ್ಷೇತ್ರಾಧ್ಯಕ್ಷರಾದ ರಾಜು ಧೂಳಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಾ ಪಾಟೀಲ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಸಂತಾನ ಸಾವಂತ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಕಾಂತ ಹೂಲಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ದೇವಕಿ ಮೇತ್ರಿ. ಮರಾಠಾ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಬಿ.ಡಿ. ಪಾಟೀಲ. ಜೀಜಾಮಾತಾ ಕ್ಷತ್ರೀಯ ಮಹಿಳಾ ಮರಾಠಾ ಸಮಾಜದ ಅಧ್ಯಕ್ಷರಾದ ಮಂಗಲಾ ಕಶೀಲಕರ. ಯಡೋಗಾದ ಮಾತಾ ನಿರ್ಮಲಾ ದೇವಿ, ನಾಗೇಂದ್ರ ಜೀವೋಜಿ ಮತ್ತಿತ ರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ,ಎಸ್, ನಾಯ್ಕ ಸ್ವಾಗತಿಸಿದರು. ಎನ್.ಎಸ್. ಉದ್ದಣ್ಣವರ ನಿರೂಪಿಸಿದರು.ಮುಂಡಗೋಡ ವರದಿ

ಛತ್ರಪತಿ ಶಿವಾಜಿಯು ರಾಷ್ಟ್ರರಕ್ಷಣೆಗೆ ಪಣ ತೊಟ್ಟು ಹೋರಾಡಿದ ಧೀರ ಪುರುಷನಾಗಿದ್ದು ಶಿವಾಜಿ ಜಯಂತಿ ಯಲ್ಲಿ ಪಾಲ್ಗೊಳ್ಳುವುದು ಪುಣ್ಯದ ಕೆಲಸವೆಂದು ಜಿ.ಪಂ.ಮಾಜಿ ಉಪಾಧ್ಯಕ್ಷ ಹಾಗೂ ಮರಾಠಾ ಮುಖಂಡ ಎಲ್.ಟಿ. ಪಾಟೀಲ ಹೇಳಿದರು.ಇಲ್ಲಿಯ ಹಳೂರು ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ಛತ್ರಪತಿ ಶಿವಾಜಿಯ ಜಯಂತ್ಯುವವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿ ದರು. ಕೇವಲ ಒಂದು ಸಮಾಜ, ರಾಜ್ಯ ವನ್ನು ರಕ್ಷಣೆ ಮಾಡಲು ಹೋರಾಡದೇ ಹಿಂದು ಧರ್ಮದ ರಕ್ಷಣೆಯಲ್ಲಿ ಶಿವಾಜಿಯ ಕೊಡುಗೆ ಅಪಾರವಾಗಿದೆ. ಯುವಪೀಳಿಗೆಯು ಶಿವಾಜಿಯ ಆದರ್ಶ, ರಾಷ್ಟ್ರಪ್ರೇಮಗಳನ್ನು ಜೀವನ ದಲ್ಲಿ ಅಳವಡಿಸಿಕೊಂಡು ಮುನ್ನಡೆಯ ಬೇಕು. ಪ್ರತಿವರ್ಷವೂ ಶಿವಾಜಿ ಜಯಂತಿಯು ವಿಜೃಂಭಣೆಯಿಂದ ನಡೆಯಲಿ ಎಂದು ಅವರು ಕರೆ ನೀಡಿದರು. ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಬಸವರಾಜ ಓಶೀಮಠ ಮಾತನಾಡಿದರು.ನಂತರ ಶಿವಾಜಿಯ ಭಾವಚಿತ್ರ ದೊಂದಿಗೆ ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಮೆರವಣಿಗೆ ನಡೆಸಲಾಯಿತು. `ವೀರ ಶಿವಾಜಿ, ಅಂಬಾ ಭವಾನಿ~ `ಭಾರತ ಮಾತಾ ಕಿ ಜೈ~ ಎಂಬಿತ್ಯಾದಿ ಘೋಷಣೆಗಳು ಮೆರವಣಿಗೆಯಲ್ಲಿ ಮೊಳಗಿದವು.

ಎ.ಪಿ.ಎಂ.ಸಿ ಅಧ್ಯಕ್ಷ ಡಿ.ಎಫ್. ಮಡ್ಲಿ, ಪಿ.ಜಿ.ಪಾಟೀಲ, ಎಂ.ಪಿ. ಕುಸೂರ, ಜಿ.ಪಂ.ಸದಸ್ಯೆ ರತ್ನಕ್ಕ ನಿಂಬಾಯಿ, ಸತೀಶ ಹರಿಹರ, ಫಣಿರಾಜ ಹದಳಗಿ, ಶ್ರೀಧರ ಡೋರಿ, ಬಾಬಣ್ಣ ಸಾಲಗಾವಿ, ಶಿವರಾಜ ಸುಬ್ಬಾಯವರ, ರಾಘವೇಂದ್ರ ಶಿರಾಲಿ, ಮಂಜುನಾಥ ಹರ್ಮಲಕರ, ರಾಘವೇಂದ್ರ ಕೊಲ್ಲಾ ಪುರ, ಉದಯ ಗೋಸಾವಿ, ಶಿವಪುತ್ರ ಮಲವಳ್ಳಿ, ಉದಯ ಬೆಂಡ್ಲಗಟ್ಟಿ, ವೀರಭದ್ರ ಶೇರಖಾನೆ, ತುಕಾರಾಮ ಇಂಗಳೆ, ರಾಮಣ್ಣ ಪಾಲೇಕರ ಇತರರು ಉಪಸ್ಥಿತರಿದ್ದರು.ಶಿರಸಿ ವರದಿ

ಮೊಘಲರ ಗುಲಾಮಗಿರಿ ಭಾರ ತೀಯ ಸಂಸ್ಕೃತಿಯ ಮೇಲೆ ಕೆಟ್ಟ ಪ್ರಭಾವ ಬೀರುವ ಹಂತದಲ್ಲಿ ಈ ನೆಲದ ಸಂಸ್ಕೃತಿ, ನಂಬಿಕೆ ಉಳಿಸಿದ್ದು ಶಿವಾಜಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಇತಿಹಾಸದ ಪುಟ ತೆರೆದಾಗ ಅಖಂಡ ಭಾರತದಲ್ಲಿ ಗುಲಾಮಗಿರಿಯೇ ಪ್ರಧಾನ ವಾಗಿದ್ದು, ಭಾರತೀಯ ಸಂಸ್ಕೃತಿ ಮತ್ತು ನಂಬಿಕೆ ಧ್ವಂಸಗೊಳಿಸುವ ಮೊಘಲರ ಪ್ರಯತ್ನ ಎದ್ದು ಕಾಣುತ್ತದೆ. ಹೆಂಗಸರ ಮಾನಹರಣ, ದೇವಸ್ಥಾನ ಧ್ವಂಸ ದಂತಹ ಘೋರ ಕೃತ್ಯಗಳನ್ನು ದೇಶದ ಜನ ಎದುರಿಸುತ್ತಿರುವಾಗ ಶಿವಾಜಿ ಸಾಮಾನ್ಯ ಜನರನ್ನು ಸಂಘಟಿಸಿ ಮೊಘಲರ ಆಡಳಿತ ಕೊನೆಗಾಣಿಸಲು ಹೋರಾಟ ನಡೆಸಿದ್ದ. ಭಾರತೀಯ ಸಂಸ್ಕೃತಿ ರಕ್ಷಣೆಯಲ್ಲಿ ಬಸವಣ್ಣ ಮತ್ತು ಶಿವಾಜಿಯಂತಹ ಮಹಾನ್ ವ್ಯಕ್ತಿಗಳ ಕೊಡುಗೆ ಸಾಕಷ್ಟಿದೆ ಎಂದರು.ನಗರದ ಶಿವಾಜಿ ಚೌಕದಲ್ಲಿ ಶಿವಾಜಿ ಪುತ್ಥಳಿ ಸ್ಥಾಪಿಸಲು ಉದ್ದೇಶಿಸಿರುವ ಕಾರ್ಯ ತುಸು ವಿಳಂಬವಾಗಿದ್ದು, ಶೀಘ್ರದಲ್ಲಿ ಸ್ಥಾಪನೆ ಮಾಡಲಾಗುವುದು ಎಂದರು.ನಗರಸಭೆ ಅಧ್ಯಕ್ಷ ರವಿ ಚಂದಾವರ, ಉಪಾಧ್ಯಕ್ಷೆ ಸಂಧ್ಯಾ ಕುರ್ಡೇಕರ, ಜಿಲ್ಲಾ ಪಂಚಾಯಿತಿ ಸದಸ್ಯರಾದ   ಆರ್.ಡಿ. ಹೆಗಡೆ, ಶೋಭಾ ನಾಯ್ಕ, ಸಹಾಯಕ ಆಯುಕ್ತ ಡಾ. ಬಗಾದಿ ಗೌತಮ, ತಹಸೀಲ್ದಾರ ಎಚ್.ಕೆ.ಕೃಷ್ಣಮೂರ್ತಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಕೆ. ಶಿವಕುಮಾರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.