ವಿವಿಧ ಇಲಾಖೆಗಳ ವರ್ಗಾವಣೆ ನಿಲ್ಲಿಸಿ

7

ವಿವಿಧ ಇಲಾಖೆಗಳ ವರ್ಗಾವಣೆ ನಿಲ್ಲಿಸಿ

Published:
Updated:

ರಾಜ್ಯ ಸರ್ಕಾರದ ಘೋಷಣೆ ಪ್ರಕಾರ ನೌಕರರ ವರ್ಗಾವಣೆ ಪ್ರಕ್ರಿಯೆ ಅವಧಿ ಆಗಸ್ಟ್ 31ಕ್ಕೆ ಮುಗಿದಿದೆ. ಆದರೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಆದೇಶಗಳು ಇನ್ನೂ ಹೊರಬೀಳುತ್ತಲೇ ಇವೆ.ವರ್ಗಾವಣೆ ಪ್ರಕ್ರಿಯೆ ಮುಂದುವರಿದಿದೆ. ಇದರಿಂದ ಸರ್ಕಾರದ ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗುತ್ತದೆ. ನೌಕರರಿಗೂ ವರ್ಗಾವಣೆಗೊಂಡ ಸ್ಥಳಕ್ಕೆ ಹೋಗಲು ಕಷ್ಟವಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿ ತಕ್ಷಣವೇ ವರ್ಗಾವಣೆ ಸ್ಥಗಿತಗೊಳಿಸಿ ಆಡಳಿತ ಯಂತ್ರ ಚುರುಕುಗೊಳ್ಳುವಂತೆ ಮಾಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry