ಮಂಗಳವಾರ, ಮಾರ್ಚ್ 9, 2021
29 °C

ವಿವಿಧ ಉದ್ಯೋಗ ಕೋರ್ಸ್‌ಗಳ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧ ಉದ್ಯೋಗ ಕೋರ್ಸ್‌ಗಳ ಆರಂಭ

ಬೆಂಗಳೂರು:  ಭಾರತೀಯ ವಿದ್ಯಾಭವನವು ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಉದ್ಯೋಗ ಕೋರ್ಸ್‌ಗಳನ್ನು ಆರಂಭಿಸಲಿದೆ. ಗ್ರಾಮೀಣ ಮತ್ತು ನಿರುದ್ಯೋಗಿ ಯುವಕರಿಗೆ ನೆರವಾಗುವಂತಹ ವಿವಿಧ ಕೋರ್ಸ್‌ಗಳಿಗೆ ವಿದ್ಯಾಭವನ ಆದ್ಯತೆ ನೀಡಿದೆ.ಕಂಪ್ಯೂಟರ್ ಕೋರ್ಸ್‌ಗಳ ತರಬೇತಿ:
ನಗರದ ಶ್ರೀರಾಮಪುರದಲ್ಲಿರುವ ಭವನ್-ಬಿಬಿಎಂಪಿ ಪಬ್ಲಿಕ್ ಶಾಲೆಯಲ್ಲಿ ಮೈಕ್ರೊಸಾಫ್ಟ್ ಕಾರ್ಪೊರೇಷನ್ ಸಹಯೋಗದಲ್ಲಿ `ಗಾಂಧಿ ಸೆಂಟರ್ ಫಾರ್ ಕಂಪ್ಯೂಟರ್ ಲರ್ನಿಂಗ್~ ಎಂಬ ಹೆಸರಿನಲ್ಲಿ ಮೂರು ತಿಂಗಳು ಮತ್ತು ಆರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುವುದು.ಬೇಸಿಕ್ ಕಂಪ್ಯೂಟರ್, ಡಿಟಿಪಿ, ಅಕೌಂಟೆನ್ಸಿ, ಟ್ಯಾಲಿ ಹೀಗೆ 20 ರೀತಿಯ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುವುದು. ಮುಖ್ಯವಾಗಿ ಉದ್ಯೋಗ ಆಧಾರಿತ ಕೋರ್ಸ್ ಇದಾಗಿದ್ದು, ಎಸ್ಸೆಸ್ಸೆಲ್ಸಿ ನಂತರ ಓದಲು ಸಾಧ್ಯವಾಗದ ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ರೂಪಿಸಲಾಗಿದೆ.18 ವರ್ಷದಿಂದ 60 ವರ್ಷದವರೆಗಿನವರೂ ಆಸಕ್ತಿಯಿದ್ದರೆ ಇಲ್ಲಿ ಸೇರಿಕೊಳ್ಳಬಹುದು. ಕಂಪ್ಯೂಟರ್ ಕೋರ್ಸ್ ಅಕ್ಟೋಬರ್ 2 ರಂದು ಆರಂಭಗೊಳ್ಳಲಿದೆ. ರವೀಂದ್ರ ಸಾತ್ವಿಕ್ ಇನ್‌ಫೋಟೆಕ್ ಸಂಸ್ಥೆಯ ಮಾರ್ಗದರ್ಶನದಲ್ಲಿ `ಡಾ. ಕೆ.ಎಂ.ಮುನ್ಷಿ ಇನ್ಸ್‌ಟಿಟ್ಯೂಟ್ ಆಫ್ ಟಿವಿ ಪ್ರೊಡಕ್ಷನ್~ ಕೋರ್ಸ್ ಆರಂಭವಾಗಲಿದೆ.ಟೆವಿ ಪ್ರೊಡಕ್ಷನ್ ಕೋರ್ಸ್:  ಟಿವಿ ಮಾಧ್ಯಮಗಳಲ್ಲಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ನಿರುದ್ಯೋಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಯುವಕರು ಇಲ್ಲಿ ತರಬೇತಿ ಪಡೆಯಬಹುದು.

ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಪ್ರಾಯೋಗಿಕ ತರಬೇತಿಗಳನ್ನು ನಡೆಸಲಾಗುವುದು. ರಿಯಾಲಿಟಿ ಶೋ, ಗೇಮ್ ಶೋ, ಧಾರಾವಾಹಿ, ಟಾಕ್ ಶೋ ಕಾರ್ಯಕ್ರಮಗಳ ನಿರ್ಮಾಣ ಮತ್ತು ಅದರಲ್ಲಿ ನಡೆಯುವ ಕ್ಯಾಮರಾ ಕೆಲಸ, ಕಥಾವಸ್ತು ಬರೆಯುವ ರೀತಿ, ಅದರಲ್ಲಿನ ಕ್ರಿಯಾಶೀಲತೆಯ ಬಗ್ಗೆ ಮಾಹಿತಿ ನೀಡಲಾಗುವುದು.ಒಳಾಂಗಣ ಚಿತ್ರೀಕರಣ ಮತ್ತು ಹೊರಾಂಗಣ ಚಿತ್ರೀಕರಣದ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು. ಇಲ್ಲಿ ಪಾಠಗಳ ಮೂಲಕವೂ ಹೇಳಿಕೊಡಲಾಗುವುದು. ವಿದ್ಯಾರ್ಥಿಗಳಿಗೆ ಟಿವಿ ಮಾಧ್ಯಮದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ಬಗ್ಗೆ ತರಬೇತಿ ನೀಡಲಾಗುವುದು .ಕೋರ್ಸ್ ಒಂದೂವರೆ ತಿಂಗಳುಗಳ ಕಾಲ ನಡೆಯುತ್ತದೆ. ಎರಡು ವಿಭಾಗ ಮಾಡಿ ತರಬೇತಿ ನೀಡಲಾಗುತ್ತದೆ. ಮೊದಲ ವಿಭಾಗ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಇರುತ್ತದೆ. ಎರಡನೆಯ ವಿಭಾಗ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ. ಸೋಮವಾರದಿಂದ ಶುಕ್ರವಾರದವರೆಗೆ ತರಗತಿಗಳು ನಡೆಯಲಿವೆ. ಆಗಸ್ಟ್ ಕೊನೆಯ ವಾರದಲ್ಲಿ ಕೋರ್ಸ್ ಆರಂಭವಾಗಲಿದೆ. ಕೋರ್ಸ್‌ಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಆಗಿರಬೇಕು. ಪಿಯುಸಿ, ಯಾವುದೇ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಉತ್ತೀರ್ಣರಾಗಿರಬೇಕು. ನಿರುದ್ಯೋಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಆದ್ಯತೆ ನೀಡಲಾಗುವುದು. ಕೋರ್ಸ್‌ನ ಶುಲ್ಕ ಒಟ್ಟು 10,000 ರೂಪಾಯಿ. ವಿದ್ಯಾಭವನದ ಬೆಂಗಳೂರು ಕೇಂದ್ರದಲ್ಲಿ ತರಗತಿಗಳು ನಡೆಯಲಿವೆ.ಹೆಚ್ಚಿನ ಮಾಹಿತಿಗೆ ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ದೂರವಾಣಿ ಸಂಖ್ಯೆ-2226 7303 ಅಥವಾ 2226 5746.

ಸ್ವ ಉದ್ಯೋಗ: ಯುವಕರಿಗೆ ದಾರಿದೀಪ

`ಭಾರತೀಯ ವಿದ್ಯಾಭವನವು 75 ವರ್ಷಗಳ ಇತಿಹಾಸದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಎರಡು ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಬಡ ಮಕ್ಕಳಿಗೆ ಈ ಕೋರ್ಸ್‌ಗಳು ನೆರವಾಗಲಿವೆ. ಯುವಕರು ಸ್ವ ಉದ್ಯೋಗ ಮಾಡಲು ಅಥವಾ ಉದ್ಯೋಗ ಪಡೆಯಲು ಈ ಕೋರ್ಸ್‌ಗಳು ದಾರಿದೀಪವಾಗಲಿವೆ~.

-ಎಚ್.ಎನ್.ಸುರೇಶ್

ಭಾರತೀಯ ವಿದ್ಯಾಭವನ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.