ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

7

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

Published:
Updated:
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಬೆಂಗಳೂರು: ಮಲೆನಾಡು ಸ್ಪೋರ್ಟ್ಸ್ ಅಂಡ್ ಕಲ್ಚರಲ್ ರಿಕ್ರಿಯೇಷನ್ ಕ್ಲಬ್ ಮತ್ತು ಮಲೆನಾಡು ಸಂಘವು ನಗರದ ಪುರಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.ಹೃದಯ ತಜ್ಞ ಡಾ.ರಾಜ್ ಪಿ ಗೌಡ, ಕ್ರೀಡಾಪಟುಗಳಾದ ಮಾ.ವಿದ್ವಾನ್ ವೀರೇಶ್ ಮತ್ತು ಎಚ್.ಎಸ್.ಜಯಂತ್‌ಪಟೇಲ್ ಅವರಿಗೆ ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಟ್ಯಾಗೋರ್ ಮತ್ತು ನಟಿ ಪೂಜಾಗಾಂಧಿ ಸನ್ಮಾನಿಸಿದರು.ಸಮಾರಂಭದ ಅಂಗವಾಗಿ ನಡೆದ ಸಾಂಸ್ಕೃತಿಕದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಗೀತೆಗಳಿಗೆ ನೃತ್ಯ ಮಾಡಿದ ಬೇಬಿ ವರ್ಷಿಣಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾದಳು. ರಾಮಾಚಾರಿ, ಪೂಜಾ, ಮೋನಿಕಾ, ಮಂಜುಶ್ರೀ  ನೃತ್ಯ ಪ್ರದರ್ಶಿಸಿದರು.ನಟಿ ರಚಿತಾಗೌಡ, ಕಾರ್ಯಾಧ್ಯಕ್ಷ ಎಂ.ಎಚ್.ಚಂದ್ರೇಗೌಡ, ಹಿರಿಯ ಉಪಾಧ್ಯಕ್ಷ ಜೆ.ಎಂ.ಶಿವಕುಮಾರ್, ಉಪಾಧ್ಯಕ್ಷ ದೊರೆಸ್ವಾಮಿ, ಕಾರ್ಯದರ್ಶಿ ಎಂ.ಎ.ದಯಾನಂದ, ಖಚಾಂಚಿ ಕೆ.ಡಿ.ತಮ್ಮೇಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಟಿ.ಕೆ.ಮಾಚಯ್ಯ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry