ವಿವಿಧ ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರ ನೇಮಕ

7

ವಿವಿಧ ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರ ನೇಮಕ

Published:
Updated:

ನೆಲಮಂಗಲ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಶುಕ್ರವಾರ ನಡೆದ ಎರಡನೇ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷ ಆಯ್ಕೆಯ ಬಿರುಸಿನ ಚುನಾವಣೆಯಲ್ಲಿ ಕೆಲವರು ಸರ್ವಾನುಮತದಿಂದ ಮತ್ತು ಕೆಲವರು ಲಾಟರಿಯಿಂದ ಮತ್ತು ಆಶ್ಚರ್ಯಕರ ರೀತಿಯಲ್ಲಿ ಆಯ್ಕೆಯಾಗಿದ್ದಾರೆ.ದೊಡ್ಡಬೆಲೆ- ಟಿ.ಕೆ.ಪುರುಷೋತ್ತಮ್ (ಅಧ್ಯಕ್ಷ), ಮಾದವಿ (ಉಪಾಧ್ಯಕ್ಷೆ) ಅವರನ್ನು ಲಾಟರಿ ಮೂಲಕ ಆಯ್ಕೆಮಾಡಲಾಯಿತು. ಸೋಲದೇವನಹಳ್ಳಿ- ಮೌನೇಶ್ ನಾಯಕ್ (ಅಧ್ಯಕ್ಷ), ಜಯಲಕ್ಷಮ್ಮ (ಉಪಾಧ್ಯಕ್ಷೆ), ಕಳಲುಘಟ್ಟ- ಸಬೀಹ ಬಾನು (ಅಧ್ಯಕ್ಷ), ಮಮತ (ಉಪಾಧ್ಯಕ್ಷೆ). ಕುಲುವನಹಳ್ಳಿ- ರೇವಮ್ಮ (ಅಧ್ಯಕ್ಷೆ), ಶಾರದಾ (ಉಪಾಧ್ಯಕ್ಷೆ), ಅರಶಿನಕುಂಟೆ- ರಾಜಣ್ಣ (ಅಧ್ಯಕ್ಷ), ಕೆಂಪರಾಜು (ಉಪಾಧ್ಯಕ್ಷ), ಸೋಂಪುರ- ತೀರ್ಥ ಪ್ರಸಾದ್ (ಅಧ್ಯಕ್ಷ), ಧನಲಕ್ಷಮ್ಮ (ಉಪಾಧ್ಯಕ್ಷ), ಹೋನ್ನೇನಹಳ್ಳಿ- ಜಗದೀಶ್ ಚೌಧರಿ (ಅಧ್ಯಕ್ಷೆ), ಚಂದ್ರಕಲಾ ಬಾಯಿ (ಉಪಾಧ್ಯಕ್ಷೆ),  ಮರಳಕುಂಟೆ -ಹನುಮಕ್ಕ (ಅಧ್ಯಕ್ಷೆ), ಶಾರದಾ (ಉಪಾಧ್ಯಕ್ಷ), ಅಗಲುಕುಪ್ಪೆ- ಅಂಚೆಮನೆ ಪ್ರಕಾಶ್ (ಅಧ್ಯಕ್ಷ), ಮಾಲಾ (ಉಪಾಧ್ಯಕ್ಷೆ), ತ್ಯಾಮಗೊಂಡ್ಲು-ಟಿ. ಎಸ್ ಜಗದೀಶ್ (ಅಧ್ಯಕ್ಷ), ರಾಧ ಹನುಮಂತರಾಜು (ಉಪಾಧ್ಯಕ್ಷ), ಯಂಟಗಾನಹಳ್ಳಿ- ವಕೀಲ ಸುರೇಶ್ (ಅಧ್ಯಕ್ಷ), ಸಿದ್ದಗಂಗಮ್ಮ (ಉಪಾಧ್ಯಕ್ಷ).ಕೆಂಗೇರಿ: ಹೋಬಳಿಯ ರಾಮೋಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ಲಕ್ಷ್ಮಣ್, ಉಪಾಧ್ಯಕ್ಷರಾಗಿ ರತ್ನಮ್ಮ ರಮೇಶ್ ಅವಿರೋಧವಾಗಿ ಆಯ್ಕೆಯಾಗ್ದ್ದಿದಾರೆಂದು ಚುನಾವಣಾ ಅಧಿಕಾರಿ ಚಂದ್ರಶೇಖರ್ ತಿಳಿಸಿದರು.

ಪಾಲಿಕೆ ಸದಸ್ಯ ಎಚ್.ಎಲ್.ಹನುಮಂತೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ ಮೊದಲಾದವರು ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿದರು. ಮಹದೇವಪುರ: ಕ್ಷೇತ್ರದ ಬಿದರಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೆ.ಮಂಜುಳಾ ಹಾಗೂ ಉಪಾಧ್ಯಕ್ಷರಾಗಿ ಜಿ.ಜ್ಯೋತಿ  ಆಯ್ಕೆಯಾಗಿದ್ದಾರೆ.ಮಂಜುಳಾ ಮತ್ತು ಜ್ಯೋತಿ ಅವರು ಕ್ರಮವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ನಾಗಮ್ಮ ಮತ್ತು ಮುನಿರತ್ನಮ್ಮ ಅವರ ವಿರುದ್ಧ 13- 8 ಮತಗಳ ಅಂತರದಿಂದ ಜಯಗಳಿಸಿದರು. ವಿಶೇಷ ತಹಶೀಲ್ದಾರ ಡಾ.ದಯಾನಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ಹೊಸಕೋಟೆ: ತಾಲ್ಲೂಕಿನ ಮುಗಬಾಳ ಗ್ರಾ.ಪಂ.ಅಧ್ಯಕ್ಷರಾಗಿ ನಿಡಘಟ್ಟ ಕ್ಷೇತ್ರ ಪ್ರತಿನಿಧಿಸಿರುವ ಬಿಜೆಪಿ ಬೆಂಬಲಿತ ವೆಂಕಟೇಶಪ್ಪ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಚುನಾವಣೆಯಲ್ಲಿ ಅವರು ಜಿ.ಎಂ.ಕೃಷ್ಣಪ್ಪ ವಿರುದ್ಧ 10-9 ಮತಗಳ ಅಂತರದಿಂದ ಜಯಗಳಿಸಿದರು. ಉಪಾಧ್ಯಕ್ಷರಾಗಿ ಅಲಸಳ್ಳಿಯ ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗು ಉಪಾಧ್ಯಕ್ಷ ಸ್ಥಾನ ಪ.ಜಾ.ಮಹಿಳೆಗೆ ಮೀಸಲಾಗಿತ್ತು.ತಾವರೆಕೆರೆ ಗ್ರಾ.ಪಂ. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಿ.ದಯಾನಂದ ಬಾಬು ಆಯ್ಕೆಯಾಗಿದ್ದಾರೆ. ಅವರು ಎಂ.ನಾರಾಯಣಪ್ಪ ವಿರುದ್ಧ 14-6 ಮತಗಳ ಅಂತರದಿಂದ ಜಯಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಎಳಚಳ್ಳಿ ಕ್ಷೇತ್ರದ ಬಯ್ಯಮ್ಮ14-6 ಮತಗಳ ಅಂತರದಿಂದ ಸರಸಮ್ಮ ವಿರುದ್ಧ ಜಯಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry