ವಿವಿಧ ಜಿಲ್ಲೆಗಳ ಶ್ರೇಷ್ಠ ಕೃಷಿಕರಿಗೆ ಪ್ರಶಸ್ತಿ

7

ವಿವಿಧ ಜಿಲ್ಲೆಗಳ ಶ್ರೇಷ್ಠ ಕೃಷಿಕರಿಗೆ ಪ್ರಶಸ್ತಿ

Published:
Updated:

ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ ಕೃಷಿ ವಿವಿಯ ಮೂರನೇ ಕೃಷಿ ಮೇಳ-2011ರ ಉದ್ಘಾಟನೆ ಸಮಾರಂಭದಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಯ 12 ಜನರಿಗೆ ಶ್ರೇಷ್ಠ ಕೃಷಿಕ ಮತ್ತು ಕೃಷಿಕ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ  ಕುರ್ಡಿ ಹೋಬಳಿಯ ಅನ್ವರಿ ಕ್ಯಾಂಪ್‌ನ ರೈತ ಎಂ ವೆಂಕಟೇಶ್ವರರೆಡ್ಡಿ( ಸಮಗ್ರ ಕೃಷಿ ಪದ್ಧತಿ ವಿಭಾಗ), ಗುಲ್ಬರ್ಗ ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ಹೋಬಳಿಯ ಗೋಳಾ ಗ್ರಾಮದ ಬಾಶುಮಿಯಾ ಖಾಸಿಮಸಾಬ್ ದಫೇದಾರ್( ಸಮಗ್ರ ಬೆಳೆ ನಿರ್ವಹಣೆ ಸಾಧನೆ), ಬೀದರ್ ಜಿಲ್ಲೆಯ ಚಿಟ್ಟಾ ಹೋಬಳಿಯ ಅಷ್ಟೂರ ಗ್ರಾಮದ ವೀರಶೆಟ್ಟಿ ಅಣ್ಣಾರಾವ್ ಮಾಲಿಪಾಟೀಲ್( ಧಾನ್ಯ ಬೆಳೆಗಳು), ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಲಿಂಗದಳ್ಳಿ ಗ್ರಾಮದ ಸತ್ಯನಾರಾಯಣ ಚೌಧರಿ (ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ), ಕೊಪ್ಪಳ ಜಿಲ್ಲೆಯ ಅಳವಂಡಿ ಹೋಬಳಿಯ ಡಂಬ್ರಳ್ಳಿ ಗ್ರಾಮದ ಆನಂದರೆಡ್ಡಿ ಇಮ್ಮಡಿ ( ಸಮಗ್ರ ಕೃಷಿ ಪದ್ಧತಿ), ಬಳ್ಳಾರಿ ಜಿಲ್ಲೆಯ ಕಮಲಾಪುರ ಗ್ರಾಮದ ಎ ಪ್ರಶಾಂತಸಿಂಗ್( ಸಮಗ್ರ ಕೃಷಿ ಪದ್ಧತಿ) ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಶ್ರೇಷ್ಠ ಕೃಷಿಕ ಮಹಿಳೆ: ಗುಲ್ಬರ್ಗ ಜಿಲ್ಲೆಯ ಮೇಳಕುಂದ ಗ್ರಾಮದ ಶಕುಂತಲಾ ಶರಣಬಸಪ್ಪ(ಸಮಗ್ರ ಬೆಳೆ ನಿರ್ವಹಣೆ), ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಸಾಯಗಾಂವ ಹೋಬಳಿಯ ವಾಂಜರಖೇಡ ಗ್ರಾಮದ ಮಂಗಳಬಾಯಿ ಸಂಗ್ರಾಮ ಬಗದೂರೆ( ತೋಟಗಾರಿಕೆ ಆಧಾರಿತ ಬೆಳೆ ಪದ್ಧತಿ ಮತ್ತು ಸಂಸ್ಕರಣೆ), ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನ ಯಂಕಂಚಿ ಗ್ರಾಮದ ನಾಗರತ್ನ ವಿಶ್ವನಾಥರೆಡ್ಡಿ ಪಾಟೀಲ( ಸುಧಾರಿತ ಬೆಳೆ ನಿರ್ವಹಣೆ), ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆರ್.ಎಚ್ ಕ್ಯಾಂಪ್‌ನ ಶೀಲಾ ಸಿಕ್ಧರ್ ಸುಧನ್ಯ ಸಿಕ್ಧರ್( ಸಮಗ್ರ ಕೃಷಿ ಪದ್ಧತಿ), ಕೊಪ್ಪಳ ಜಿಲ್ಲೆಯ ಅಳವಂಡಿ ಹೋಬಳಿಯ ಕಾತರಿಕಿ ಗ್ರಾಮದ ಗಂಗಮ್ಮ ಶ್ರೀನಿವಾಸಗೌಡ ನಾಗನಗೌಡರ್(ಸಮಗ್ರ ಕೃಷಿ ), ಬಳ್ಳಾರಿ ಜಿಲ್ಲೆಯ ಶ್ರೀಧರಗಡ್ಡೆ ಗ್ರಾಮದ ಸಿದ್ಧಬಸಮ್ಮ ಕಟ್ಟೆಪ್ಪ ಪುರದ( ಸಮಗ್ರ ಕೃಷಿ) ಅವರಿಗೆ ಪ್ರಶಸ್ತಿಯನ್ನು ಅತಿಥಿಗಳು ಪ್ರದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry