ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

7
`ಡಿ'ಗ್ರೂಪ್ ನೌಕರರಿಂದ ಸರ್ಕಾರಕ್ಕೆ ಮನವಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

Published:
Updated:

ಹೊಸಪೇಟೆ: ತಮ್ಮ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಗ್ರೂಪ್ `ಡಿ' ನೌಕರರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಮಂಗಳವಾರ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಹೊಸಪೇಟೆ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಅಧ್ಯಕ್ಷ ಬಿ.ಮಾರೆಣ್ಣ ನೇತೃತ್ವದ ಪದಾಧಿಕಾರಿಗಳು ಹಾಗೂ ನೌಕರರು  ಮನವಿ ಪತ್ರ ಸಲ್ಲಿಸಿದರು.ಪ್ರತಿತಿಂಗಳು ಸರಿಯಾದ ಸಮಯಕ್ಕೆ ವೇತನ ನೀಡಬೇಕು, ಸರ್ಕಾರಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ಧೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು, ಗುತ್ತಿಗೆ ಆಧಾರರ ನೇಮಕ ನಿಲ್ಲಬೇಕು, ನೌಕರರನ್ನು ಕಾಯಂಗೊಳಿಸಬೇಕು, ಪಡಿತರ ನೀಡಬೇಕು, ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕು, ಪದವಿವರೆಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು, ವಿದ್ಯಾವಂತ ನೌಕರರಿಗೆ ಬಡ್ತಿ ನೀಡಬೇಕು, ಅರ್ಧ ಬೆಲೆಯಲ್ಲಿ ನಿವೇಶನ ನೀಡಬೇಕು ಡಿ ಗ್ರೂಪ್ ಕಲ್ಯಾಣ ನಿಧಿ ಸ್ಥಾಪನೆಯಾಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದರು.

ಅಧ್ಯಕ್ಷ ಬಿ.ಮಾರೆಣ್ಣ, ಉಪಾಧ್ಯಕ್ಷ ಬಿ.ಚಂದಾಹುಸೇನ್, ಕಾರ್ಯದರ್ಶಿ ಟಿ.ರಾಮಣ್ಣ, ಖಚಾಂಚಿ ಕೃಷ್ಣ , ತ್ರೇಸಿ. ಗೌರಮ್ಮ ಅನ್ನಪೂರ್ಣ ಸೇರಿದಂತೆ ಅನೇಕರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry