ಬುಧವಾರ, ಅಕ್ಟೋಬರ್ 23, 2019
27 °C

ವಿವಿಧ ಬೇಡಿಕೆ: ಸಚಿವೆಗೆೆ ರೈತ ಸಂಘ ಮನವಿ

Published:
Updated:

ಹುಮನಾಬಾದ್: ರೈತರ ನಿರಾವರಿ ಪಂಪಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದು ಮೊದಲಾದ ಬೇಡಿಕೆಗಳ ಕುರಿತು ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿ.ಕೆ.ಪಾಟೀಲ ನೇತೃತ್ವದಲ್ಲಿ ಸಚಿವೆ ಶೋಭಾ ಕರಂದ್ಲಾಜೆಗೆ ಗುರುವಾರ ಮನವಿಪತ್ರ ಸಲ್ಲಿಸಿದರು.ಬೀದರ್ ಜಿಲ್ಲೆಯ ಮಣ್ಣು ಕೃಷಿಗೆ ಪೂರಕ ಎಂಬ ಕಾರಣಕ್ಕಾಗಿ ಪೂರ್ವಜರು ಕೃಷಿಯನ್ನೇ ಅವಲಂಬಿಸಿದ್ದರು. ಹಲಿರುಳರು ಶ್ರಮಿಸಿ, ನಾಡಿಗೆ ಜನತೆಗೆ ಅನ್ನ ನೀಡುವ ರೈತರಿಗೆ ಕೊಟ್ಟ ಮಾತಿನಂತೆ 6ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಅದನ್ನು ಬಿಟ್ಟು ಒಂದು, ಎರಡು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಹುಟ್ಟು ಹೋರಾಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾದ ತಾವು ರೈತರ ಸಮಸ್ಯೆ ಅರಿತು ಪರಿಹರಿಸಲು ಪ್ರಾಮಾಣಿಕ ಪ್ರಯತ್ನಿಸುವುದು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವೆ ಕರಂದ್ಲಾಜೆಗೆ ಸಲ್ಲಿಸಲಾದ ಮನವಿಪತ್ರದಲ್ಲಿ ತಿಳಿಸಲಾಗಿದೆ.ಮನವಿ ಸ್ವೀಕರಿಸಿದ ಸಚಿವೆ ಶೋಭಾ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮೈನೋದ್ಗಿನ್ ಲಾಡ್ಜಿ, ಹುಮನಾಬಾದ್ ಅಧ್ಯಕ್ಷ

ಸತೀಶ ನನ್ನೂರೆ, ಶ್ರೀಮಂತ ಬಿರಾದಾರ, ಸಿದ್ರಾಮಪ್ಪ, ಸಿದ್ದಪ್ಪ ಸಣಮಣಿ, ಪ್ರಮುಖರಾದ ಪ್ರಕಾಶ ಬಾವಗಿ, ನಾಗಶೆಟ್ಟಿ ಬಿರಾದಾರ, ಭೀಮರಾವ ಮುಸ್ತಾಪೂರೆ ಮೊದಲಾದವರು ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)