ವಿವಿಧ ವೇತನ ಸೌಲಭ್ಯ: ತಪ್ಪದ ಅರ್ಜಿದಾರರ ಬವಣೆ

ಬುಧವಾರ, ಜೂಲೈ 24, 2019
28 °C

ವಿವಿಧ ವೇತನ ಸೌಲಭ್ಯ: ತಪ್ಪದ ಅರ್ಜಿದಾರರ ಬವಣೆ

Published:
Updated:

ಆಳಂದ: ಸಂಧ್ಯಾ ಸುರಕ್ಷಾ, ವಿಧವಾ ಮತ್ತು ಅಂಗವಿಕಲ ವೇತನ ಪಡೆಯಲು ತಾಲ್ಲೂಕಿನ ನೂರಾರು ಅರ್ಜಿದಾರರು, ವೃದ್ದರು ದಿನವೆಲ್ಲಾ ಸರದಿ ಸಾಲಿನಲ್ಲಿ ನಿಂತು ಕಷ್ಟ ಅನುಭವಿಸುವಂತಾಗಿದೆ. ತಹಶೀಲ್ದಾರ ಕಚೇರಿ ಹಿಂಭಾಗದಲ್ಲಿರುವ ಕಿಟಕಿ ಮೂಲಕ ಅರ್ಜಿಗಳನ್ನು ಸ್ವೀಕರಿಸುತ್ತಿರುವ ಸಿಬ್ಬಂದಿಗಳಿಗೂ, ವಿದ್ಯುತ್ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ಕೆಲಸಮಾಡಲಾಗುತ್ತಿಲ್ಲ.ವಿದ್ಯುತ್ ಸಮಸ್ಯೆಯಿಂದಾಗಿ ತಾಲ್ಲೂಕಿನ ಮಟಕಿ, ಆಳಂಗಾ, ಕಡಗಂಚಿ, ತೀರ್ಥ, ಚಿಂಚೋಳಿ ಗ್ರಾಮಗಳಿಂದ ಮತ್ತು ಪಟ್ಟಣದ ನಿವಾಸಿಗಳೂ ಸೇರಿದಂತೆ ವಿವಿಧೆಡೆಯಿಂದ ಬುಧವಾರ ನೆಮ್ಮದಿ ಕೇಂದ್ರಕ್ಕೆ ಬಂದಿದ್ದವರು ತೊಂದರೆಗೊಳಗಾದರು. ಮಂಗಳವಾರ  ಮಾಡಿಯಾಳ ಮತ್ತು ಮಾದನಹಿಪ್ಪರಗಾದಿಂದ ಬಂದಿದ್ದ 12 ಜನ ಅರ್ಜಿದಾರರು ರಾತ್ರಿ ಇಲ್ಲಿಯೇ ಉಳಿದುಕೊಂಡಿದ್ದರು. `ಮಧ್ಯಾಹ್ನದವರೆಗೂ ತಮ್ಮ ಸರದಿ ಬರಲಿಲ್ಲ~ ಎಂದು ಅವರು `ಪ್ರಜಾವಾಣಿ~ಯೊಂದಿಗೆ ಗೋಳು ಹೇಳಿಕೊಂಡರು.ಕಳೆದ ವರ್ಷ ಸುಮಾರು 12 ಸಾವಿರ ಅರ್ಜಿಗಳು ಸಲ್ಲಿಸಿದರೂ ಇದುವರೆಗೆ ವಿಲೇವಾರಿ ನಡೆದಿಲ್ಲ. ನಕಲಿ ಫಲಾನುಭವಿಗಳ ಹಾವಳಿ ತಡೆಯುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ಅರ್ಜಿ ಸ್ವೀಕರಿಸುವುದನ್ನು ನಿಲ್ಲಿಸಿದ್ದರಿಂದ ತಾಲ್ಲೂಕು ಕೇಂದ್ರದಲ್ಲಿ ಹೆಚ್ಚಿನ ದಟ್ಟಣೆ ಹೆಚ್ಚಾಗಿದೆ.ಸಮರ್ಪಕ ಮಾಹಿತಿ ಕೊರೆತೆಯಿಂದ ಅರ್ಜಿದಾರರಲ್ಲಿ ಗೊಂದಲ ಉಂಟಾಗಿದೆ. ಆದಾಯ, ಜನನ-ಮರಣ ಪ್ರಮಾಣ ಪತ್ರ ಹಾಗೂ ಅಂಗವಿಕಲರಿಗೆ ನೀಡುವ ವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಹೀಗೆ ಹಲವು ಮಾಹಿತಿಗಳನ್ನು ಪೂರೈಸಲು ಅರ್ಜಿದಾರರು ಎಡತಾಕುವಂತಾಗಿದೆ. `ಹೊಬಳಿ ಮಟ್ಟದಲ್ಲಿ ಅರ್ಜಿ ಸ್ವೀಕರಿಸಲು ಹೆಚ್ಚಿನ ಸಿಬ್ಬಂದಿ ನೇಮಿಸಿ~ ಎಂದು ಅಂಗವಿಕಲರ ಸಂಘದ ಸದಸ್ಯ ತೈಯಬ ಅಲಿ, ಸಂಗಪ್ಪ ತಡಕಲೆ ಹಾಗೂ ರಾಜಶೇಖರ ಶಿವಮೂರ್ತಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry