ಸೋಮವಾರ, ಜೂನ್ 21, 2021
23 °C
ಮಹಿಳಾ ಮೀಸಲಾತಿ ಸೇರಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹ

ವಿವಿಧ ಸಂಘಟನೆಗಳ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಿಳೆಯರಿಗೆ ಶೇ 33 ಮೀಸಲಾತಿ ಕಲ್ಪಿಸುವ ‘ಮಹಿಳಾ ಮೀಸಲಾತಿ ಮಸೂದೆ’ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿ ಕೆಗೆ ಒತ್ತಾಯಿಸಿ  ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಪ್ರಜ್ಞಾ ಕಾನೂನು ಸಲಹಾ ಸಮಿತಿ ಹಾಗೂ ಶಿಕ್ಷಕರ ವೇದಿಕೆ ಸದಸ್ಯರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಧರಣಿ ನಡೆಸಿದರು.ರಾಜಕೀಯ ಪಕ್ಷಗಳು ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡ ಬೇಕು. ಎಲ್ಲ ಅಗತ್ಯ ಮೂಲ ಸೌಕರ್ಯ ವ್ಯವಸ್ಥೆ ಇರುವ ಮತಗಟ್ಟೆಗಳಿಗೆ ಮಾತ್ರ ಮಹಿಳೆಯರನ್ನು ನಿಯೋಜಿಸಬೇಕು. ಯಾವ ಕೇಂದ್ರಕ್ಕೂ ಒಂಟಿ ಮಹಿಳೆ ಯನ್ನು ನಿಯೋಜಿಸಬಾರದು. ಕನಿಷ್ಠ ಇಬ್ಬರು ಮಹಿಳೆಯರು ಇರಬೇಕು.  ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಗಳನ್ನು ನಿಯೋಜಿಸಿದಲ್ಲಿ ಕನಿಷ್ಠ ಇಬ್ಬರು ಇರಬೇಕು.ಮಹಿಳೆ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಸಮಿತಿ ರಚಿಸಬೇಕು. ನ್ಯಾ. ವರ್ಮಾ ಸಮಿತಿ ಶಿಫಾರಸು ಜಾರಿ ಮಾಡಬೇಕು. ಕೌಟುಂಬಿಕ ದೌರ್ಜನ್ಯ ತಡೆ, ವರದಕ್ಷಿಣೆ ನಿಷೇಧ, ಬಾಲ್ಯ ವಿವಾಹ ತಡೆ, ಆಸ್ತಿ ಹಕ್ಕು ಕಾಯಿದೆಗಳ ಜಾರಿಗೆ ಜಿಲ್ಲಾಡಳಿತ ಗಂಭೀರ ಕ್ರಮ ವಹಿಸ ಬೇಕು. ಕರ್ನಾಟಕ ಮಹಿಳಾ ಆಯೋಗ ವನ್ನು ಪುನರ್‌ರಚಿಸಬೇಕು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಮಾನ ಹಕ್ಕುಗಳನ್ನು ನೀಡಬೇಕು.ಬಾಡಿಗೆ ಮನೆ ಪಡೆಯುವುದರಿಂದ ಹಿಡಿದು ಎಲ್ಲ ಕ್ಷೇತ್ರದಲ್ಲಿಯೂ ದಲಿತ ಮಹಿಳೆಯರು ತಾರತಮ್ಯಕ್ಕೆ ಒಳಗಾಗು ತ್ತಿದ್ದಾರೆ. ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಅಂಗನ ವಾಡಿ ಖಾಸಗೀಕರಣವನ್ನು ಕೈ ಬಿಟ್ಟು, ಅಂಗನವಾಡಿ, ಆಶಾ, ಬಿಸಿಯೂಟ ಮತ್ತಿತರರ ಕೆಲಸಗಾರರನ್ನು ಕಾಯಂ ಗೊಳಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.ಅವಶ್ಯಕ ವಸ್ತುಗಳನ್ನು ವಿತರಿಸುವ ಪಡಿತರ ವ್ಯವಸ್ಥೆ ಸಾರ್ವತ್ರೀಕರಣ ಗೊಳಿಸಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ, ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಸಿಗುವಂತೆ ಮಾಡಬೇಕು. ಸ್ವ–ಸಹಾಯ ಸಂಘ, ಸ್ತ್ರೀ ಶಕ್ತಿ ಸಂಘಗಳನ್ನು ಬಲಪಡಿಸ ಬೇಕು. ಮಾಸಾಶನ, ಮನೆ ಹಂಚಿಕೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಅಶಕ್ತರಿಗೆ ಸರ್ಕಾರ ಆಸರೆಯಾಗಬೇಕು ಎಂದು ಆಗ್ರಹಿಸಿದರು.ಸರ್ಕಾರಿ ನೌಕರರ ಸಂಘ, ಈಶಾನ್ಯ ವಲಯ ಶಿಕ್ಷಕರ ವೇದಿಕೆ, ಜ್ಞಾನ ವಿಜ್ಞಾನ ಸಮಿತಿ ಸೇರಿದಂತೆ ಹತ್ತು ಹಲವು ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿ ಧರಣಿಯಲ್ಲಿ ಪಾಲ್ಗೊಂಡವು. ಮಹಿಳೆಯರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ ಧರಣಿಯಲ್ಲಿ ಪುರುಷರೂ ಪಾಲ್ಗೊಂಡಿರುವುದು ವಿಶೇಷವಾಗಿತ್ತು.ನೀಲಾ ಕೆ, ಡಾ.ಮೀನಾಕ್ಷಿ ಬಾಳಿ, ಜಗದೇವಿ ನೂಲಕರ್‌, ಶೋಭಾ ಬಾಣಿ, ಶಶಿಕಲಾ ಕಟಕೆ, ಡಾ.ಪ್ರಭು ಖಾನಾಪುರೆ, ಶ್ರೀಶೈಲ ಘೂಳಿ, ರಾಜು ಲೇಂಗಟಿ, ಎಂ.ಬಿ. ಅಂಬಲಗಿ, ಶರಣ ಬಸವನಗೌಡ ಪಾಟೀಲ್‌, ಚನ್ನ ವೀರಯ್ಯಸ್ವಾಮಿ, ಅರುಣ ಕುಮಾರ್‌, ವಿಠಲ ಚಿಕಣಿ, ಸುಂದರರಾಜ್‌ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.