ವಿ.ವಿ ಮೂವರು ಸಹಾಯಕ ಪ್ರಾಧ್ಯಾಪಕರಿಗೆ ಪ್ರಶಸ್ತಿ

7

ವಿ.ವಿ ಮೂವರು ಸಹಾಯಕ ಪ್ರಾಧ್ಯಾಪಕರಿಗೆ ಪ್ರಶಸ್ತಿ

Published:
Updated:

ತುಮಕೂರು: ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ನೀಡುವ 2011- 12ನೇ ಸಾಲಿನ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಪ್ರೋತ್ಸಾಹಕ ಕಾರ್ಯಕ್ರಮಗಳ ಮೂರು ಪ್ರಶಸ್ತಿಗಳು ತುಮಕೂರು ವಿಶ್ವವಿದ್ಯಾನಿಲಯದ ಮೂವರು ಸಹಾಯಕ ಪ್ರಾಧ್ಯಾಪಕರಿಗೆ ಲಭಿಸಿವೆ.ಶ್ರೇಷ್ಠ ಸಂಶೋಧನಾ ಪ್ರಬಂಧಗಳಿಗೆ ನೀಡಲಾಗುವ `ವಿಶನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ    (ವಿಜಿಎಸ್‌ಟಿ) ಅವಾರ್ಡ್ ಫಾರ್ ಬೆಸ್ಟ್ ರೀಸರ್ಚ್ ಪಬ್ಲಿಕೇಶನ್~ ಪ್ರಶಸ್ತಿಯು ವಿ.ವಿ ವಿಜ್ಞಾನ ಕಾಲೇಜು ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್. ನಾಗಭೂಷಣ್ ಅವರಿಗೆ ಲಭಿಸಿದೆ.ಯುವ ವಿಜ್ಞಾನಿಗಳ ಸಂಶೋಧನೆಗಾಗಿ ಮೂಲಧನ ಕೊಡಮಾಡುವ `ವಿಶನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ (ವಿಜಿಎಸ್‌ಟಿ) ಸೀಡ್ ಮನಿ ಟು ಯಂಗ್ ಸೈಂಟಿಸ್ಟ್ ಫಾರ್ ರೀಸರ್ಚ್~ ಪ್ರಶಸ್ತಿ ಜತೆಗೆ ರೂ. 4 ಲಕ್ಷ ಮೂಲ ಧನವನ್ನು ವಿಜ್ಞಾನ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಜೀವ ರಸಾಯನಶಾಸ್ತ್ರ ವಿಭಾಗದ ಡಾ.ಎಸ್. ನಾಗರಾಜು ಹಾಗೂ ಡಾ.ಟಿ..ಎನ್. ರಮೇಶ್ ಅವರಿಗೆ ಲಭಿಸಿದೆ.ಬೆಂಗಳೂರು ಜೆಆರ್‌ಡಿ ಟಾಟಾ ಸ್ಮಾರಕ ಸಭಾಂಗಣದಲ್ಲಿ ಗುರುವಾರ ಪ್ರಶಸ್ತಿ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry