ವಿವೆು ಸೌಲಭ್ಯ: ಅಪೆಕ್ಸ್ ಬ್ಯಾಂಕ್ ಒಪ್ಪಂದ

7

ವಿವೆು ಸೌಲಭ್ಯ: ಅಪೆಕ್ಸ್ ಬ್ಯಾಂಕ್ ಒಪ್ಪಂದ

Published:
Updated:

ಬೆಂಗಳೂರು: ಗ್ರಾಹಕರಿಗೆ ವಿಮೆ ಸೌಲಭ್ಯ (ಬ್ಯಾಂಕ್ ಅಶುರನ್ಸ್) ಒದಗಿಸಲು, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಮತ್ತು ಫ್ಯೂಚರ್ ಜನರಲಿ ಲೈಫ್ ಇನ್ಶುರನ್ಸ್ ಒಪ್ಪಂದ ಮಾಡಿಕೊಂಡಿವೆ.

ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳ ಒಕ್ಕೂಟವಾಗಿರುವ ಮತ್ತು ಈ ವಲಯದ ಅತ್ಯಂತ ವಿಶ್ವಾಸಾರ್ಹವಾದ ಅಪೆಕ್ಸ್ ಬ್ಯಾಂಕ್‌ನ ಗ್ರಾಹಕರಿಗೆ ಸಮಗ್ರ ವಿಮೆ ಸೌಲಭ್ಯಗಳನ್ನು ಒದಗಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಫ್ಯೂಚರ್ ಜನರಲಿ ಇಂಡಿಯಾ ಲೈಫ್ ಇನ್ಶುರನ್ಸ್  ವ್ಯವಸ್ಥಾಪಕ ನಿರ್ದೇಶಕ ದೀಪಕ್ ಸೂದ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಒಪ್ಪಂದದ ಫಲವಾಗಿ ಅಪೆಕ್ಸ್ ಬ್ಯಾಂಕ್ ಗ್ರಾಹಕರಿಗೆ ವಿಮೆ ರಕ್ಷಣೆಯ ಲಾಭ ವಿಸ್ತರಿಸಲು ಸಾಧ್ಯವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ್‌ಗೌಡ, ಕಾರ್ಯದರ್ಶಿ ಎಚ್. ಎಸ್. ನಾಗರಾಜಯ್ಯ, ಪ್ರಧಾನ ವ್ಯವಸ್ಥಾಪಕ ನಿಂಗೇಗೌಡ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry