`ವಿವೇಕದ ಕಣ್ಣು ತೆರೆಸಿದ ವಿವೇಕಾನಂದ'

7

`ವಿವೇಕದ ಕಣ್ಣು ತೆರೆಸಿದ ವಿವೇಕಾನಂದ'

Published:
Updated:

ಹೂವಿನಹಡಗಲಿ: `ದೇಶದ ಯುವಜನಾಂಗಕ್ಕೆ ವಿವೇಕದ ಕಣ್ಣು ತೆರೆಸಿದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಸರ್ವಕಾಲಿಕ ಸತ್ಯ' ಎಂದು ಜಿಬಿಆರ್ ಕಾಲೇಜಿನ ಪ್ರಾಧ್ಯಾಪಕ ಎಸ್.ಎಸ್. ಪಾಟೀಲ್ ಪ್ರತಿಪಾದಿಸಿದರು.ಪಟ್ಟಣದ ಜಿಬಿಆರ್ ಕಾಲೇಜು ಆವರಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಅಂಗವಾಗಿ `ಮನೆ ಮನೆಗೆ ಸ್ವಾಮಿ ವಿವೇಕಾನಂದ ಅಭಿಯಾನ' ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತಿ ಸಂಪದ್ಭರಿತ ರಾಷ್ಟ್ರದಲ್ಲಿ ಆಂತರಿಕ ಸಾಮಾಜಿಕ ವ್ಯವಸ್ಥೆಗಳು ಅಧೋಗತಿಗೆ ಇಳಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಶ್ರಮ ಸಂಸ್ಕೃತಿ ಕೈ ಬಿಟ್ಟು ವಿಲಾಸಿ ಬದುಕು ಆಪೇಕ್ಷಿಸುವವರ ಸಂಖ್ಯೆ ಹೆಚ್ಚಾಗಿರುವುದು ಕೂಡ ದೇಶದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದರು.ಕೂಡ್ಲಿಗಿಯ ವರ್ತಕ ಅನಂತಪದ್ಮನಾಭ, ಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹಿಗಳಾಗದೇ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗುವ ಮೂಲಕ ಮನಸ್ಸು ಪರಿವರ್ತಿಸುವ ಕೆಲಸ ಆಗಬೇಕಿದೆ ಎಂದರು. ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕೆ.ಪಂಪಾಪತಿ ರಾವ್ ಅಧ್ಯಕ್ಷತೆ ವಹಿಸಿ ದ್ದರು. ಗುರುರಾಜ್, ಹಾಲೇಶ್ ನಾಯ್ಕ ಇತರರು ಭಾಗವಹಿಸಿದ್ದರು.ಎ.ಉಮಾಪತಿ ಪ್ರಾರ್ಥನಾ ಗೀತೆ ಹಾಡಿದರು. ಎಚ್.ಪೂಜಪ್ಪ ಸ್ವಾಗತಿಸಿದರು. ಉಪನ್ಯಾಸಕ ಎಚ್.ಎಂ.ಗುರುಬಸವರಾಜಯ್ಯ ನಿರೂಪಿಸಿದರು. ಗಣೇಶ ಆಚಾರ್ಯ ವಂದಿಸಿದರು. ನಂತರ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದರ ಭಾವ ಚಿತ್ರ ಮತ್ತು ಕರಪತ್ರಗಳನ್ನು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry