ಬುಧವಾರ, ಅಕ್ಟೋಬರ್ 16, 2019
21 °C

ವಿವೇಕಾನಂದರ ಆದರ್ಶ ಪಾಲಿಸಿ

Published:
Updated:

ಚಾಮರಾಜನಗರ: `ಸ್ವಾಮಿ ವಿವೇಕಾ ನಂದರು ಯುವಜನರ ಶಕ್ತಿಯಾಗಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ~ ಎಂದು ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ನಗರದ ಪ್ರಕಾಶ ಭವನದಲ್ಲಿ ಗುರುವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ನಡೆದ `ಉಜ್ವಲ ಭಾರತ ಕ್ಕಾಗಿ ಯುವ ಜಾಗೃತಿ~ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.ವಿವೇಕಾನಂದರು ಅಲ್ಪಕಾಲ ಬದುಕಿ ದ್ದರೂ ಯುವಜನರು ಜ್ಞಾನದೆಡೆಗೆ ಸಾಗಲು ಪ್ರೇರಣೆ ನೀಡಿದ್ದರು. ಅವ ರೊಬ್ಬ ಶ್ರೇಷ್ಠ ದಾರ್ಶನಿಕರಾಗಿದ್ದರು. ಅವರ ಬದುಕು ವಿಭಿನ್ನವಾಗಿತ್ತು. ಅವರ ಜೀವನ ಸಂದೇಶಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.ಮೈಸೂರಿನ ರಂಗನಾಥ್ ಮಾತ ನಾಡಿದರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾ ಯಕ ನಿರ್ದೇಶಕ ಎಂ. ಚಲುವಯ್ಯ ಕಾರ್ಯಕ್ರಮ ಉದ್ಘಾಟಿಸಿದರು.ಉಪನ್ಯಾಸಕ ಸಿ.ಮಂಜುನಾಥ್, ಈಶ್ವರೀಯ ವಿವಿಯ ಜಿಲ್ಲಾ ಸಂಚಾಲಕಿ ಪ್ರಭಾಮಣಿ, ವೀಣಾ, ಆಶಾ, ಮೋಹನ್‌ಕುಮಾರಿ, ಮಂಜುನಾಥ ಆರಾಧ್ಯ, ಸತೀಶ್‌ಕುಮಾರ್, ಭಾರತಿ, ಗೀತಾ ಹಾಜರಿದ್ದರು.ಕಾರ್ಯಕ್ರಮಕ್ಕೂ ಮೊದಲು ಪ್ರವಾಸಿ ಮಂದಿರದಿಂದ ಆರಂಭವಾದ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್. ಗಂಗಣ್ಣನವರ್ ಚಾಲನೆ ನೀಡಿದರು.`ವಿವೇಕ `ವಾಣಿ~ಯೇ ಸಂಜೀವಿನಿ~

ಗುಂಡ್ಲುಪೇಟೆ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಆದರ್ಶ ಅಳವಡಿಸಿಕೊಂಡರೆ ಉತ್ತಮ ಪ್ರಜೆಗಳಾಗಲು ಸಾಧ್ಯವಾಗುತ್ತದೆ ಎಂದು ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾಮದಾಸ್ ಗುರುವಾರ ಹೇಳಿದರು.ತಾಲ್ಲೂಕಿನ ಭೀಮನಬೀಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.ಮುಖ್ಯ ಶಿಕ್ಷಕಿ ಭಟ್ಟಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಹಾದೇವಶೆಟ್ಟಿ, ಕೃಷ್ಣ, ಉಪನ್ಯಾಸಕ ಮಲ್ಲೇಶ್, ಸಹ ಶಿಕ್ಷಕರುಗಳಾದ ಹರೀಶ್, ನಂದೀಶ್, ದೈಹಿಕ ಶಿಕ್ಷಕ ಕೆ.ಪಿ. ರಾಜಪ್ಪ, ಪಾಟೀಲ್, ಪ್ರತಿಮಾ ಮುಂತಾದವರು ಭಾಗವಹಿಸಿದ್ದರು.

Post Comments (+)