ಶುಕ್ರವಾರ, ಜೂಲೈ 10, 2020
27 °C

ವಿವೇಕಾನಂದರ ಚಿಂತನೆ ಅಳವಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಭಾರತ ಕಂಡ ಮಹಾನ್ ದೇಶಭಕ್ತ, ಅದ್ಭುತ ವೀರ ಸನ್ಯಾಸಿ, ಯುವಕರ ಮೇಲೆ ಅಪಾರ ಭರವಸೆ, ನಂಬಿಕೆ ಇಟ್ಟ ಸ್ವಾಮಿ ವಿವೇಕಾನಂದರ ತತ್ವ, ಸಿದ್ಧಾಂತ, ಚಿಂತನೆಗಳನ್ನು ಇಂದಿನ ಯುವಕರು ಅರಿತು ಅವರ ಆದರ್ಶ   ಆಳವಡಿಸಿಕೊಳ್ಳಬೇಕು ಎಂದು ದೈಹಿಕ ಶಿಕ್ಷಕ ದೇವೀಂದ್ರರೆಡ್ಡಿ ದುಗನೂರ ವಿದ್ಯಾರ್ಥಿಗಳಿಗೆ ತಿಳಿಸಿದರು.ತಾಲ್ಲೂಕಿನ ಸಾತನೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 149ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾರತ ದೇಶದ ಘನತೆ, ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ, ದೇಶದ ಪ್ರಾಚೀನತೆಯ ಪ್ರಾಮುಖ್ಯತೆ, ಹಿಂದೂ ಧರ್ಮದ ಮಹತ್ವ, ಋಷಿ ಸಂಪ್ರದಾಯ ಜಗತ್ತಿಗೆ ತೋರಿಸಿಕೊಟ್ಟು ದೇಶದ ಗೌರವ ಹೆಚ್ಚಿಸಿದ ಮಹಾನ್ ಸ್ವಾಮೀಜಿಗೆ ಗೌರವ ನೀಡಬೇಕಾದರೆ ಅವರ ನೀತಿಗಳನ್ನು ಯುವಕರು ಅಳವಡಿಸಿಕೊಂಡಾಗ ಮಾತ್ರ ಅದು ಸಾರ್ಥಕತೆ ಪಡೆಯುತ್ತದೆ ಎಂದರು.ಶಿಕ್ಷಕರಾದ ಗುರುಶಾಂತಲಿಂಗಯ್ಯಾ, ವಿಜಯಕುಮಾರ, ಸಂತೋಷಕುಮಾರ ಮಾತನಾಡಿ, ಯುವಕರು ವಿವೇಕಾನಂದರಂತೆ ಸಚ್ಚಾರಿತ್ರ್ಯ ಬೆಳಸಿಕೊಂಡು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಮುಖ್ಯೋಪಾಧ್ಯಾಯಿನಿ ಸುನಂದಾ ಬಾರಡ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಭವಾನಿ,ಸುನೀಲ್,  ವಿವೇಕಾನಂದರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಕಾಶಿಬಾಯಿ ಪ್ರಾರ್ಥಿಸಿದರು. ನಶೀಮಾ, ಶಾಹೀದಾ ಸ್ವಾಗತ ಗೀತೆ ಹಾಡಿದರು. ಅಬ್ದುಲ್ ಅಜೀಜ್ ಸ್ವಾಗತಿಸಿದರು. ಅಮೀರ್ ಪಾಶಾ ನಿರೂಪಿಸಿದರು. ಶರಣಬಸ್ಸಮ್ಮ ವಂದಿಸಿದರು. ಶಿಕ್ಷಕ ಅನಂತಕುಮಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.