ವಿವೇಕಾನಂದರ ನೆನಪಿನಲ್ಲಿ ಭಾರತಕ್ಕಾಗಿ ಓಟ

7

ವಿವೇಕಾನಂದರ ನೆನಪಿನಲ್ಲಿ ಭಾರತಕ್ಕಾಗಿ ಓಟ

Published:
Updated:
ವಿವೇಕಾನಂದರ ನೆನಪಿನಲ್ಲಿ ಭಾರತಕ್ಕಾಗಿ ಓಟ

ತುಮಕೂರು: ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಪ್ರಯುಕ್ತ ಬುಧವಾರ ‘ಭಾರತಕ್ಕಾಗಿ ಓಟ’ ನಡೆಯಿತು.ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಸಮಿತಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನಡೆದ ಓಟವು ಬೆಳಿಗ್ಗೆ ತುಮ­ಕೂರು ವಿಶ್ವವಿದ್ಯಾಲಯ ಎದುರು ಆರಂಭವಾಯಿತು.ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.ಉತ್ಸವ ಸಮಿತಿ ಸದಸ್ಯರಾದ ಬೈರಪ್ಪ ಮಾತನಾಡಿ, ವಿವೇಕಾನಂದರ ಚಿಂತನೆಗಳು ಬರಹಗಳು ಇಂದಿಗೂ ಪ್ರಸ್ತುತ ಎಂದರು.ಬಿಎಚ್ ರಸ್ತೆ ಮೂಲಕ ಸಾಗಿ ಟೌನ್ ಹಾಲ್ ವೃತ್ತದ ಬಳಿ ಓಟ ಕೊನೆಗೊಂಡಿತು.  ಶಾಸಕ ಸುರೇಶ್‌­ಗೌಡ, ಮುಖಂಡರಾದ ಶ್ರೀನಿವಾಸ್, ಪ್ರದೀಪ್, ಜ್ಯೋತಿಗಣೇಶ್‌, ಎಬಿವಿಪಿ ಸಂಘಟನೆಯ ಸುಬ್ರಮಣಿ, ಶ್ರೀನಿವಾಸ, ರವಿಕುಮಾರ್, ಅಮರೇಶ, ಭಗತ್ ಕ್ರಾಂತಿ ಸೇನೆ ಆರಾಧ್ಯ, ಕಿರಣ್,  ವರ್ಷಾಚರಣೆ ಸಮಿತಿಯ ಜಿಲ್ಲಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry