ವಿವೇಕಾನಂದರ ಸಂದೇಶ ಪುಸ್ತಕ, ಭಾವಚಿತ್ರ ವಿತರಣೆ

7

ವಿವೇಕಾನಂದರ ಸಂದೇಶ ಪುಸ್ತಕ, ಭಾವಚಿತ್ರ ವಿತರಣೆ

Published:
Updated:

ಗಂಗಾವತಿ: ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆಯ ಅಂಗವಾಗಿ 150 ಜನ್ಮ ಶತಮಾನೋತ್ಸವ ಸಮಿತಿ ಹಾಗೂ ಕನ್ಯಾಕುಮಾರಿ ಸಮಿತಿಗಳ ನೇತೃತ್ವದಲ್ಲಿ ತಾಲ್ಲೂಕಿನ ಮರಳಿ ಗ್ರಾಮದಲ್ಲಿ ಈಚೆಗೆ ವಿವೇಕರ ಸಂದೇಶ ಪುಸ್ತಕ ಹಾಗೂ ಭಾವಚಿತ್ರ ವಿತರಿಸುವ ಕಾರ್ಯಕ್ರಮ ನಡೆಯಿತು.ಇದಕ್ಕೂ ಪೂರ್ವದಲ್ಲಿ ಏಳು ಮಕ್ಕಳ ತಾಯಮ್ಮ ದೇವಸ್ಥಾನದ ಹತ್ತಿರ ಇರುವ ರಾಘವೇಂದ್ರ ಸ್ವಾಮಿಗಳ ತಪೋವನದಲ್ಲಿ ಹಿಂದು ಜಾಗರಣ ವೇದಿಕೆಯಿಂದ ಭಾತೃತ್ವ ಬೆಸೆಯುವ ಸಾಮೂಹಿಕ ರಕ್ಷಾ ಬಂಧನ ಧಾರಣೆ ನಡೆಯಿತು.ಬಳಿಕ ಮರಳಿ, ಆಚಾರ ನರಸಾಪುರ ಮತ್ತು ಪ್ರಗತಿನಗರದ ಸುಮಾರು 800ಕ್ಕೂ ಹೆಚ್ಚು ಮನೆಗಳಿಗೆ  ತೆರಳಿದ ಹಿಂದು ಜಾಗರಣ ವೇದಿಕೆಯ ಯುವರು ವಿವೇಕಾನಂದರ ಸಂದೇಶವುಳ್ಳ ಪುಸ್ತಕ ಹಾಗೂ ವಿವೇಕರ ಭಾವಚಿತ್ರ ವಿತರಿಸಿದರು. ಅಯ್ಯನಗೌಡ ಹೇರೂರು, ಮಂಜುನಾಥ ಹೊಸಕೇರಿ, ಗುಡೂರು ವಿರೇಶ, ಅಯ್ಯಣ್ಣ ಹೇಮಗುಡ್ಡ, ವಿಶ್ವನಾಥ ಸ್ವಾಮಿ, ಹೇಮಂತರಾಜ, ಯಮನೂರಪ್ಪ, ಶಣ್ಮುಖಯ್ಯ ಸ್ವಾಮಿ, ಶ್ರೀನಿವಾಸ ಕುಲಕರ್ಣಿ ಸೇರಿದಂತೆ ಇತರರಿದ್ದರು.ಗಂಗಾವತಿ ನಗರ

ಸ್ವಾಮಿ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಗಂಗಾವತಿ ನಗರದಲ್ಲೂ ಭಾನುವಾರ ಹಿಂದು ಜಾಗರಣ ವೇದಿಕೆ ಮತ್ತು ವಿವಿಧ ಹಿಂದುಪರ ಸಂಘಟನೆಯ ಕಾರ್ಯಕರ್ತರು ವಿವೇಕಾನಂದರ ಭಾವಚಿತ್ರಗಳನ್ನು ಮನೆಮನೆಗೆ ತಲುಪಿಸಿದರು.ಆರ್‌ಎಸ್‌ಎಸ್‌ನ ಜಿಲ್ಲಾ ಕಾರ್ಯವಾಹಕ ಸುಭಾಷ ಸಾದರ ನೇತ್ವತ್ವದಲ್ಲಿ 31 ವಾರ್ಡುಗಳಿಗೆ ವಾರ್ಡ್‌ವಾರು ಪ್ರತ್ಯೇಕ ತಂಡಗಳನ್ನು ರಚಿಸಿ ಆಯಾ ವಾರ್ಡ್ ಮುಖಂಡರ ನೇತೃತ್ವದಲ್ಲಿ ವಿವೇಕರ ಭಾವಚಿತ್ರ ಹಂಚಿಕೆ ಕಾರ್ಯಕ್ಕೆ ಸಾದರ ಚಾಲನೆ ನೀಡಿದರು.ಪ್ರಮುಖರಾದ ಡಾ. ವಿಠ್ಠಲ, ದುರ್ಗಾದಾಸ್ ಭಂಡಾರ‌್ಕರ್, ಮುದುಕಪ್ಪ, ರಂಗಪ್ಪ, ನೀಲಕಂಠಪ್ಪ ನಾಗಶೆಟ್ಟಿ, ಬಿ. ಅಶೋಕ, ವೆಂಕಟೇಶ ಶೆಟ್, ಅನಿಲ್ ರಾಯ್ಕರ್, ನರಸಿಂಗ್‌ರಾವ್ ಕುಲಕರ್ಣಿ, ಸುರೇಶ ಸಮಗಂಡಿ, ರಾಘವೇಂದ್ರ ಕಟ್ಟಿಮನಿ, ಷಡಾಕ್ಷರಯ್ಯ, ಚಂದ್ರು ಹಿರೇಮಠ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry