ವಿವೇಕಾನಂದ ಎಕ್ಸ್‌ಪ್ರೆಸ್ ನಾಳೆ ನಗರಕ್ಕೆ

7

ವಿವೇಕಾನಂದ ಎಕ್ಸ್‌ಪ್ರೆಸ್ ನಾಳೆ ನಗರಕ್ಕೆ

Published:
Updated:

ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಅನಾವರಣಗೊಳಿಸುವ ವಿವೇಕಾನಂದ ಎಕ್ಸ್‌ಪ್ರೆಸ್ ರೈಲು ನಗರದ ರೈಲು ನಿಲ್ದಾಣಕ್ಕೆ ಇದೇ ನಾಲ್ಕರಂದು ಬರಲಿದೆ.ಸ್ವಾಮಿ ವಿವೇಕಾನಂದರ 150ನೇ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಸಂಚರಿಸುತ್ತಿರುವ ವಿಶೇಷ ರೈಲು ನಾಲ್ಕರಂದು ನಸುಕಿನ ಐದು ಗಂಟೆಗೆ ನಗರಕ್ಕೆ ಬರಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಐದು  ಗಂಟೆಯವರೆಗೆ ಸಾರ್ವಜನಿಕರು ಉಚಿತವಾಗಿ ವೀಕ್ಷಿಸಬಹುದು.ಬಂಗಾಳದಲ್ಲಿಯ ವಿವೇಕಾನಂದರ ಬಾಲ್ಯ, ರಾಮಕೃಷ್ಣ ಪರಮಹಂಸರ ಪ್ರಭಾವ, ಯುರೋಪ್ ದೇಶಗಳಲ್ಲಿ ನೀಡಿದ ಉಪನ್ಯಾಸ ಮೊದಲಾದ ವಿಷಯಗಳ ಕುರಿತ ವಿವರಗಳು ಹವಾನಿಯಂತ್ರಿತ ಐದು ಬೋಗಿಗಳನ್ನು ಒಳಗೊಂಡ ವಿಶೇಷ ರೈಲಿನಲ್ಲಿರುತ್ತದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry