ವಿವೇಕಾನಂದ-ಬಸವಣ್ಣ ಸ್ಫೂರ್ತಿಯ ಸೆಲೆ

7

ವಿವೇಕಾನಂದ-ಬಸವಣ್ಣ ಸ್ಫೂರ್ತಿಯ ಸೆಲೆ

Published:
Updated:

ಕನಕಪುರ: ಸ್ವಾಮಿ ವಿವೇಕಾನಂದ ಮತ್ತು ಬಸವಣ್ಣನವರು ರಾಷ್ಟ್ರಕಂಡ ಅಪರೂಪದ ಮಹಾನ್ ಚೇತನಗಳು. ಅವರ ತತ್ವ ಆದರ್ಶಗಳು ಸದಾ ಪ್ರಸ್ತುತವಾಗಿದ್ದು ಪ್ರತಿಯೊಬ್ಬರು ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.ತಾಲ್ಲೂಕಿನ ದೊಡ್ಡ ಮರಳವಾಡಿ ಬಸವ ಗುರುಕುಲ ಮಠದಿಂದ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಮತ್ತು ಬಸವತತ್ವ ಸಮಾವೇಶದ  ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಸ್ವಾಮಿ ವಿವೇಕಾನಂದರು ಜಗತ್ತಿನ ಅನೇಕ ಧರ್ಮಗಳ ಬಗ್ಗೆ ಸಮಗ್ರವಾಗಿ ಅರಿತುಕೊಂಡಿದ್ದರು. ಅಂಥವರ ತತ್ವಾದರ್ಶಗಳು ಮನೆಮನೆಗೂ ತಲುಪಬೇಕೆಂದು ಹೇಳಿದರು.ಭಾರತ ಆಧ್ಯಾತ್ಮಿಕ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ನಾವು ಅದನ್ನು ಅರ್ಥಮಾಡಿಕೊಂಡು ಇಂದಿನ ಆದುನಿಕ ಯುಗದಲ್ಲಿ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಮುಂದಿನ ಯುವ ಪೀಳಿಗೆಗೆ ನೀಡಬೇಕು. ಆಗ ಮಾತ್ರ ಈ ದೇಶವನ್ನು ಸಮೃದ್ಧಿಯಾಗಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಮನುಷ್ಯ ತನ್ನತನವನ್ನು ಅರಿತುಕೊಂಡು ಬಾಳ್ವೆ ನಡೆಸಬೇಕು. ಯಾವುದೇ ಕೆಲಸ ಕಾರ್ಯ ಮಾಡಿದರೂ ಯೋಚಿಸಿ ಮಾಡಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಇಡೀ ಸಮಾಜವೇ ದಿಕ್ಕು ತಪ್ಪುತ್ತದೆ ಎಂದು ಹೇಳಿದರು.ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿಸಲು ಸರ್ಕಾರ ಬದ್ಧವಾಗಿದೆ. ನಿರ್ವಸತಿಗರಿಗೆ ಬಿಜೆಪಿ ಸರ್ಕಾರ 6 ಲಕ್ಷ ಮನೆಗಳನ್ನು ನೀಡಿದೆ.  ಆದರೆ ಅವು ಬಡ ನಿರ್ಗತಿಕರಿಗೆ ದಕ್ಕದೆ ಶ್ರೀಮಂತರ ಪಾಲಾಗಿರುವುದು ದುರದುಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.ಬಡತನ ನಿರ್ಮೂಲನೆ ಮಾಡಲು ಸರ್ಕಾರ ದೃಢ ನಿರ್ಧಾರ ತಾಳಿದೆ. ಮುಂದಿನ ದಿನಗಳಲ್ಲಿ ಸೌಲಭ್ಯ ವಂಚಿತರನ್ನು ಗುರುತಿಸಿ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಿಳಿಸಿದರೆ ಯಾವುದೆ ಜನಪ್ರತಿನಿಧಿಗಳ ಸಹಕಾರವಿಲ್ಲದೆ ತನ್ನ ಶಕ್ತಿಯಿಂದಲೇ ಆತ ಸೌಲಭ್ಯ ಪಡೆಯುತ್ತಾನೆ, ಅಂತಹ ಕೆಲಸವನ್ನು ಮಾಡಲಾಗುವುದೆಂದರು.ಮಠಮಾನ್ಯಗಳು ಎಲ್ಲಾ ಧರ್ಮಿಯರಿಗೆ ವಿದ್ಯೆ ನೀಡುವುದರ ಜೊತೆಗೆ ದಾಸೋಹವನ್ನು ಹಮ್ಮಿಕೊಂಡು ಬಡಜನತೆಗೆ ಆಶ್ರಯವಾಗಿದೆ. ಪ್ರತಿಯೊಬ್ಬ ಧರ್ಮೀಯರು ಒಟ್ಟಾಗಿ ಈ ರಾಷ್ಟ್ರವನ್ನು ಅಭಿವೃದ್ದಿಪಡಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದರು.  ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ಎಲ್ಲಾ ಧರ್ಮದವರು ಒಗ್ಗೂಡಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕೆಂದು ಹೇಳಿದರು.  ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿದರು. ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮಿ, ಮರಳೇಗವಿ ಮಠದ ಶಿವರುದ್ರ ಸ್ವಾಮಿ, ರಾಮಕೃಷ್ಣ ಆಶ್ರಮದ ಸ್ವಾಮಿ ಸೌಖ್ಯಾನಂದ, ಮೃತ್ಯಂಜಯ ಸ್ವಾಮಿ, ಚಂದ್ರಶೇಖರ ಸ್ವಾಮಿ, ಶಾಂತ ಮಲ್ಲಿಕಾರ್ಜುನ ಸ್ವಾಮಿ, ಸದಾಶಿವ ಸ್ವಾಮೀಜಿ ಮಾತನಾಡಿದರು. ಶಾಸಕ ಕೆ.ರಾಜು, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಈಶ್ವರ್, ರಾಜ್ಯ ಅರ್ಚಕ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ದಾಸೇಗೌಡ, ಕೀರ್ತಿಹಾಸನ್, ಹೊನ್ನಪ್ಪ, ಕಾಂಗ್ರೆಸ್ ಮುಖಂಡ ಮರಿದೇವರು, ಚಿಕ್ಕಸಾಧೇನಹಳ್ಳಿ ಈಶ್ವರ್ ಇತರರು ಹಾಜರಿದ್ದರು.  ಡಾ. ಚಿಕ್ಕಹೆಜ್ಜಾಜಿ ಮಹದೇವ ವಿವೇಕಾನಂದರ ಬಗ್ಗೆ ಉಪನ್ಯಾಸ ನೀಡಿದರು. ಡಾ. ಭುವನೇಶ್ವರ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry