ವಿವೇಕ್, ಶುಭಾರಂಭ

7

ವಿವೇಕ್, ಶುಭಾರಂಭ

Published:
Updated:

ಮೈಸೂರು: ಕರ್ನಾಟಕದ ವಿವೇಕ್  ನಂಬಿಯಾರ್ ಮತ್ತು ಪಿ.ಪಿ. ಪ್ರಚುರಾ ಶನಿವಾರ ಮೈಸೂರು ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ಆರಂಭವಾದ ಅಖಿಲ ಭಾರತ ಫಿಡೆ ರೇಟೆಡ್ ಮುಕ್ತ ಚೆಸ್ (2200 ರೇಟಿಂಗ್‌ನೊಳಗಿನವರು) ಟೂರ್ನಿಯ ಮೊದಲ ಸುತ್ತಿನಲ್ಲಿ ಶುಭಾರಂಭ ಮಾಡಿದರು.ಪ್ರಥಮ ಸುತ್ತಿನಲ್ಲಿ ಬೆಂಗಳೂರಿನ ವಿವೇಕ್ (ರೇಟಿಂಗ್; 2177)  ಕರ್ನಾಟಕದ ಗೌರವ್ ಜಿ. ಪ್ರತೀಕ್ (ರೇಟಿಂಗ್: 1354) ವಿರುದ್ಧ ಜಯಿಸಿದರು.  ಪ್ರಥಮ ಸುತ್ತಿನಲ್ಲಿ ಕರ್ನಾಟಕದ ಪಿ.ಪಿ. ಪ್ರಚುರಾ, ಪ್ರೇರಣಾ  ವಿರುದ್ಧ  ಮತ್ತು ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಕಾರ್ಯದರ್ಶಿಯೂ ಆಗಿರುವ ವಿ. ರಾಘವೇಂದ್ರ ಅವರು ಕರ್ನಾಟಕದವರೇ ಆದ ಇಶಾ ಶರ್ಮಾ ವಿರುದ್ಧ ಗೆದ್ದರು.ಫಲಿತಾಂಶಗಳು:  ಪ್ರಥಮ ಸುತ್ತು: ಅಲೆಕ್ಸ್ ಕೆ. ಥಾಮಸ್ (ಕೇರಳ) ಅವರು, ಎನ್. ಲೋಕೇಶ್ (ಕರ್ನಾಟಕ) ವಿರುದ್ಧ; ವಿವೇಕ್ ನಂಬಿಯಾರ್ (ಕರ್ನಾಟಕ) ಅವರು, ಗೌರವ್ ಜಿ. ಪ್ರತೀಕ್ (ಕರ್ನಾಟಕ) ವಿರುದ್ಧ; ಎಂ. ವಿನೋದಕುಮಾರ್ (ತಮಿಳುನಾಡು)ಅವರು, ಎನ್. ರಾಚಪ್ಪ (ಕರ್ನಾಟಕ) ವಿರುದ್ಧ; ಜಿ. ವಿನೋದ್ (ತಮಿಳುನಾಡು)ಅವರು, ಆರ್. ನಿತಿನ್ (ಕರ್ನಾಟಕ) ವಿರುದ್ಧ; ಎಸ್.ಎಸ್. ಮೇಘನಂದನ್ (ತಮಿಳುನಾಡು)ಅವರು, ಪಿ. ಜಗದೀಶ್ (ಕರ್ನಾಟಕ) ವಿರುದ್ಧವೂ, ಪಿ.ಪಿ. ಪ್ರಚುರಾ (ಕರ್ನಾಟಕ) ಅವರು, ಪ್ರೇರಣಾ (ಕರ್ನಾಟಕ) ವಿರುದ್ಧ; ಪಿ. ಶಿವಶಂಕರಿ (ತಮಿಳುನಾಡು)ಅವರು,  ಎನ್. ಸುನಿಲ ಭಾರ್ಗವ್  (ಕರ್ನಾಟಕ) ವಿರುದ್ಧ; ಕಾರ್ತಿಕೇಯನ್ ಮುರಳಿ (ತಮಿಳುನಾಡು) ಅವರು, ಎಸ್.ಎನ್. ಜತೀನ್ (ಕರ್ನಾಟಕ) ವಿರುದ್ಧ; ಎಂ.ಎ. ಜಾಯ್ ಲೇಜರ್ (ಕೇರಳ)ಅವರು, ಪ್ರಣವ್ ಎಂ. ಭಟ್ (ಕರ್ನಾಟಕ) ವಿರುದ್ಧ ಜಯ ಸಾಧಿಸಿ ಮುಂದಿನ ಸುತ್ತಿಗೆ ಮುನ್ನಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry