ವಿವೇಕ ಶಾನಭಾಗ ಕಥಾ ಸಂಕಲನ ಬಿಡುಗಡೆಯಲ್ಲಿ ರಾಘವೇಂದ್ರರಾವ್

7
ಚಿಂತನೆಗೆ ಹಚ್ಚುವ ಯಶಸ್ವಿ ಕತೆಗಾರ

ವಿವೇಕ ಶಾನಭಾಗ ಕಥಾ ಸಂಕಲನ ಬಿಡುಗಡೆಯಲ್ಲಿ ರಾಘವೇಂದ್ರರಾವ್

Published:
Updated:
ವಿವೇಕ ಶಾನಭಾಗ ಕಥಾ ಸಂಕಲನ ಬಿಡುಗಡೆಯಲ್ಲಿ ರಾಘವೇಂದ್ರರಾವ್

ಬೆಂಗಳೂರು: `ಹೊರಗಿನ ಲೋಕದ ಅನುಭವದ ಒಳಗೆ ನಿಂತು ಮಾಸ್ತಿ ಬರೆದರೆ, ಸ್ವ-ಅನುಭವದ ಲೋಕದಿಂದಲೇ ಹೊರಗೆ ನಿಂತು ಕತೆ ರಚಿಸುವ ಮೂಲಕ ವಿವೇಕ ಶಾನಭಾಗ ಅವರು ಓದುಗರಲ್ಲಿ ಕುತೂಹಲ ಮೂಡಿಸುತ್ತಾರೆ' ಎಂದು ಹಿರಿಯ ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.ನಗರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅಕ್ಷರ ಪ್ರಕಾಶನ ಹೊರತಂದಿರುವ ವಿವೇಕ ಶಾನಭಾಗ ಅವರ `ಘಾಚರ್ ಘೋಚರ್' ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.`ಕಾಲ, ದೇಶಗಳಾಚೆ ಮನುಷ್ಯ ಸಂಬಂಧಗಳ ನಡುವಿನ ಹುಡುಕಾಟವೇ ಶಾನಭಾಗ ಅವರ ಕೃತಿಗಳ ಮೂಲದ್ರವ್ಯ. ಕತೆಯನ್ನು ಕೊಲ್ಲುವುದರ ಮೂಲಕವೇ ಹೊಸ ಬಗೆಯ ಜೀವನದರ್ಶನವನ್ನು ನೀಡುವ ಅವರ ಕತೆಗಳು ಎಂದಿನ ಜನಪ್ರಿಯ ಮಾದರಿಯಲ್ಲಿ ಸಾಗದೇ ಅಕ್ಷರಪ್ರಿಯರನ್ನು ಚಿಂತನೆಗೆ ಹಚ್ಚುತ್ತದೆ' ಎಂದು ಬಣ್ಣಿಸಿದರು.ಕಥಾ ಸಂಕಲನದ ಹೆಸರು ವಿಭಿನ್ನವಾಗಿದ್ದರೂ, ಈ ಪದ `ಕ್ಲಿಷ್ಟ' ಎಂಬ ಅರ್ಥವನ್ನು ಸೂಚಿಸುತ್ತದೆ. ಪ್ರಸ್ತುತ ಪರಿಹಾರದ ಸೂತ್ರ ಎಲ್ಲೆಡೆ ಇದ್ದರೂ ಸಮಸ್ಯೆಗಳು ಬಗೆಹರಿಯದೇ ಗೋಜಲಾಗಿರುವ ಸ್ಥಿತಿಯನ್ನು ಬಿಂಬಿಸುವಲ್ಲಿ ಈ ಪದ ಯಶಸ್ವಿಯಾಗುತ್ತದೆ' ಎಂದು ತಿಳಿಸಿದರು.`ರಾಜಕೀಯ ಚಿಂತನೆಗಳ ಗ್ರಹಿತದಿಂದ ದೂರ ಉಳಿದಿರುವ ಈ ಕತೆಗಳು ಗಂಡು ಮತ್ತು ಹೆಣ್ಣಿನಲ್ಲಿ ಇರಬಹುದಾದ ಕ್ರೌರ್ಯ, ಕ್ಷುಲ್ಲಕತನವನ್ನು ನಿರ್ಭಿಡೆಯಿಂದ ಹೇಳುತ್ತದೆ. ಸೌಂದರ್ಯ ಮೀಮಾಂಸೆಯ ಚೌಕಟ್ಟಿಗಿಂತಲೂ, ಕಂಡುಕೊಂಡ ಸತ್ಯವನ್ನು ಕಲಾತ್ಮಕವಾಗಿ ನಿರೂಪಿಸುವ ಈ ಮಾದರಿಯ ಬಗ್ಗೆ  ಹೆಚ್ಚಿನ ಚರ್ಚೆ ನಡೆಯಬೇಕಿದೆ' ಎಂದು ಹೇಳಿದರು.ಕಾದಂಬರಿಕಾರ ಸುಕೇತು ಮೆಹತಾ, `ವಿವೇಕ ಅವರ ಕತೆಗಳ ನಿರೂಪಣೆಯ ಶೈಲಿ ಚೆನ್ನಾಗಿದ್ದು, ಅಕ್ಷರಲೋಕದವರನ್ನು ಕುತೂಹಲದಿಂದ ನೋಡುವಂತೆ ಮಾಡುತ್ತದೆ' ಎಂದು ಶ್ಲಾಘಿಸಿದರು.ಕತೆಗಾರ ವಿವೇಕ ಶಾನಭಾಗ, `ಓದುಗರ ಅತೀವ ಸ್ಪಂದನ ಹಾಗೂ ವಿಮರ್ಶಾ ವಲಯದಿಂದ ದೊರೆಯುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಲೇಖಕ ಬೆಳೆಯಲು ಸಾಧ್ಯ. ಇವರೆಡೂ ಒದಗಿಬಂದಿರುವುದಕ್ಕೆ ನನಗೆ ಖುಷಿ ತಂದಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry