ವಿಶಾಲ್ ಈಗ ಎಂಜಿಆರ್

7

ವಿಶಾಲ್ ಈಗ ಎಂಜಿಆರ್

Published:
Updated:
ವಿಶಾಲ್ ಈಗ ಎಂಜಿಆರ್

ಎತ್ತರದ ಹುರಿ ಮೈಕಟ್ಟಿನ ಹುಡುಗ ವಿಶಾಲ್. `ಸಮರನ್~ ಚಿತ್ರಕ್ಕಾಗಿ ಹೊಸ ವರಸೆಗಳನ್ನೆಲ್ಲಾ ಕಲಿತು ಕೊಂಡಿದ್ದಾರೆ. ಈ ಚಿತ್ರ ಆ್ಯಕ್ಷನ್ ಪ್ರಿಯರಿಗೆ ಸಖತ್ ಇಷ್ಟವಾಗಲಿದೆ ಎಂಬುದು ವಿಶಾಲ್ ಮಾತು. ಸಮರನ್ ಇನ್ನೇನು ಬೆಳ್ಳೆತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾನೆ. ಈ ನಡುವೆ ವಿಶಾಲ್ ಮತ್ತೊಂದು ಚಿತ್ರದಲ್ಲಿ ನಟಿಸುವ ಸುದ್ದಿ ಬಂದಿದೆ. ಚಿತ್ರದ ಹೆಸರು `ಮದ ಗಜ ರಾಜ~. ಚಿತ್ರವನ್ನು ಶಾರ್ಟ್ ಆಗಿ ಎಂಜಿಆರ್ ಎನ್ನಲಾಗುತ್ತಿದೆ. ಈ ಚಿತ್ರವನ್ನು ಸುಂದರ್ ನಿರ್ದೇಶಿಸಲಿದ್ದು ಇದೊಂದು ಕಾಮಿಡಿ ಸಿನಿಮಾ ಎನ್ನುತ್ತಿದೆ ಚಿತ್ರತಂಡ.

ನಿರ್ದೇಶಕ ಸಿ.ಸುಂದರ್ ಅವರ ಜತೆ ಕೆಲಸ ಮಾಡುತ್ತಿರುವುದು ಖುಷಿಯ ಸಂಗತಿ. ಅವರು ಪ್ರತಿಭಾವಂತ ನಿರ್ದೇಶಕರು. ಹಲವು ಟಾಪ್ ಸ್ಟಾರ್‌ಗಳನ್ನು ನಿರ್ದೇಶಿಸಿದ ಅನುಭವಿ. ಇಂತಹ ಅನುಭವಿ ನಿರ್ದೇಶಕರೊಂದಿಗೆ ಕೆಲಸ ಮಾಡುವುದು ನನಗೂ ಕೂಡ ವಿಭಿನ್ನ ಅನುಭವ ಎನ್ನುವುದು ವಿಶಾಲ್ ಮಾತು. 

ಅಂದಹಾಗೆ, ಎಂಜಿಆರ್‌ನಲ್ಲಿ ವಿಶಾಲ್ ತ್ರಿಪ್ಪಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮದನ್, ಗಜನ್, ರಾಜಾ ಈ ಮೂರು ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎನ್ನುತ್ತಿದ್ದಾರೆ ಅವರು. ಕೋ ಚಿತ್ರದ ಖ್ಯಾತಿಯ ಕಾರ್ತಿಕಾ ಈ ಚಿತ್ರದಲ್ಲಿ ವಿಶಾಲ್‌ಗೆ ಜತೆಯಾಗಲಿದ್ದಾರೆ. ಈಕೆ ಜೂನಿಯರ್ ಎನ್‌ಟಿಆರ್ ಹೊಸ ಚಿತ್ರ `ದಮ್ಮು~ನಲ್ಲೂ ನಟಿಸಿದ್ದರು. ಅನ್ನಿಯನ್ ಚಿತ್ರದಲ್ಲಿ ಮೋಡಿ ಮಾಡಿದ್ದ ಸದಾ ಅಲ್ಲಿಂದ ಇಲ್ಲಿವರೆಗೂ ಯಾವ ತಮಿಳು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಎಂಜಿಆರ್ ಚಿತ್ರಕ್ಕಾಗಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಹೌದು. ಸದಾ ಎಂಜಿಆರ್ ಚಿತ್ರದಲ್ಲಿ ಐಟಂ ನಂಬರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶಾಲ್ ಜತೆ ಕಾಲು ಕುಣಿಸುತ್ತಾ ಹುಡುಗರ ಮೈ ಬೆಚ್ಚಗೆ ಮಾಡಲು ಸಜ್ಜಾಗಿದ್ದಾರೆ.

ಅಂದಹಾಗೆ, ಸದಾ ಜತೆ ಸುಂದರ್ ಐಟಂ ಸಾಂಗ್ ಬಗ್ಗೆ ಚರ್ಚೆ ನಡೆಸುವಾಗ ಈಕೆಗೆ ಸಖತ್ ಖುಷಿ ಆಯಿತಂತೆ. ಸಾಂಗ್ ಕಾನ್ಸೆಪ್ಟ್ ಇಷ್ಟ ಆಯ್ತು. ಜತೆಗೆ ಈ ಸಾಂಗ್‌ನ್ನು ವಿಶೇಷವಾಗಿ ಚಿತ್ರೀಕರಿಸಲಾಗುತ್ತದೆ ಎಂದಾಗ ಇನ್ನೂ ಖುಷಿಯಾಯ್ತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ ಎನ್ನುತ್ತಿದ್ದಾರೆ ಸದಾ. ಚಿತ್ರಕ್ಕೆ ವಿಜಯ್ ಅಂಥೋಣಿ ಮತ್ತು ರಿಚರ್ಡ್‌ನಾಥನ್ ಅವರು ಸಂಗೀತ ನೀಡಿದ್ದಾರೆ.

ಸದ್ಯಕ್ಕೆ ವಿಶಾಲ್ ತಿರು ನಿರ್ದೇಶನದ ಆ್ಯಕ್ಷನ್ ಸಿನಿಮಾ `ಸಮರನ್~ನಲ್ಲಿ ಬ್ಯುಸಿಯಾಗಿದ್ದರೆ, ನಿರ್ದೇಶಕ ಸಿ.ಸುಂದರ್ ವಿಮಲ್, ಅಂಜಲಿ, ಶಿವಾ ಮತ್ತು ಓವಿಯಾ ನಟಿಸಿರುವ `ಕಲಕಲಪ್ಪು~ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ. ಎಂಜಿಆರ್ ಚಿತ್ರ ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲೂ ಏಕ ಕಾಲದಲ್ಲಿ ಬಿಡುಗಡೆ ಆಗಲಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry