ಸೋಮವಾರ, ಮೇ 10, 2021
26 °C

ವಿಶಿಷ್ಟ ಆಚರಣೆಯ ಹೋಳಿಗೆಮ್ಮ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಿಷ್ಟ ಆಚರಣೆಯ ಹೋಳಿಗೆಮ್ಮ ಹಬ್ಬ

ಕೂಡ್ಲಿಗಿ:  ಪಟ್ಟಣದಲ್ಲಿ  ಮಂಗಳವಾರ ಹೋಳಿಗೆಮ್ಮ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಹೆಸರೇ ಹೇಳುವಂತೆ ಹೋಳಿಗೆ ನೈವೇದ್ಯ ಅರ್ಪಿಸುವ ಈ ವಿಶೇಷ ಹಬ್ಬದಲ್ಲಿ ವಿಶೇಷವಾಗಿ ಮಹಿಳೆಯರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.ಹೋಳಿಗೆಯೊಂದಿಗೆ ಇತರ ಭಕ್ಷ್ಯಗಳನ್ನು ಸಿದ್ಧಪಡಿಸುವ ಮಹಿಳೆಯರು, ಪುಟ್ಟ ಮಡಕೆ, ಅದರಲ್ಲಿ ಬೇವಿನ ಎಲೆಯನ್ನಿರಿಸಿಕೊಂಡು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಊರಮ್ಮ ದೇವತೆಯ ದೇವಸ್ಥಾನಕ್ಕೆ ತಂದರು. ಈ ರೀತಿ ಎಡೆಯನ್ನು ದೇವಸ್ಥಾನಕ್ಕೆ ಒಯ್ಯುವಾಗ ಯಾರೊಂದಿಗೂ ಮಾತನಾಡಬಾರದು ಎಂಬ ನಿಯಮವೂ ಇರುವುದರಿಂದ ಮಹಿಳೆಯರು ಮೌನವಾಗಿಯೇ ದೇವಸ್ಥಾನದತ್ತ ಹೆಜ್ಜೆ ಹಾಕಿದರು.ದೇವಸ್ಥಾನದ ಮುಂಭಾಗದಲ್ಲಿ ಎಡೆಯನ್ನಿರಿಸಿದ ನಂತರ ದೇವತೆಗೆ ನಮಸ್ಕರಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಮನೆಗೆ ತೆರಳಿದ ಭಕ್ತರು ನಂತರ ಮನೆಯ ಸದಸ್ಯರೊಂದಿಗೆ ಮಾತ್ರ ಊಟ ಮಾಡಿದರು. ಈ ಹಬ್ಬಕ್ಕೆ ಯಾರನ್ನೂ ಕರೆಯುವಂತಿಲ್ಲ. ಬೇರೆಯವರಿಗೆ ಊಟವನ್ನೂ ಕೊಡುವಂತಿಲ್ಲ. ಅದನ್ನು ತಾವೇ ಊಟ ಮಾಡಬೇಕು ಎಂಬ ನಿಯಮವೂ ಇಂತಹ ಆಚರಣೆಗೆ ಕಾರಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.