ವಿಶಿಷ್ಟ ಗುರುತು ಅಭಿವೃದ್ಧಿ ಪ್ರಾಧಿಕಾರ: ಸ್ವಾಯತ್ತತೆಗೆ ಸಲಹೆ

7

ವಿಶಿಷ್ಟ ಗುರುತು ಅಭಿವೃದ್ಧಿ ಪ್ರಾಧಿಕಾರ: ಸ್ವಾಯತ್ತತೆಗೆ ಸಲಹೆ

Published:
Updated:

ನವದೆಹಲಿ, (ಪಿಟಿಐ): ರಾಷ್ಟ್ರೀಯ ಗುರುತಿನ ಪತ್ರ ನೀಡುವ ಅಧಿಕಾರ ಹೊಂದಿದ ವಿಶಿಷ್ಟ ಗುರುತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ವಾಯತ್ತತೆ ನೀಡಬೇಕು ಎಂಬ ವಾದವನ್ನು ಯೋಜನಾ ಆಯೋಗ ಬೆಂಬಲಿಸಿದೆ.

ಪ್ರಾಧಿಕಾರವು ಯೋಜನಾ ಆಯೋಗದ ಅಡಿ ಕೆಲಸ ಮಾಡಬೇಕೇ ಅಥವಾ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕೇ ಎಂಬ  ಗೊಂದಲವಿದ್ದು, ಈ ಗೊಂದಲ ನಿವಾರಣೆಯಾಗಬೇಕಾದರೆ ಪ್ರಾಧಿಕಾರಕ್ಕೆ ಸ್ವಾಯತ್ತತೆ ನೀಡಬೇಕು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯ ಹೇಳಿದ್ದಾರೆ. 

ಗುರುತು ಅಭಿವೃದ್ಧಿ ಪ್ರಾಧಿಕಾರವನ್ನು ಸ್ವಾಯತ್ತ ಸಂಸ್ಥೆಯಾಗಿ ಮಾಡಲು ಸಾಧ್ಯವೇ ಎಂಬ ಬಗ್ಗೆ ಹಣಕಾಸು ಇಲಾಖೆಯ ವೆಚ್ಚ ವಿಭಾಗದ ಕಾರ್ಯದರ್ಶಿ ಜತೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry