ಶುಕ್ರವಾರ, ಜೂನ್ 18, 2021
24 °C

ವಿಶಿಷ್ಟ ಪಾತ್ರದಲ್ಲಿ ಸೋಹಾ ಅಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಿಷ್ಟ ಪಾತ್ರದಲ್ಲಿ ಸೋಹಾ ಅಲಿ

ಕಮರ್ಷಿಯಲ್ ಆಗಿ ಅಷ್ಟೇನು ಹೆಸರು ಮಾಡದಿದ್ದರೂ ವಿಮರ್ಶಕರಿಂದ ಮೆಚ್ಚುಗೆ ಪಡೆದ `ಸಾಹೇಬ್ ಬೀವಿ ಔರ್ ಗ್ಯಾಂಗ್‌ಸ್ಟರ್~ ಸಿನಿಮಾದ ಎರಡನೇ ಭಾಗ ರೂಪಿಸಲು ಮನಸ್ಸು ಮಾಡಿದ್ದಾರೆ ನಿರ್ದೇಶಕ ತಿಂಗಮನ್ಷು ಧುಲಿಯಾ. ಅದಕ್ಕೆ `ಸಾಹೇಬ್ ಬೀವಿ ಔರ್ ಗ್ಯಾಂಗ್‌ಸ್ಟರ್ ರಿಟರ್ನ್ಸ್~ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದಲ್ಲಿ ಇರ್ಫಾನ್ ಖಾನ್ ಮತ್ತು ಸೋಹಾ ಅಲಿ ಖಾನ್ ದಂಪತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ಮೊದಲ ಚಿತ್ರದಲ್ಲಿ ನಟಿಸಿದ್ದ ಜಿಮ್ಮಿ ಶೆರ್ಗಿಲ್, ಮಾಹಿ ಗಿಲ್, ರಣದೀಪ್ ಹೂಡಾ ಕೂಡ ಇದ್ದಾರೆ.ಚಿತ್ರದಲ್ಲಿ ತಮ್ಮದು ತುಂಬಾ ವಿಶಿಷ್ಟವಾದ ಪಾತ್ರ ಎಂದು ಹೇಳಿಕೊಂಡಿರುವ ಸೋಹಾ, `ಚಿತ್ರದ ಕತೆ ಕೇಳಿದಾಗ ಅಮ್ಮ ನಟಿಸಿದ್ದ ಹೃಷಿಕೇಶ್ ಮುಖರ್ಜಿ ಅವರ `ಅನುಪಮಾ~ ಚಿತ್ರದ ಪಾತ್ರ ನೆನಪಾಯಿತು. ಅದೇ ಸ್ಫೂರ್ತಿಯಿಂದ ಇದರಲ್ಲಿ ನಟಿಸುವೆ. ಆದರೆ ರಂಗಭೂಮಿ ಹಿನ್ನೆಲೆಯ ಇರ್ಫಾನ್ ಖಾನ್ ಎದುರು ನಟಿಸಲು ಭಯವಾಗುತ್ತಿದೆ~ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.