ವಿಶಿಷ್ಟ ಶೈಲಿಯ ಮನೆಗಳ ಸ್ಪರ್ಧೆ

7

ವಿಶಿಷ್ಟ ಶೈಲಿಯ ಮನೆಗಳ ಸ್ಪರ್ಧೆ

Published:
Updated:

ಒಂದು ಮನೆ ಆ ಮನೆಯವರ ವ್ಯಕ್ತಿತ್ವ ತೋರಿಸುತ್ತದಂತೆ. ಇದೇ ಮಾತನ್ನು ಆಧಾರವಾಗಿಟ್ಟು ಕೊಂಡು ಬಿಗ್ ಬಜಾರ್ `ದೇಶದ ಅತ್ಯಂತ ವಿಶಿಷ್ಟ ಶೈಲಿಯ ಮನೆಗಳ ಸ್ಪರ್ಧೆ'ಯನ್ನು ಆಯೋಜಿಸಿದೆ. ಜನವರಿ 1ರವರೆಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ವಿಜೇತರಾದವರ ಮನೆಗೆ `ಬಡೆ ಅಚ್ಛೆ ಲಗತೆ ಹೈ' ಧಾರಾವಾಹಿಯಲ್ಲಿ ಮೋಡಿ ಮಾಡಿದ ಜೋಡಿ ಸಾಕ್ಷಿ ತನ್ವೀರ್ ಮತ್ತು ರಾಮ್ ಕಪೂರ್ ಭೇಟಿ ನೀಡುತ್ತಾರೆ. ಇದರ ಜತೆಗೆ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಕಲ್ಪಿಸಿದೆ.ಈ ಸ್ಪರ್ಧೆಯಲ್ಲಿ ಭಾಗವಹಿಸಲು ಗ್ರಾಹಕರು ಮಾಡಬೇಕಾದದ್ದು ಇಷ್ಟೇ- ಬಿಗ್ ಬಜಾರ್ ಮಳಿಗೆಯಲ್ಲಿ ರೂ. 300 ಮೌಲ್ಯದ ವಸ್ತುಗಳನ್ನು ಖರೀದಿಸಿ ಸ್ಪರ್ಧೆ ಹೆಸರು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಆದ ನಂತರ, ನಿಮ್ಮ ಮನೆಯ ಛಾಯಾಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಬಹುದು.

ಅಥವಾ ಮನೆಯ ಛಾಯಾಚಿತ್ರವನ್ನು ತೆಗೆದು ಮಳಿಗೆಯಲ್ಲಿರುವ ಪೆಟ್ಟಿಗೆಗೆ ತಂದು ಹಾಕಬಹುದು. ತೀರ್ಪುಗಾರರ ಮೆಚ್ಚುಗೆ ಪಡೆದವರ ಮನೆಗೆ ಸಾಕ್ಷಿ ಮತ್ತು ರಾಮ್ ಬರುತ್ತಾರೆ. ಅವರನ್ನು ಕಣ್ತುಂಬಿಕೊಂಡು ಸತ್ಕರಿಸುವ ಸರದಿ ಅದೃಷ್ಟಶಾಲಿ ಗ್ರಾಹಕರದ್ದು. ಇದೇ ವೇಳೆ ಬಿಗ್ ಬಜಾರ್ ಹಿಂದೆಂದೂ ನಡೆದಿರದಂತಹ `ಮೆಗಾ ಗೃಹೋತ್ಸವ'ವನ್ನು ಆಯೋಜಿಸಿದೆ. ಇಲ್ಲಿ ಮನೆಗೆ ಅವಶ್ಯಕವಾಗಿ ಬೇಕಿರುವ ವಸ್ತುಗಳ ಜತೆಗೆ ಮನೆಯ ಅಂದವನ್ನು ಹೆಚ್ಚಿಸುವ ಪೀಠೋಪರಣಗಳ ದೊಡ್ಡ ಸಂಗ್ರಹವೇ ಇದೆ. ಜತೆಗೆ ಈ ಎಲ್ಲ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ಕೂಡ ಲಭ್ಯವಿದೆ. ರೂ.600ಕ್ಕೆ ಆಕರ್ಷಕ ಬಣ್ಣಗಳ, ವಿಶೇಷ ವಿನ್ಯಾಸದ ಕಾರ್ಪೆಟ್‌ಗಳು, ಪರದೆಗಳ ಮೇಲೆ ಶೇ 25 ರಿಯಾಯಿತಿ, ಡ್ರೀಂಲೈನ್ ಕಿಚನ್‌ವೇರ್ ಮತ್ತು ಮಿಲ್ಟನ್ ಮತ್ತು ಸೆಲ್ಲೋ ಕ್ಯಾಸರೋಲ್‌ಗಳ ಮೇಲೆ ಶೇ 10 ರಿಯಾಯಿತಿ ಪ್ರಕಟಿಸಿದೆ.`ಮನೆಯ ವಿಷಯಕ್ಕೆ ಬಂದರೆ ನಮ್ಮಲ್ಲಿ ಶಯನಗೃಹ, ಅಡುಗೆ ಕೋಣೆ ಹಾಗೂ ಸ್ನಾನದ ಮನೆಗೆ ಹೊಂದುವ ವ್ಯಾಪಕ ಶ್ರೇಣಿಯ ಉತ್ಪನ್ನಗಳಿವೆ. ಇವೆಲ್ಲವುದರಗಳ ಬೆಲೆ ಕೂಡ ಕೈಗೆಟುಕುವ ದರಲ್ಲಿದೆ. ವಸ್ತುಗಳ ಖರೀದಿ ಮೇಲೆ ಆಕರ್ಷಕ ಉಡುಗೊರೆಗಳನ್ನು ನೀಡುತ್ತಿದ್ದೇವೆ. ಈ ಉತ್ಸವ ಜನವರಿ 1ರವರೆಗೆ ನಡೆಯಲಿದೆ' ಎನ್ನುತ್ತಾರೆ ಫ್ಯೂಚರ್ ವ್ಯಾಲ್ಯೂ ರಿಟೇಲ್‌ನ ಸಿಇಒ ಸದಾಶಿವ ನಾಯಕ್. ಸ್ಪರ್ಧೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು www.facebook.com//bigbazaar.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry