ಗುರುವಾರ , ನವೆಂಬರ್ 21, 2019
26 °C

ವಿಶೇಷ ಅನುದಾನಕ್ಕೆ ಜಯಾ ಮನವಿ

Published:
Updated:

ಚೆನ್ನೈ: ಕೇಂದ್ರ ಸಚಿವ ಸಂಪುಟವು ಬಿಹಾರದ ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ವಿಶೇಷ ಅನುದಾನ ನೀಡಿದ ಬೆನ್ನಲ್ಲೇ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ವಿಶೇಷ ಪ್ಯಾಕೇಜ್‌ಗಾಗಿ ಮನವಿ ಸಲ್ಲಿಸಿದ್ದಾರೆ.ಗ್ರೇಟರ್ ಚೆನ್ನೈ ಜಿಲ್ಲೆಯೊಂದನ್ನು ಹೊರತುಪಡಿಸಿ ರಾಜ್ಯದ ಎಲ್ಲಾ 31 ಜಿಲ್ಲೆಗಳು ಬರದಿಂದ ತತ್ತರಿಸುತ್ತಿರುವುದರಿಂದ ವಿಶೇಷ ಪ್ಯಾಕೇಜ್ ಸಿದ್ಧಪಡಿಸಿದ್ದು, ಅದನ್ನು ಜಾರಿ ಮಾಡಲು ಕೇಂದ್ರದ ವಿಶೇಷ ಅನುದಾನದಡಿಯಲ್ಲಿ ರೂ 19,666 ಕೋಟಿಗಳನ್ನು ಮಂಜೂರು ಮಾಡುವಂತೆ ಜಯಲಲಿತಾ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)