ವಿಶೇಷ ಅಭಿವೃದ್ಧಿ ಯೋಜನೆಗೆ 2,975 ಕೋಟಿ ರೂ ಮೀಸಲು

7

ವಿಶೇಷ ಅಭಿವೃದ್ಧಿ ಯೋಜನೆಗೆ 2,975 ಕೋಟಿ ರೂ ಮೀಸಲು

Published:
Updated:

ಬೆಂಗಳೂರು:  ಡಾ. ಡಿ.ಎಂ.ನಂಜುಂಡಪ್ಪ ವರದಿಯ ಆಧಾರದ ಮೇಲೆ ವಿಶೇಷ ಅಭಿವೃದ್ಧಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರವು 2011-12 ಸಾಲಿನಲ್ಲಿ ರೂ 2,975 ಕೋಟಿ ತೆಗೆದಿರಿಸಿದೆ.ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ರೂ 114 ಕೋಟಿ ಮೀಸಲು ಇಡಲಾಗಿದೆ (ಕಳೆದ ವರ್ಷ ರೂ 63 ಕೋಟಿ ನೀಡಲಾಗಿತ್ತು). ಇದರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರೂ 45 ಕೋಟಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ರೂ 34 ಕೋಟಿ, ಗಡಿ ಪ್ರದೇಶಾಭಿವೃದ್ಧಿ ಮಂಡಳಿಗೆ ರೂ 15 ಕೋಟಿ. ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ರೂ 10 ಕೋಟಿ ಹಾಗೂ ಕರಾವಳಿ ಪ್ರದೇಶಾಭಿವೃದ್ಧಿ  ಪ್ರಾಧಿಕಾರಕ್ಕೆ ರೂ 10 ಕೋಟಿ.

ಇತರೆ ಅಂಶಗಳು:* ಶಾಸಕರ ಕ್ಷೇತ್ರಾಭಿವೃದ್ಧಿಗಾಗಿ ರೂ 300 ಕೋಟಿ.

* ಹೊಸದಾಗಿ ನಿರ್ಮಾಣಗೊಂಡಿರುವ ಯಾದಗಿರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೂಲಸೌಕರ್ಯ ಕಲ್ಪಿಸಲು ತಲಾ ರೂ 50 ಕೋಟಿಗಳ ವಿಶೇಷ ಅನುದಾನ.

*ಶಿವಮೊಗ್ಗ ಜಿಲ್ಲೆಯ ಅಂಜನಾಪುರ ಜಲಾಶಯಕ್ಕೆ ಹೋಗುವ ರಸ್ತೆ, ಉದ್ಯಾನವನದ ಅಭಿವೃದ್ಧಿ ಮತ್ತು ದೋಣಿ ವಿಹಾರ ಸೌಲಭ್ಯ ಒದಗಿಸಲು ರೂ 10 ಕೋಟಿ ಅನುದಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry