ವಿಶೇಷ ನಾಗರಿಕರ ಸಬಲೀಕರಣ ಕಾರ್ಯಕ್ಕೆ ಚಾಲನೆ

7

ವಿಶೇಷ ನಾಗರಿಕರ ಸಬಲೀಕರಣ ಕಾರ್ಯಕ್ಕೆ ಚಾಲನೆ

Published:
Updated:

ಉಡುಪಿ: ಮಣಿಪಾಲದ 80ಬಡಗುಬೆಟ್ಟು ಇಂದಿರಾನಗರದಲ್ಲಿನ ಅದಿತಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಸಲಾಗುತ್ತಿರುವ ‘ಸಮೃದ್ಧ್’ ವಿಶೇಷ ಮಕ್ಕಳ ಉದ್ಯೋಗ ತರಬೇತಿ ಕೇಂದ್ರ ಆಶ್ರಯದಲ್ಲಿ ಬುಧವಾರ ನಡೆದ ವಿಶೇಷ ನಾಗರಿಕರ ಸಬಲೀಕರಣ ಕಾರ್ಯಕ್ರಮಕ್ಕೆ ಮಣಿಪಾಲದ ಲಕ್ಷ್ಮಿಂದ್ರ ನಗರದ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ವೆಂಕಟೇಶ್ ಕಾಮತ್ ಚಾಲನೆ ನೀಡಿದರು.ಸಬಲೀಕರಣ ಕಾರ್ಯಕ್ರಮದ ಅಂಗವಾಗಿ ಮಕ್ಕಳ ಹೆತ್ತವರಿಗೆ ಹಲವಾರು ಮಾಹಿತಿ ನೀಡಿದ ಅವರು ಅದಿತಿ ಪ್ರತಿಷ್ಠಾನ ನೇತೃತ್ವದಲ್ಲಿ ನೀಡುವ ಸಹಾಯಧನವನ್ನು  ವಿಶೇಷ ಮಕ್ಕಳ ಉದ್ಯೋಗ ತರಬೇತಿ ಕೇಂದ್ರದ ಮುಖಾಂತರ ವಿತರಿಸಿದರು.ಮಣಿಪಾಲದ ಮಹಿಳಾ ಮತ್ತು ಮಕ್ಕಳ ತಜ್ಞೆ ಡಾ. ಗಿರಿಜಾ ಮಾತನಾಡಿ, ವಿಶೇಷ ಮಕ್ಕಳು ಬೆಳೆದ ಬಳಿಕ ಅವರು ವಿಶೇಷ ನಾಗರಿಕರಾಗಿ ಸಮಾಜದಲ್ಲಿ ಎಲ್ಲರಂತೆ ಜೀವನ ನಡೆಸುವ ಅಗತ್ಯವಿದೆ. ಅದಕ್ಕೆ ಪೂರಕವಾದ ಸೇವಾ ಸಹಕಾರವನ್ನು ಅದಿತಿ ಪ್ರತಿಷ್ಠಾನ ನೇತ್ರತ್ವದಲ್ಲಿ  ವಿಶೇಷ ಮಕ್ಕಳ ಉದ್ಯೋಗ ತರಬೇತಿ ಸಂಸ್ಥೆ ನೀಡಲು ಮುಂದಾಗಿದ್ದು ಸಮಾಜದಲ್ಲಿನ ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನವಾಗಿದೆ. ಇದೊಂದು ಅಭಿನಂದನಾರ್ಹ ಕಾರ್ಯಕ್ರಮ ಎಂದು ಶ್ಲಾಘಿಸಿದರು.ಪ್ರಭಾಮಣಿ ಪೈ, ಸಂಸ್ಥೆಯ ವ್ಯವಸ್ಥಾಪಕ ಸಮೃದ್ಧ್ ಕಿಣಿ, ಅದಿತಿ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ  ಸಾಧನಾ ಕಿಣಿ, ಭಾಗೀರಥಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry