ವಿಶೇಷ ನ್ಯಾಯಾಲಯಗಳು ಶೀಘ್ರ ಸ್ಥಾಪನೆ ಆಗಲಿ

7

ವಿಶೇಷ ನ್ಯಾಯಾಲಯಗಳು ಶೀಘ್ರ ಸ್ಥಾಪನೆ ಆಗಲಿ

Published:
Updated:

ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಲು ಸರ್ಕಾರ ವಿಶೇಷ ನ್ಯಾಯಾಲಗಳನ್ನು ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ. ಇಂತಹ ನ್ಯಾಯಾಲಯಗಳನ್ನು ಬಹಳ ಹಿಂದೆಯೇ ಸ್ಥಾಪಿಸಬೇಕಿತ್ತು. ತಡವಾಗಿಯಾದರೂ ಜ್ಞಾನೋದಯ ಆಗಿರುವುದು ಸಕಾರಾತ್ಮಕ ಬೆಳವಣಿಗೆ. ಪ್ರತೀ ಸಲ ಅತ್ಯಾಚಾರ ಘಟನೆ ಸಂಭವಿಸಿದಾಗ ಪೊಲೀಸರು, ಆರೋಪಿಗಳನ್ನು ಬಂಧಿಸಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ವರ್ಷವೇ ಬೇಕಾಗುತ್ತದೆ.ವರದಿ ಸಲ್ಲಿಸಿದ ಬಳಿಕ ವಿಚಾರಣೆಗೆ ಬಹಳ ಸಮಯ ಬೇಕಾಗುತ್ತದೆ. ಏಕೆಂದರೆ ಸಾವಿರಾರು ಪ್ರಕರಣಗಳು ವಿಚಾರಣೆ ಹಂತದಲ್ಲಿರುತ್ತವೆ. ಜೊತೆಗೆ ದಿನನಿತ್ಯ ನೂರಾರು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗುತ್ತವೆ. ಇದರಿಂದ ನ್ಯಾಯಾಲಯಗಳ ಮೇಲೆ ಒತ್ತಡ ಹೆಚ್ಚಿ ವಿಚಾರಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅಪರಾಧಿಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಸರ್ಕಾರ ಸಲ್ಲಿಸಿರುವ ಪ್ರಸ್ತಾವಕ್ಕೆ ಹೈಕೋರ್ಟ್‌ನಿಂದ ಆದಷ್ಟು ಬೇಗ ಅನುಮತಿ ದೊರೆಯಲಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry