ವಿಶೇಷ ಮಕ್ಕಳಿಗೂ ಬಾಚಿ ಆಟ

7

ವಿಶೇಷ ಮಕ್ಕಳಿಗೂ ಬಾಚಿ ಆಟ

Published:
Updated:

ದಾವಣಗೆರೆ: ನ್ಯೂಜಿಲೆಂಡ್‌ನಲ್ಲಿ ಜನಪ್ರಿಯವಾಗಿರುವ `ಬಾಚಿ~ (ಬಿಒಸಿಸಿಇ) ಆಟ ರಾಜ್ಯಕ್ಕೂ ಕಾಲಿರಿಸಿದೆ. ಇದೇ ಪ್ರಥಮ ಬಾರಿಗೆ `ಕಡಿಮೆ ಸಾಮರ್ಥ್ಯವುಳ್ಳ ವಿಶೇಷ ಮಕ್ಕಳು~ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. 14ರಂದು ಆಯೋಜಿಸಲ್ಪಟಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹದಿಮೂರು ಜಿಲ್ಲೆಗಳ ವಿವಿಧ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.ವಿಶೇಷ ಮಕ್ಕಳಿಗೆ ಯಾವುದೇ ಅಟ ಕಲಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಅತಿ ಕಡಿಮೆ ಸಾಮರ್ಥ್ಯದ ಮಕ್ಕಳಿಗೆ ಬಾಚಿ ಆಟ ಕಲಿಸುವ `ವಿಶೇಷ~ ಕೆಲಸವನ್ನು ಬೆಂಗಳೂರಿನ ಬುದ್ಧಿಮಾಂದ್ಯರ ಕ್ರೀಡೆ ಮತ್ತು ಸಾಂಸ್ಕೃತಿಕ ಅಕಾಡೆಮಿ ಮಾಡಿದೆ. ವಿಶೇಷ ಮಕ್ಕಳ ಶಾಲೆಯಲ್ಲಿ ತರಬೇತಿ ನೀಡಲಾಗಿದೆ. ಈ ವಿಶೇಷ ಮಕ್ಕಳ `ವಿಶೇಷ ಸಾಮರ್ಥ್ಯ~ವನ್ನು ವೀಕ್ಷಿಸಲು ಸಂಘಟಕರು ಹಾಗೂ ತರಬೇತುದಾರರು ಕುತೂಹಲದಲ್ಲಿದ್ದಾರೆ.`ವಿಶೇಷ ಮಕ್ಕಳಲ್ಲಿ ಕೌಶಲ ಅಭಿವೃದ್ಧಿಗೆ ಈ ಆಟ ಕಾರಣವಾಗಲಿದೆ. ಸ್ಪರ್ಧೆ ಮತ್ತು ಕ್ರೀಡಾ ಮನೋಭಾವವನ್ನು ಹೆಚ್ಚಿನ ರೀತಿಯಲ್ಲಿ ತುಂಬುತ್ತದೆ. ಕಡಿಮೆ ಸಾಮರ್ಥ್ಯದ ವಿಶೇಷ ಮಕ್ಕಳು ಅವರಾಗಿರುವುದರಿಂದ ಹೆಚ್ಚಿನ ಆಯಾಸ ಅಗುವುದಿಲ್ಲ. ವಿಪರೀತ ಬುದ್ಧಿಶಕ್ತಿಯ ಅಗತ್ಯವೂ ಇಲ್ಲ. 14ರ ಮಧ್ಯಾಹ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಲಿದ್ದು, ಬಾಲಕರ ವಿಭಾಗದಲ್ಲಿ ವಿವಿಧ ಶಾಲೆಗಳ 15 ಹಾಗೂ ಬಾಲಕಿಯರ ವಿಭಾಗದಲ್ಲಿ 5 ತಂಡಗಳು ಪಾಲ್ಗೊಳ್ಳಲಿವೆ. ಈ ಸಂಬಂಧ ಅಕಾಡೆಮಿ ವತಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗಿದೆ. ಅವರ ಪ್ರದರ್ಶನದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ~ ಎಂದು ಬೆಂಗಳೂರಿನ ಬುದ್ಧಿಮಾಂದ್ಯರ ಕ್ರೀಡೆ ಮತ್ತು ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್‌ಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದರು.ಏನಿದು ಬಾಚಿ ಅಟ?

`ನ್ಯೂಜಿಲೆಂಡ್‌ನ ಈ ಆಟ ಇತ್ತೀಚೆಗೆ ಇತರ ಕಡೆಗಳಲ್ಲಿಯೂ ಪರಿಚಯ ಆಗುತ್ತಿದೆ. ಆಟಕ್ಕಾಗಿ 60/12 ಅಡಿಯ ಅಂಕಣ ಸಿದ್ಧಪಡಿಸಲಾಗುವುದು. ಮಧ್ಯಭಾಗದಲ್ಲಿ (30 ಅಡಿಗೆ) ಗೆರೆ ಇರುತ್ತದೆ. ಚೆಂಡುಗಳನ್ನು ಇಡಲು ಅಂಕಣದಲ್ಲಿ ಎರಡು ಮೂಲೆಗಳನ್ನು ನಿಗದಿ ಮಾಡಲಾಗುವುದು. ಪ್ರತಿ ಅಂಕಣದಲ್ಲಿ ತಲಾ ನಾಲ್ಕು ಮಕ್ಕಳಿರುತ್ತಾರೆ. ಆಟಕ್ಕೆ, ಗಾತ್ರದಲ್ಲಿ ಟೆನಿಸ್‌ಬಾಲ್‌ಗೂ ಚಿಕ್ಕದಾದ ಚೆಂಡನ್ನು (ಅದನ್ನು `ಪೆಲಿನಾ~ ಎಂದು ಕರೆಯುತ್ತಾರೆ) ಬಳಸಲಾಗುವುದು. ಯಾರು ಮೊದಲು ಆಟ ಆರಂಭಿಸಬೇಕು ಎಂಬುದಕ್ಕೆ ನಾಣ್ಯ ಚಿಮ್ಮಲಾಗುವುದು. ವಿಜೇತರು, ಮೊದಲಿಗೆ `ಪೆಲಿನಾ~ ಚೆಂಡನ್ನು 30 ಅಡಿಯಲ್ಲಿರುವ ಮಧ್ಯದ ಗೆರೆಯನ್ನು ದಾಟಿ ಹೋಗಬೇಕು. ನಂತರ, ಬೇಸ್‌ಬಾಲ್‌ಗೂ ದೊಡ್ಡದಾದ ನಾಲ್ಕು ಕೆಂಪು ಅಥವಾ ಹಸಿರು ಚೆಂಡುಗಳನ್ನು ನೀಡಲಾಗುವುದು (ತಂಡಕ್ಕೆ 4ರಂತೆ). ಅಂಕಣದ ಒಂದೊಂದು ತುದಿಯಿಂದ ಚೆಂಡು ಉರುಳಿಸಲು ಎರಡೂ ತಂಡಗಳಿಗೂ ಅವಕಾಶ ಕೊಡಲಾಗುವುದು. ಉರುಳಿಸುವ ಚೆಂಡುಗಳು `ಪೆಲಿನಾ~ಗೆ ಹೊಡೆಯುವುದು ಅಥವಾ ಅದಕ್ಕೆ ಎಷ್ಟು ಸಮೀಪಕ್ಕೆ ಹೋಗಿ ನಿಂತಿದೆ ಎಂಬುದನ್ನು ಅಳತೆ ಮಾಡಿ ತಂಡಗಳಿಗೆ ಅಂಕ ನೀಡಲಾಗುವುದು.ಹೀಗಾಗಿ, ಈ ಆಟದಲ್ಲಿ ಇಂತಿಷ್ಟು ಸಮಯ ನಿಗದಿ ಇರುವುದಿಲ್ಲ. ತಂಡಗಳು ಎಷ್ಟು ಬದಿ (ಸೈಡ್)ಗಳಿಂದ ಆಡಬೇಕು ಎಂಬುದನ್ನು ಆಯೋಜಕರು ತೀರ್ಮಾನಿಸುತ್ತಾರೆ. ಹೆಚ್ಚಿನ ಅಂಕ ಗಳಿಸಿದವರು ವಿಜೇತರಾಗುತ್ತಾರೆ ಎಂದು ಮಾಹಿತಿ ನೀಡಿದರು.`ಈ ಆಟದಿಂದ ಮಕ್ಕಳಿಗೆ ಸ್ಪಷ್ಟ ಗುರಿಯ ಕಲ್ಪನೆ ಬರುತ್ತದೆ. ವಿಶೇಷ ಮಕ್ಕಳಿಗೆ ಇದರಿಂದ ಯಾವುದೇ ದೈಹಿಕ ಶ್ರಮ ಹಾಕುವ ಅಗತ್ಯವಿಲ್ಲ. ಕಡಿಮೆ ಸಾಮರ್ಥ್ಯದ ಮಕ್ಕಳಿಗೆ ರಾಜ್ಯಮಟ್ಟದಲ್ಲಿ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲು~ ಎಂದು ಹೆಮ್ಮೆಯಿಂದ ತಿಳಿಸುತ್ತಾರೆ ಅವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry