ಬುಧವಾರ, ಮೇ 12, 2021
18 °C

ವಿಶೇಷ ರೀತಿಯಲ್ಲಿ ರತ್ನಾಕರವರ್ಣಿಯ 500ನೇ ಜನ್ಮದಿನಾಚರಣೆ: ಜೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಹಾಕವಿ ರತ್ನಾಕರವರ್ಣಿ ಅವರ 500ನೇ ಜನ್ಮದಿನಾಚರಣೆಯನ್ನು ಸರ್ಕಾರದ ವತಿಯಿಂದಲೇ ವಿಶೇಷ ರೀತಿಯಲ್ಲಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಕ್ರೀಡಾ ಹಾಗೂ ಯುವಜನ ಖಾತೆ ಸಚಿವ ಅಭಯಚಂದ್ರ ಜೈನ್ ಭರವಸೆ ನೀಡಿದರು.ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ಶುಕ್ರವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಬೆಳಗಾವಿ ಗ್ರಾಮಾಂತರ ಶಾಸಕ ಸಂಜಯ ಪಾಟೀಲ ಮತ್ತು ಹಿರಿಯೂರು ಶಾಸಕ ಡಿ. ಸುಧಾಕರ ಅವರನ್ನೂ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಾಟೀಲ, `ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ 415 ಕೋಟಿ, ಕ್ರೈಸ್ತ ಸಮುದಾಯಕ್ಕೆ 50 ಕೋಟಿ ರೂಪಾಯಿ ನೆರವು ನೀಡಿದೆ. ಅದೇ ಮಾದರಿಯಲ್ಲಿ ಜೈನ ಸಮುದಾಯಕ್ಕೆ 60 ಕೋಟಿ ಅನುದಾನ ನೀಡಬೇಕು' ಎಂದು ಆಗ್ರಹಿಸಿದರು.ಭಾರತೀಯ ಜೈನ್ ಮಿಲನ್‌ನ ರಾಷ್ಟ್ರೀಯ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಮಾತನಾಡಿ, `ರತ್ನಾಕರವರ್ಣಿ ಜನ್ಮದಿನಾಚರಣೆಗೆ ಜೈನ ಸಮುದಾಯದ ದಾನಿಗಳು ಹಣಕಾಸಿನ ನೆರವು ನೀಡಲು ಸಿದ್ಧ' ಎಂದರು.ಕರ್ನಾಟಕ ಜೈನ ಅಸೋಸಿಯೇಷನ್‌ನ ಕಾರ್ಯದರ್ಶಿ ಟಿ.ಜಿ.ದೊಡ್ಡಮನಿ, `ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಜೈನ ಧಾರ್ಮಿಕ ಮಂದಿರಗಳನ್ನು ಸೇರಿಸಲಾಗಿದೆ. ಇದು ಸರಿಯಲ್ಲ. ಪ್ರತ್ಯೇಕ ಕಾನೂನು ರಚಿಸಿ ಜೈನ ಮಂದಿರಗಳ ಅಭಿವೃದ್ಧಿಗೆ ಸರ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು' ಎಂದು ಆಗ್ರಹಿಸಿದರು.ಬೆಳಿಗ್ಗೆ ಪುರಪ್ರವೇಶ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಸ್ವಾದಿ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಯಮಿ ಅನಿಲ್ ಸೇಠಿ, ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್ ಉಪಸ್ಥಿತರಿದ್ದರು.ಈ ಸಂದರ್ಭ ಬನಶಂಕರಿ ಮೂರನೇ ಹಂತದಲ್ಲಿ ಮೋತೀಖಾನೆ ತಿಮ್ಮಪ್ಪಯ್ಯ ಜೈನ ವಿದ್ಯಾರ್ಥಿನಿ ನಿಲಯವನ್ನು ಉದ್ಘಾಟಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.