ವಿಶೇಷ ಸಾಮರ್ಥ್ಯವುಳ್ಳವರ ಸಸ್ಯ ಮೇಳ

7

ವಿಶೇಷ ಸಾಮರ್ಥ್ಯವುಳ್ಳವರ ಸಸ್ಯ ಮೇಳ

Published:
Updated:

ವಿಶೇಷ ಸಾಮರ್ಥ್ಯವುಳ್ಳವರ ಸಂಸ್ಥೆಯು (ಎಪಿಡಿ) ಈಚೆಗೆ ನಗರದಲ್ಲಿ ಸಸ್ಯ ಮೇಳ ಆಯೋಜಿಸಿತ್ತು. ತೋಟಗಾರಿಕೆ ಇಲಾಖೆಯೊಂದಿಗೆ 10 ತಿಂಗಳ ವಸತಿ ಸಹಿತ ತರಬೇತಿಯನ್ನು ಅಂಗವಿಕಲರಿಗೆ ನೀಡಲಾಯಿತು.ಫೆಬ್ರುವರಿ 10ರಿಂದ 19ರವರೆಗೆ ಸಸ್ಯ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಉದ್ಯಾನದ ಸಸಿಗಳು, ಗೃಹಾಲಂಕಾರ, ಒಳಾಂಗಣ, ಹೊರಾಂಗಣ ಸಸಿಗಳ ಮಾರಾಟ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಆಲಂಕಾರಿಕ, ಸುಗಂಧದ್ರವ್ಯ ಸಸಿಗಳೂ ಉಂಟು.ಮುಖ್ಯವಾಹಿನಿಯಲ್ಲಿ ಅಂಗವಿಕಲರಿಗೂ ಅವಕಾಶ ದೊರೆಯುವಂತೆ ಮಾಡುವುದು ಮೇಳದ ಉದ್ದೇಶ. ಈ ನಿಟ್ಟಿನಲ್ಲಿ `ಯು~ ಸಂಸ್ಥೆಯೂ ಎಪಿಡಿಯೊಂದಿಗೆ ಕೈಗೂಡಿಸಿದೆ.ಈ ಸಸ್ಯ ಮೇಳವನ್ನು ಅಂಗವಿಕಲರಲ್ಲಿ ಜಾಗೃತಿ ಮೂಡಿಸಲು ಹಾಗೂ ತರಬೇತಿ ಕಾರ್ಯಕ್ರಮಕ್ಕಾಗಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಆಯೋಜಿಸಲಾಗಿದೆ.

ದೊಡ್ಡಗುಬ್ಬಿ ರಸ್ತೆಯಲ್ಲಿರುವ ಎಪಿಡಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಈ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಸಮಯ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ.                    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry