ವಿಶೇಷ ಸ್ಥಾನಮಾನ: ದಿಕ್ಕು ತಪ್ಪುತ್ತಿರುವ ಪ್ರತಿಭಟನೆ

7
ಹರಪನಹಳ್ಳಿ: ವಿವಿಧೆಡೆ ಪ್ರತ್ಯೇಕ ಗುಂಪುಗಳ ಹೋರಾಟ

ವಿಶೇಷ ಸ್ಥಾನಮಾನ: ದಿಕ್ಕು ತಪ್ಪುತ್ತಿರುವ ಪ್ರತಿಭಟನೆ

Published:
Updated:

ಹರಪನಹಳ್ಳಿ: ಹೈ–ಕ ಭಾಗದ ೩೭೧(ಜೆ) ಕಲಂ  ವಿಶೇಷ ಸ್ಥಾನಮಾನ ವ್ಯಾಪ್ತಿ ಸೇರ್ಪಡೆ ಸಂಬಂಧಿಸಿದಂತೆ ಒಂದು ಗುಂಪು ಹಾಗೂ ಹರಪನಹಳ್ಳಿ ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡು ಪ್ರತ್ಯೇಕ ಜಿಲ್ಲೆ ರಚಿಸುವಂತೆ ಒತ್ತಾಯಿಸಿ ಹೈ–ಕ ವಿಮೋಚನಾ ದಿನಾಚರಣೆ ಹಿನ್ನೆಲೆಯಲ್ಲಿ ಮತ್ತೊಂದು ಗುಂಪು ಪಟ್ಟಣದಲ್ಲಿ ಮಂಗಳವಾರ ಕರೆ ನೀಡಿದ್ದ ಪ್ರತ್ಯೇಕ ಪ್ರತಿಭಟನೆಗಳು ಪರಸ್ಪರ ಆರೋಪ– ಪ್ರತ್ಯಾರೋಪ ಮಾಡುವುದರ ಮೂಲಕ ಸಾರ್ವಜನಿಕ ವಲಯದಲ್ಲಿ ತೀವ್ರ ನಗೆಪಾಟಲಿಗೆ ಗುರಿಯಾದವು.ವಿಶೇಷ ಸ್ಥಾನಮಾನ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ‘ತಾಲ್ಲೂಕು ೩೭೧(ಜೆ)ಕಲಂ ಸೇರ್ಪಡೆ ಹೋರಾಟ ಸಮಿತಿ’ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ನೇತೃತ್ವದಲ್ಲಿ  ಸೆ. ೧೬ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೈಗೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ಶಾಲಾ– ಕಾಲೇಜು ಬಂದ್‌ಗೆ ಕರೆ ನೀಡಿದ್ದರು.ಹರಪನಹಳ್ಳಿ ಪಟ್ಟಣವನ್ನು ಕೇಂದ್ರ ಸ್ಥಾನವನ್ನಾಗಿರಿಸಿಕೊಂಡು ಪ್ರತ್ಯೇಕ ಜಿಲ್ಲೆ ರಚಿಸಬೇಕು ಹಾಗೂ ಆ ಮೂಲಕ ತಾಲ್ಲೂಕಿನಗೆ ೩೭೧(ಜೆ) ಕಲಂ ವಿಶೇಷ ಸ್ಥಾನಮಾನ ಸೌಲಭ್ಯಕ್ಕೆ ಒತ್ತಾಯಿಸಿ ಹೈ–ಕರ್ನಾಟಕ ವಿಮೋಚನಾ ದಿನಾಚರಣೆ ಮೆರವಣಿಗೆ ನಡೆಸಲು ಪ್ರತ್ಯೇಕ ಜಿಲ್ಲಾ ರಚನೆ ಹೋರಾಟ ಸಮಿತಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.ಹರಿಹರ ವೃತ್ತದಿಂದ ಮೆರವಣಿಗೆ ಹೊರಟ ಪ್ರತ್ಯೇಕ ಜಿಲ್ಲೆ ರಚನೆ ಹೋರಾಟ ಸಮಿತಿ ಕಾರ್ಯಕರ್ತರು ಹೊಸಪೇಟೆ ರಸ್ತೆ ಮಾರ್ಗವಾಗಿ ಪ್ರವಾಸಿಮಂದಿರ ವೃತ್ತ ಸಮೀಪಿಸುತ್ತಿದ್ದಂತೆಯೇ, ವಿಶೇಷ ಸ್ಥಾನಮಾನ ಸೇರ್ಪಡೆ ಹೋರಾಟ ಸಮಿತಿ ಕಾರ್ಯಕರ್ತರು ಸಹ ಅದೇ ಮೆರವಣಿಗೆಯಲ್ಲಿ ವಿಲೀನವಾದರು.ಪ್ರವಾಸಿಮಂದಿರ ವೃತ್ತದಲ್ಲಿ ಒಂದೇ ಮೆರವಣಿಗೆಯಲ್ಲಿ ವಿಲೀನವಾದ ಉಭಯ ಹೋರಾಟ ಸಮಿತಿ ಕಾರ್ಯಕರ್ತರು ಹೋರಾಟದ ವಿಷಯ ಮರೆತು ಸ್ವಪ್ರತಿಷ್ಠೆಗೆ ಇಳಿಯುವ ಮೂಲಕ ಹೋರಾಟದ ದಿಕ್ಕನ್ನು ತಪ್ಪಿಸಲಾಗುತ್ತದೆ ಎಂದು ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡರು.ಉಭಯ ಗುಂಪುಗಳು ಪರಸ್ಪರ ಒಂದೇ ಮೆರವಣಿಗೆಯಲ್ಲಿ ಆರೋಪ– ಪ್ರತ್ಯಾರೋಪ ಮಾಡುತ್ತಿದ್ದರೂ, ಪೊಲೀಸರು ನಿರ್ಲಿಪ್ತತತೆಯಿಂದ ನೋಡುತ್ತಿದ್ದರು. ಎರಡು ಪ್ರತ್ಯೇಕ ಪ್ರತಿಭಟನೆಗಳು ಒಂದೇ ವೇದಿಕೆಯಲ್ಲಿ ವಿಲೀನಗೊಳ್ಳಲು ಅವಕಾಶ ಮಾಡಿಕೊಟ್ಟ ಪೊಲೀಸರ ಕ್ರಮ ಖಂಡನೀಯ.ಒಂದು ವೇಳೆ ಉಭಯ ಬಣಗಳ ಪ್ರತಿಭಟನೆಗೆ ಅವಕಾಶ ನೀಡಿದ್ದರೂ, ಉಭಯ ಗುಂಪುಗಳು ಪರಸ್ಪರ ವಿಲೀನಗೊಳ್ಳದಂತೆ ಪ್ರತಿಭಟನೆಯನ್ನು ವಿಭಜಿಸಬಹುದಿತ್ತು. ಆದರೆ, ಅಂಥಹ ಯತ್ನಕ್ಕೆ ಕೈಹಾಕದ ಪೊಲೀಸರ ಕಾರ್ಯವೈಖರಿ ಕುರಿತು ಬೇಸರ ವ್ಯಕ್ತಡಿಸಿದರು ಟಿ.ಮಂಜುನಾಥ. ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಎಚ್‌.ಎಂ.ಮಹೇಶ್ವರಸ್ವಾಮಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry