ಶನಿವಾರ, ಏಪ್ರಿಲ್ 17, 2021
23 °C

ವಿಶ್ವಕನ್ನಡ ಗೀತಲಹರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಕನ್ನಡ ಸಮ್ಮೇಳನಕ್ಕೆ ‘ಲಹರಿ ರೆಕಾರ್ಡಿಂಗ್ ಕಂಪನಿ’ ವಿಶೇಷ ಕೊಡುಗೆಗಳನ್ನು ಸಿದ್ಧಪಡಿಸಿದೆ. ಮೊದಲನೆಯದು ಮೂರು ಸಾವಿರ ಹಾಡುಗಳನ್ನು ಒಳಗೊಂಡಿರುವ ಐವತ್ತು ಸೀಡಿಗಳ ಗೀತಗುಚ್ಛ. ಮತ್ತೊಂದು, ಐದು ಆಡಿಯೊ ಪುಸ್ತಕಗಳು.ತನ್ನಲ್ಲಿನ ಸುಮಾರು ಒಂದೂವರೆ ಲಕ್ಷ ಹಾಡುಗಳ ಕಣಜದಿಂದ ಮೂರು ಸಾವಿರ ಗೀತೆಗಳನ್ನು ಹೆಕ್ಕಿರುವ ‘ಲಹರಿ’, ಅವುಗಳನ್ನು ವಿಶೇಷ ಗುಚ್ಛದ ರೂಪದಲ್ಲಿ ಹೊರತಂದಿದೆ. ‘ಹಚ್ಚೇವು ಕನ್ನಡದ ದೀಪ’ ಹೆಸರಿನ ಈ ಗುಚ್ಛವನ್ನು ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ಬಿಡುಗಡೆ ಮಾಡಲು ಲಹರಿ ವೇಲು ಸಿದ್ಧತೆ ನಡೆಸಿದ್ದಾರೆ.ಗೀತೆಗೊಂದು ರೂಪಾಯಿ ಲೆಕ್ಕಾಚಾರದಲ್ಲಿ ಮೂರು ಸಾವಿರ ಹಾಡುಗಳ ಗುಚ್ಛಕ್ಕೆ 2999 ರೂಪಾಯಿಗಳನ್ನು ವೇಲು ಬಳಗ ಗೊತ್ತುಪಡಿಸಿದೆ. ಕನ್ನಡದ ಎಲ್ಲ ಮುಖ್ಯ ಕವಿಗಳ ಗೀತೆಗಳು ಮಾತ್ರವಲ್ಲದೆ, ಜಾನಪದ, ರಂಗಭೂಮಿ ಸೇರಿದಂತೆ ಹಲವು ಕಲಾಪ್ರಕಾರಗಳ ಗೀತೆಗಳೂ ಈ ಗುಚ್ಛದಲ್ಲಿ ಇರಲಿವೆ.‘ಲಹರಿ’ ಸಂಸ್ಥೆ ಹೊರತಂದಿರುವ ಆಡಿಯೊ ಪುಸ್ತಕಗಳಲ್ಲಿ ಯು.ಆರ್.ಅನಂತಮೂರ್ತಿ ಅವರ ‘ಸಂಸ್ಕಾರ’, ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಸುಬ್ಬಣ್ಣ ಮತ್ತು ಇತರ ಕಥೆಗಳು’, ಎಸ್.ಎಲ್.ಭೈರಪ್ಪ ಅವರ ‘ಧರ್ಮಶ್ರೀ’, ಚಂದ್ರಶೇಖರ ಕಂಬಾರರ ‘ಸಿಂಗಾರವ್ವ ಮತ್ತು ಅರಮನೆ’ ಹಾಗೂ ಸುಧಾ ನಾರಾಯಣಮೂರ್ತಿ ಅವರ ‘ಮನದ ಮಾತು’ ಸೇರಿವೆ. ಪ್ರತಿ ಆಡಿಯೊ ಪುಸ್ತಕದ ಬೆಲೆ 125 ರೂಪಾಯಿ. ಈ ಪುಸ್ತಕಗಳನ್ನು ಹೊರತರುವಲ್ಲಿ ಜೈ ಮಧುಕರ್ ಮತ್ತು ಜಯಶ್ರೀ ಎನ್ನುವ ಐಟಿ ಮಂದಿ ‘ ಲಹರಿ’ಗೆ ನೆರವಾಗಿದ್ದಾರೆ.

‘ಗಲ್ಲ’ ಆರಂಭ 

‘ಗಲ್ಲ’ ಚಿತ್ರಕ್ಕೆ ಮಾರ್ಚ್ 18ರಿಂದ ಚಿತ್ರೀಕರಣ ಆರಂಭವಾಗಲಿದೆ.  ಮಂಡ್ಯ, ಕೇರಳ, ಬೆಂಗಳೂರು, ಕುಲುಮನಾಲಿ, ಹೈದರಾಬಾದ್‌ನಲ್ಲಿ 60 ದಿನ ಚಿತ್ರೀಕರಣ ನಡೆಯಲಿದೆ. ಜಯಂತ್ ಈ ಚಿತ್ರದ ನಾಯಕ ಹಾಗೂ ನಿರ್ದೇಶಕ. ಶ್ವೇತಾ ನಾಯಕಿ. ಸುಹಾಸಿನಿ, ತಾರಾ, ರಂಗಾಯಣ ರಘು ಅಭಿನಯಿಸುತ್ತಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಪಿ.ಎಲ್.ರವಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಅನಿಲ್ ಕುಮಾರ್ ಸಂಭಾಷಣೆ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.