ವಿಶ್ವಕನ್ನಡ ಸಮ್ಮೇಳನ ಉದ್ಘಾಟನೆಗೆ ನಾರಾಯಣ ಮೂರ್ತಿ ನಕಾರ

7

ವಿಶ್ವಕನ್ನಡ ಸಮ್ಮೇಳನ ಉದ್ಘಾಟನೆಗೆ ನಾರಾಯಣ ಮೂರ್ತಿ ನಕಾರ

Published:
Updated:

ಬೆಳಗಾವಿ: ವಿಶ್ವಕನ್ನಡ ಸಮ್ಮೇಳನ ಉದ್ಘಾಟನೆಗೆ ಪ್ರಧಾನಿ, ರಾಷ್ಟ್ರಪತಿ ನಕಾರ ಸೂಚಿಸಿದ ನಂತರ ಈಗ ನಾರಾಯಣ ಮೂರ್ತಿ ಸರದಿ.ಸಮ್ಮೇಳನದ ಉದ್ಘಾಟನೆಗೆ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರನ್ನು ಆಮಂತ್ರಿಸಿದಾಗ ಅವರೂ ಒಪ್ಪಲಿಲ್ಲ ಎನ್ನಲಾಗಿದೆ.ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಬುಧವಾರ ವಿಶ್ವ ಕನ್ನಡ ಸಮ್ಮೇಳನ ಸಭೆಯಲ್ಲಿ ಮಾತನಾಡಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರು ಬರುತ್ತಾರೆ ಎಂದು ತಿಳಿಸಿದರು. ಆದರೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರ ಸಮ್ಮುಖದಲ್ಲಿ ಮಂಗಳವಾರ ನಗರದಲ್ಲಿ ನಡೆದ ಸಭೆಯ ಕಾಲಕ್ಕೆ ನಾರಾಯಣಮೂರ್ತಿ ಅವರು ಸಮ್ಮೇಳನಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಇಲಾಖೆಯ ನಿರ್ದೇಶಕ ಮನು ಬಳಿಗಾರ ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry