ವಿಶ್ವಕಪ್‌ಗೆ

7

ವಿಶ್ವಕಪ್‌ಗೆ

Published:
Updated:

ಜಾದೂಗಾರನ ಹಾರೈಕೆ

ಬೆಂಗಳೂರಿನ ಜಾದೂಗಾರ ಎಸ್. ಪಿ. ನಾಗೇಂದ್ರ ಪ್ರಸಾದ್ ಮತ್ತು ಅವರ ಪುತ್ರ ಅಭಿಲಾಷ್ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲಲೆಂದು ವಿಶೇಷ ಭಂಗಿಯಲ್ಲಿ ಹಾರೈಸಿದ್ದಾರೆ.ನಂದಿನಿಯಲ್ಲಿ

ರವಿಚಂದ್ರನ್ ಸಮೂಹದ ನಂದಿನಿ ಪ್ಯಾಲೇಸ್ ಮತ್ತು ನಂದನ ಪ್ಯಾಲೇಸ್ ಹೋಟೆಲ್‌ಗಳಲ್ಲಿ ವಿಶ್ವಕಪ್ ಕ್ರಿಕೆಟ್ ಹಿನ್ನೆಲೆಯಲ್ಲಿ ವಿಶೇಷ ಮೆನು ಸಿದ್ಧಪಡಿಸಲಾಗಿದೆ. ಅಲ್ಲದೇ ಈ ಹೋಟೆಲ್‌ಗಳಲ್ಲಿ ಬೃಹತ್ ಟಿವಿ ಪರದೆ ಇಡಲಾಗಿದೆ.

ಕೋರಮಂಗಲ, ಇಂದಿರಾನಗರ, ರಾಜಾಜಿನಗರ, ನ್ಯೂ ಬಿಇಎಲ್ ರಸ್ತೆ, ದೊಮ್ಮಲೂರು ಮತ್ತು ಕಮ್ಮನಹಳ್ಳಿಗಳಲ್ಲಿ ಇರುವ ನಂದಿನ ಮತ್ತು ನಂದನ ಹೋಟೆಲ್‌ಗಳಲ್ಲಿ  ಕ್ರಿಕೆಟ್ ನೋಡುತ್ತಲೇ ಊಟದ ಸವಿ ಸವಿಯಬಹುದು.ಸೈಕಲ್ ಅಗರ್‌ಬತ್ತಿ

ಸೈಕಲ್ ಪ್ಯೂರ್‌ಪ್ರತಿಷ್ಠಿತ ಅಗರಬತ್ತಿ ಬ್ರಾಂಡ್ ಸೈಕಲ್ ಪ್ಯೂರ್, ವಿಶ್ವಕಪ್‌ನಲ್ಲಿ ಭಾರತ ಗೆಲ್ಲಲಿ ಎಂದು ಹಾರೈಸಿ ‘ಪ್ರೇ ಫಾರ್ ಇಂಡಿಯಾ’ (ಭಾರತಕ್ಕಾಗಿ ಪ್ರಾರ್ಥಿಸಿ) ಆಂದೋಲನ ಹಮ್ಮಿಕೊಂಡಿದೆ. ಬೆಂಗಳೂರು ಸೇರಿ 100ಕ್ಕೂ ಹೆಚ್ಚು ನಗರಗಳಲ್ಲಿ ‘ಭಾರತಕ್ಕಾಗಿ ಪ್ರಾರ್ಥನೆ’ ಫಲಕ ಹೊತ್ತಿರುವ ಮೊಬೈಲ್ ವಾಹನ ಸಂಚರಿಸುತ್ತಿದೆ. ಪ್ರಮುಖ ನಗರಗಳಲ್ಲಿ ನಿಲ್ಲುವ ಈ ವಾಹನ, ಕ್ರಿಕೆಟ್ ಅಭಿಮಾನಿಗಳನ್ನು ಕರೆದು ಹಾರೈಕೆ ಬರೆಯುವಂತೆ ಹೇಳಲಿದೆ. ಅಗರಬತ್ತಿಯ ಸ್ಯಾಂಪಲ್ ಪಾಕೆಟ್‌ನ್ನು ವಿತರಿಸಲಿದೆ.ಬಾಸ್ಕಿನ್ ಅಂಡ್ ರಾಬಿನ್ಸ್

ವಿಶ್ವಕಪ್ ಪಂದ್ಯಗಳ ಖುಷಿ ಹೆಚ್ಚಿಸುವಂತೆ ‘ಬಾಸ್ಕಿನ್ ಅಂಡ್ ರಾಬಿನ್ಸ್’  ಪ್ರತಿ ಲಾರ್ಜ್ ಹ್ಯಾಂಡ್‌ಪ್ಯಾಕ್ ಆರ್ಡರ್ ಮಾಡಿದವರಿಗೆ ಒಂದು ಸ್ಮಾಲ್‌ಪ್ಯಾಕ್ ಉಚಿತವಾಗಿ ನೀಡುತ್ತಿದೆ. ಭಾರತ ವಿಶ್ವಕಪ್ ಪಂದ್ಯ ಆಡುವ ದಿನ ಮಾತ್ರ ಈ ಕೊಡುಗೆ ಲಭ್ಯ. ಅಲ್ಲದೇ ವಿಶ್ವಕಪ್ ಪಂದ್ಯಗಳ ಅನುಕ್ಷಣ ಆನಂದಿಸಲು ಬಯಸುವವರಿಗೆ ಹೋಮ್ ಡೆಲಿವರಿ ಸೌಲಭ್ಯ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry