ವಿಶ್ವಕಪ್‌ಗೆ ಸಜ್ಜಾಗಲು ವೇದಿಕೆ: ರಘುನಾಥ್‌

7

ವಿಶ್ವಕಪ್‌ಗೆ ಸಜ್ಜಾಗಲು ವೇದಿಕೆ: ರಘುನಾಥ್‌

Published:
Updated:

ನವದೆಹಲಿ (ಪಿಟಿಐ): ಹಾಲೆಂಡ್‌ನ ಹೇಗ್‌ನಲ್ಲಿ ನಡೆಯಲಿರುವ ವಿಶ್ವ ಕಪ್‌ ಹಾಕಿ ಟೂರ್ನಿಗೆ ಸಜ್ಜಾಗಲು ಹಾಗೂ ಹೊಸ ಕೌಶಲಗಳನ್ನು ರೂಢಿಸಿಕೊಳ್ಳಲು ವಿಶ್ವ ಲೀಗ್‌ ಫೈನಲ್‌ ಪ್ರಮುಖ ವೇದಿಕೆಯಾಗಿದೆ ಎಂದು ಅನುಭವಿ ಆಟಗಾರ ಕರ್ನಾಟಕದ ವಿ.ಆರ್‌. ರಘುನಾಥ್‌ ಅಭಿಪ್ರಾಯಪಟ್ಟಿದ್ದಾರೆ.ಭಾರತ ವಿಶ್ವ ಲೀಗ್‌ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಲೀಗ್‌ 10ರಿಂದ 18ರ ವರೆಗೆ ಮೇಜರ್‌ ಧ್ಯಾನಚಂದ್‌  ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯರು ಇಂಗ್ಲೆಂಡ್‌ ಎದುರು ಪೈಪೋಟಿ ನಡೆಸಲಿದ್ದಾರೆ. ಎಂಟು ರಾಷ್ಟ್ರಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.‘ವಿಶ್ವ ಲೀಗ್‌ನಲ್ಲಿ ಉತ್ತಮ ಪ್ರದ ರ್ಶನ ತೋರಿದರೆ, ವಿಶ್ವಕಪ್‌ ವೇಳೆಗೆ ನಮ್ಮ ಆಟದ ಸಾಮರ್ಥ್ಯ ಹೆಚ್ಚಾಗ ಲಿದೆ. ಇದರಿಂದ ಭಾರತದಲ್ಲಿ ಹಾಕಿ ವೈಭವವನ್ನು ಮರಳಿ ತರಲು ಸಾಧ್ಯವಾ ಗುತ್ತದೆ. ಜೊತೆಗೆ ಹಿರಿಯ ಆಟಗಾರರ ಜೊತೆ ಆಡಲು ಅವಕಾಶ ಸಿಗುತ್ತದೆ’ ಎಂದು ಕರ್ನಾಟಕದ ಇನ್ನೊಬ್ವ ಆಟಗಾರ ನಿಕಿನ್‌ ತಿಮ್ಮಯ್ಯ ಹೇಳಿದರು.ಟಿಕೆಟ್‌: ವಿಶ್ವ ಲೀಗ್‌ ಫೈನಲ್‌ ಪಂದ್ಯ ಗಳನ್ನು ನೋಡಲು ಒಲಿಂಪಿಯನ್‌ಗಳು ಮತ್ತು ಮಾಜಿ ಹಾಕಿ ಆಟಗಾರರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೀಂದರ್‌ ಬಾತ್ರಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry