ವಿಶ್ವಕಪ್‌ ಆರ್ಚರಿ: ಬೆಳ್ಳಿ ಗೆದ್ದ ದೀಪಿಕಾ ಕುಮಾರಿ

7

ವಿಶ್ವಕಪ್‌ ಆರ್ಚರಿ: ಬೆಳ್ಳಿ ಗೆದ್ದ ದೀಪಿಕಾ ಕುಮಾರಿ

Published:
Updated:

ಕೋಲ್ಕತ್ತ (ಪಿಟಿಐ): ಆರ್ಚರಿ ವಿಶ್ವಕಪ್‌ ಫೈನಲ್‌ನಲ್ಲಿ ಚಿನ್ನ ಗೆಲ್ಲಬೇ ಕೆಂಬ ಭಾರತದ ದೀಪಿಕಾ ಕುಮಾರಿ ಅವರ ಕನಸು ಈಡೇರಲಿಲ್ಲ.

ಪ್ಯಾರಿಸ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ದೀಪಿಕಾ ಕೊರಿಯಾದ ಒಲಿಂಪಿಕ್‌ ಚಾಂಪಿಯನ್‌ ಓಕ್‌ ಹೀ ಯೂನ್‌ ಕೈಯಲ್ಲಿ ಪರಾಭವ ಗೊಂಡರು.  ಉತ್ತಮ ಆರಂಭ ಪಡೆದಿದ್ದ ದೀಪಿಕಾ ಎದುರಾಳಿಯ ವಿರುದ್ಧ 3-1 ರಲ್ಲಿ ಮುನ್ನಡೆ ಪಡೆದಿದ್ದರು. ಬಳಿಕ ನಿಖರ ಗುರಿ ಹಿಡಿಯುವಲ್ಲಿ ವಿಫಲರಾಗಿ 4-6 ರಲ್ಲಿ ಸೋಲು ಅನುಭವಿಸಿದರು.

ದೀಪಿಕಾ 2011 ಮತ್ತು 2012 ರಲ್ಲಿ ಬೆಳ್ಳಿ ಜಯಿಸಿದ್ದರು. ಚಿನ್ನ ಗೆಲ್ಲಬೇಕೆಂಬ ಅವರ ಕನಸು ಈ ಬಾರಿಯೂ ನನಸಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry